ಭಾನುವಾರ, ಸೆಪ್ಟೆಂಬರ್ 15, 2019
23 °C
ಲಿಂಗಾಯತ ಸ್ವತಂತ್ರ ಧರ್ಮ ಹೋರಾಟ

ಬಿಜೆಪಿ ಮುಖಂಡರ ಸಹಮತ: ಮೃತ್ಯುಂಜಯ ಸ್ವಾಮೀಜಿ

Published:
Updated:

ಹುಬ್ಬಳ್ಳಿ: ‘ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ನಡೆಯುತ್ತಿರುವ ಹೋರಾಟದಲ್ಲಿ ಬಿಜೆಪಿ ಮುಖಂಡರು ನೇರವಾಗಿ ಭಾಗವಹಿಸದೇ ಇದ್ದರೂ, ಹೋರಾಟಕ್ಕೆ ಅವರ ಸಂಪೂರ್ಣ ಸಹಮತವಿದೆ’ ಎಂದು ಕೂಡಲಸಂಗಮದ ಪಂಚಮಸಾಲಿಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

‘ಬಿಜೆಪಿಯ ಆಂತರಿಕ ಸಿದ್ಧಾಂತ, ಪಕ್ಷದ ಆದೇಶದ ಕಾರಣ ಲಿಂಗಾಯತ ಮುಖಂಡರು ಹೋರಾಟದಲ್ಲಿ ನೇರವಾಗಿ ಭಾಗವಹಿಸುತ್ತಿಲ್ಲ. ಆದರೆ, ಅವರ ಬೆಂಬಲಿಗರು ಇಲ್ಲಿಯವರೆಗೆ ನಡೆದ ರ‍್ಯಾಲಿಗಳಲ್ಲಿ ಭಾಗವಹಿಸಿದ್ದಾರೆ’ ಎಂದು ಭಾನುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಲಿಂಗಾಯತ ಸ್ವತಂತ್ರ ಧರ್ಮ ಹೋರಾಟದ ಅಂಗವಾಗಿ ಬೆಂಗಳೂರಿನಲ್ಲಿ ಡಿ.10ಕ್ಕೆ ನಡೆಯುವ ರಾಷ್ಟ್ರೀಯ ರ‍್ಯಾಲಿಯಲ್ಲಿ ಬಿಜೆಪಿಯಲ್ಲಿರುವ ಲಿಂಗಾಯತ ಮುಖಂಡರು  ಭಾಗವಹಿಸುವ ವಿಶ್ವಾಸವಿದೆ’ ಎಂದು ಹೇಳಿದರು.

ಖಡ್ಗ ತರಲು ಒತ್ತಾಯ:

ಕನ್ನಡಿಗರ ಸ್ವಾಭಿಮಾನದ ಪ್ರತೀಕವಾದ ಕಿತ್ತೂರು ರಾಣಿ ಚನ್ನಮ್ಮನ ಖಡ್ಗವನ್ನು ಇಂಗ್ಲೆಂಡ್‌ನಿಂದ ತರುವ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು’ ಎಂದು ಸ್ವಾಮೀಜಿ ಒತ್ತಾಯಿಸಿದರು.

Post Comments (+)