ಸೋಮವಾರ, ಸೆಪ್ಟೆಂಬರ್ 16, 2019
21 °C

ಮಳೆ ಹೊಣೆಯಲ್ಲ

Published:
Updated:

ವಿಪರೀತ ಮಳೆಯಾಗಿ ಅವಘಡ ಸಂಭವಿಸಿದಾಗ ‘ವರುಣನ ಅವಕೃಪೆ, ಮಳೆಯ ಅಬ್ಬರ, ಮಳೆಗೆ ಬಲಿ’ ಎಂದೆಲ್ಲ ದೊಡ್ಡ ಸುದ್ದಿಯಾಗುತ್ತದೆ. ಆದರೆ ಮಳೆಯಿಂದ ಸಾವು- ನೋವಾದರೆ ಅದಕ್ಕೆ ಕಾರಣ ನಮ್ಮ ಸರ್ಕಾರವೇ ವಿನಾ ಮಳೆಯಲ್ಲ.

ನೀರು ಹರಿಯುವ ಜಾಗವನ್ನು ಅತಿಕ್ರಮಣ ಮಾಡಿ, ಅನಧಿಕೃತವಾಗಿ ಕಟ್ಟಡ ನಿರ್ಮಿಸಿದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವ ಬದಲು ಅಂಥವರಿಗೆ ಪ್ರೋತ್ಸಾಹ ನೀಡಿದ ಸರ್ಕಾರವೇ ಎಲ್ಲ ಅನಾಹುತಗಳಿಗೆ ನೇರ ಹೊಣೆ. ಅಕ್ರಮ- ಸಕ್ರಮ ಯೋಜನೆಯ ಅನ್ವಯ ಒತ್ತುವರಿದಾರರಿಂದ ದಂಡ ವಸೂಲಿ ಮಾಡಿ ಬೀಗಿದ ಸರ್ಕಾರಕ್ಕೆ ಹೋದ ಜೀವಗಳನ್ನು ಮರಳಿ ತರುವ ಶಕ್ತಿ ಇದೆಯೇ?

ಪಿ.ಜೆ.ರಾಘವೇಂದ್ರ, ಮೈಸೂರು

Post Comments (+)