ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆ ಒಂದು ದಿನ’ದ ರಾಜಕೀಯ ಕಥನ

Last Updated 15 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಅದು ‘ಆ ಒಂದು ದಿನ’ ಸಿನಿಮಾದ ಧ್ವನಿಸುರಳಿ ಬಿಡುಗಡೆ ಕಾರ್ಯಕ್ರಮ. ಅಲ್ಲಿ ಹಳೆ ಬೇರು ಹೊಸ ಚಿಗುರು ಎರಡೂ ಸೇರಿದ್ದವು. ಅಂದಹಾಗೆ ಆ ಕಾರ್ಯಕ್ರಮ ಆಯೋಜಿಸಲಾಗಿದ್ದ ಜಾಗದ ಹೆಸರು ಗ್ರೀನ್‌ ಹೌಸ್‌!.

ಹಳೆ ಬೇರು ಮತ್ತು ಹೊಸ ಚಿಗುರು ಎರಡೂ ಒಟ್ಟಿಗೇ ಸೇರಿದ್ದವು. ಪ್ರೊ. ದೊಡ್ಡರಂಗೇಗೌಡ ಅವರಂಥ ಚಿತ್ರರಂಗದ ಹಳೆ ಬೇರಿನ ಬಲದಲ್ಲಿ ಹೊಸಚಿಗುರಿನ ಚಿತ್ರತಂಡ ಸೇರಿತ್ತು.

‘ಇದು ಯುವಕರಲ್ಲಿ ಜಾಗೃತಿ ಮೂಡಿಸುವ ಸಿನಿಮಾ. ಮನಸ್ಸಿನೊಳಗೇ ನಡೆಯುವ ರಾಜಕೀಯ ಮತ್ತು ಅಭಿವೃದ್ಧಿಗಾಗಿ ನಡೆಸಬೇಕಾದ ಕಾರ್ಯಗಳು ಎರಡನ್ನೂ ತೋರಿಸಲಾಗಿದೆ. ಹಣ, ಹೆಂಡದ ಮೊರೆ ಹೋಗಿ ಮತ ಹಾಕಬೇಡಿ ಎಂಬ ಒಳ್ಳೆಯ ಸಂದೇಶವೂ ಈ ಚಿತ್ರದಲ್ಲಿದೆ’ ಎಂದರು ದೊಡ್ಡರಂಗೇಗೌಡ. ‘ಈ ಚಿತ್ರ ಎಲ್ಲ ವರ್ಗದವರನ್ನೂ ತಲುಪಲಿ’ ಎಂಬ ಹಾರೈಕೆಯನ್ನೂ ಮಾಡಿದರು. 

‘ಉತ್ತರ ಕರ್ನಾಟಕದ ದ್ರಾಕ್ಷಿ ಬೆಳೆಗಾರರಾದ ರವೀಂದ್ರಗೌಡ ಪಾಟೀಲ್‌ ಅವರಿಗೆ ಸಮಾಜವನ್ನು ಆವರಿಸಿರುವ ಕಾಯಿಲೆಗಳ ಬಗ್ಗೆ ತಿಳಿದಿದೆ’ ಎಂದು ಸೂಚ್ಯವಾಗಿ ಹೇಳಿದರು.

ಒಂದು ಹಳ್ಳಿಯಲ್ಲಿ ಎರಡು ಬಣಗಳ ನಡುವೆ ಇರುವ ಭಿನ್ನಾಭಿಪ್ರಾಯಗಳು ಏನೆಲ್ಲ ಅನಾಹುತಗಳಿಗೆ ಎಡೆಮಾಡಿಕೊಡುತ್ತದೆ ಎನ್ನುವುದೇ ಚಿತ್ರದ ತಿರುಳು. ನಿರ್ದೇಶಕ ಶ್ರೀಹರ್ಷಸಂಜಯ್ ಅವರು ಮೂರು ವರ್ಷ ಸಮಯ ತೆಗೆದುಕೊಂಡು ಈ ಚಿತ್ರವನ್ನು ಬರೆದು ನಿರ್ದೇಶಿಸಿದ್ದಾರೆ.

‘ಸಾಮಾಜಿಕ ಅರಿವು ಮೂಡಿಸುವಂಥ ಒಂದು ಹಾಡನ್ನು ವಿಜಯ ಪ್ರಕಾಶ್‌ ಹೇಳಿದ ಒಂದು ಹಾಡು, ಮತ್ತೆರಡು ಐಟಂ ಸಾಂಗ್‌ಗಳು ಚಿತ್ರದಲ್ಲಿವೆ. ಧಾರವಾಡ ಮೂಲದ ಆದರೆ ಈಗ ಬಾಂಬೆಯಲ್ಲಿ ಡಾನ್ಸರ್‌ ಆಗಿರುವ ಸಿಮ್ರನ್‌ ಚಿತ್ರದ ನಾಯಕಿ. ನಿರ್ದೇಶಕರೇ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT