ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವೈರ’ನಿಗೆ ವೈರಿಯಾದ ಬುಕ್‌ ಮೈ ಷೋ

Last Updated 15 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

‘ವೈರ ಸಿನಿಮಾದ ಬಗ್ಗೆ ಯಾವ ಪತ್ರಿಕೆಯವರೂ ನಕಾರಾತ್ಮಕ ವಿಮರ್ಶೆ ಬರೆದಿಲ್ಲ. ಹಾಗೆಯೇ ಬುಕ್‌ ಮೈ ಷೋದಲ್ಲಿಯೂ ಬಹುತೇಕ ಎಲ್ಲ ಸಕಾರಾತ್ಮಕ ಕಮೆಂಟ್ಸ್‌ಗಳೇ ಬಂದಿವೆ. ಆದರೆ ಅದು ನಮ್ಮ ಚಿತ್ರಕ್ಕೆ ನೀಡಿರುವ ರೇಟಿಂಗ್‌ ಮಾತ್ರ ಕಡಿಮೆ. ಬುಕ್‌ ಮೈ ಷೋ ಮಾಡುತ್ತಿರುವ ಈ ವಂಚನೆ ಹಲವು ಹೊಸ ಕನ್ನಡ ಸಿನಿಮಾಗಳನ್ನು ಕೊಲ್ಲುತ್ತಿದೆ. ಇದನ್ನು ಹೇಗಾದರೂ ಮಾಡಿ ನಿಲ್ಲಿಸಲೇಬೇಕು...’

ನವರಸನ್‌ ಕೊಂಚ ಕೋಪದಿಂದಲೇ ಮಾತನಾಡುತ್ತಿದ್ದರು. ಒಳ್ಳೇ ಸಿನಿಮಾ ಮಾಡಿದ್ದೇನೆ. ಆದರೆ ಟಿಕೆಟ್‌ ಬುಕ್‌ ಮಾಡುವ ಕಂಪೆನಿಯ ಕುತಂತ್ರದಿಂದ ಜನರಿಗೆ ತಪ್ಪು ಸಂದೇಶ ಹೋಗುತ್ತಿದೆ ಎಂಬ ಬೇಸರ ಅವರಲ್ಲಿತ್ತು.

ವೈರ ಸಿನಿಮಾ ಗೆಲುವಿನ ದಡ ಸೇರುತ್ತಿರುವ ಖುಷಿ ಮತ್ತು ಅದಕ್ಕೆ ಇರುವ ಅಡೆತಡೆಗಳು ಎರಡನ್ನೂ ಹಂಚಿಕೊಳ್ಳಲಿಕ್ಕಾಗಿಯೇ ಅವರು ಪತ್ರಿಕಾಗೋಷ್ಠಿ ಕರೆದಿದ್ದರು.

‘ನನ್ನ ಸಿನಿಮಾ ಆ ಎಲ್ಲ ತೊಂದರೆಗಳ ಮಧ್ಯವೂ ಚೆನ್ನಾಗಿ ಓಡುತ್ತಿದೆ. ಜನರು ಇಷ್ಟಪಟ್ಟು ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಆದರೆ ನನಗೆ ಆದ ತೊಂದರೆ ಇನ್ಯಾವುದೇ ಕನ್ನಡ ಸಿನಿಮಾಗಳಿಗೆ ಆಗಬಾರದು. ಆ ಕಾರಣಕ್ಕೆ ಈಗಾಗಲೇ ವಾಣಿಜ್ಯ ಮಂಡಳಿಯೊಂದಿಗೆ ಮಾತನಾಡಿದ್ದೇನೆ. ಹಾಗೆಯೇ ಮುಂಬೈನಲ್ಲಿರುವ ಬುಕ್‌ ಮೈ ಷೋ ಕಂಪೆನಿಯನ್ನು ಸಂಪರ್ಕಿಸಿದ್ದೇನೆ. ಕೆಲವು ಕಿಡಿಗೇಡಿ ಹ್ಯಾಕರ್ಸ್‌ಗಳಿಂದ ಹೀಗೆ ರೇಟಿಂಗ್‌ನಲ್ಲಿ ವಂಚನೆ ನಡೆಯುತ್ತಿದೆ. ಇದನ್ನು ನಿಲ್ಲಿಸಲು ಏನು ಬೇಕೊ ಅದನ್ನು ಮಾಡುತ್ತೇನೆ. ವಾಣಿಜ್ಯ ಮಂಡಳಿ ಹೊಸ ಆ್ಯಪ್‌ ಒಂದನ್ನು ತರುವ ಆಲೋಚನೆ ಮಾಡುತ್ತಿದೆ. ಅದು ಸಾಧ್ಯವಾಗಿಲ್ಲ ಎಂದರೆ ನಾನೇ ಒಂದು ಸ್ವಂತ ಆ್ಯಪ್‌ ರೂಪಿಸುತ್ತೇನೆ’ ಎಂದೂ ನವರಸನ್‌ ಹೇಳಿದರು. ಜತೆಗೆ ವೈರ ಸಿನಿಮಾವನ್ನು ಮೆಚ್ಚಿ ಪ್ರೋತ್ಸಾಹಿಸುತ್ತಿರುವ ಜನರಿಗೆ ಕೃತಜ್ಞತೆ ಹೇಳಲು ಅವರು ಮರೆಯಲಿಲ್ಲ.

ಕಳೆದ ವಾರ ಬಿಡುಗಡೆಯಾದ ‘ವೈರ’ ನವರಸನ್‌ ಅವರ ನಿರ್ದೇಶನದ ಮೊದಲ ಸಿನಿಮಾ. ಅವರೇ ಈ ಚಿತ್ರದ ನಾಯಕನಾಗಿ ನಟಿಸಿದ್ದಾರೆ. ಪ್ರಿಯಾಂಕಾ ಮಲ್ನಾಡ್‌ ನಾಯಕಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT