ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಲ್ಲೂರಿನಲ್ಲಿ 18 ಸೆಂ.ಮೀ. ಮಳೆ

Last Updated 15 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಭಾನುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಮಳೆಯಾಗಿದೆ.

ಕೊಲ್ಲೂರಿನಲ್ಲಿ 18, ಕೋಟ, ಕಾರ್ಕಳದಲ್ಲಿ ತಲಾ 13, ಮೂಡುಬಿದಿರೆ, ಕುಂದಾಪುರದಲ್ಲಿ ತಲಾ 10, ಹೊಸಕೋಟೆಯಲ್ಲಿ 9, ಶ್ರವಣಬೆಳಗೊಳದಲ್ಲಿ 8, ಹಾವೇರಿ, ರಾಣೆಬೆನ್ನೂರು, ಬರಗೂರಿನಲ್ಲಿ ತಲಾ 7 ಸೆಂ.ಮೀ. ಮಳೆ ಸುರಿದಿದೆ.

ಹುಂಚದಕಟ್ಟೆಯಲ್ಲಿ 6, ಧರ್ಮಸ್ಥಳ, ಮಲೆಮಹದೇಶ್ವರ ಬೆಟ್ಟ, ದಾವಣಗೆರೆ, ಕನಕಪುರದಲ್ಲಿ ತಲಾ 5, ಹೊನ್ನಾವರ, ಕಾರವಾರ, ಯಳಂದೂರು, ಮದ್ದೂರು, ಬೆಂಗಳೂರು, ರಾಮನಗರದಲ್ಲಿ ತಲಾ 4, ಮೂಲ್ಕಿ, ಹುಬ್ಬಳ್ಳಿ, ಗದಗ, ನರಗುಂದ, ಮುದಗಲ್‌, ಅರಕಲಗೂಡು, ಆಲೂರು, ನೆಲಮಂಗಲ, ಚಿತ್ರದುರ್ಗ, ಭರಮಸಾಗರ, ಹಿರಿಯೂರಿನಲ್ಲಿ ತಲಾ 3 ಸೆಂ.ಮೀ. ಮಳೆ ಬಿದ್ದಿದೆ.

ಕುಮಟಾ, ಬನವಾಸಿ, ಅಥಣಿ, ಧಾರವಾಡ, ಡಂಬಳ, ದುದ್ದ, ಅರಸಿಕೆರೆ, ಮಳವಳ್ಳಿ, ಹೆಸರಘಟ್ಟ, ಉಚ್ಚಂಗಿದುರ್ಗ, ತಿಪಟೂರು, ಮಧುಗಿರಿ, ಬುಕ್ಕಪಟ್ಟಣ, ಸಿರಾ, ಪಾವಗಡದಲ್ಲಿ ತಲಾ 2, ಯಲ್ಲಾಪುರ, ಚಿಕ್ಕೋಡಿ, ಕಲಘಟಗಿ, ಯಲಬುರ್ಗಾ, ಲೋಕಾಪುರ, ತಾಳಗುಪ್ಪ, ಶೃಂಗೇರಿ, ಚನ್ನರಾಯಪಟ್ಟಣ, ಹೊನಕೆರೆ, ಸಂತೆಬೆನ್ನೂರು, ಚಿಂತಾಮಣಿ, ತುಮಕೂರು, ಹುಲಿಯೂರುದುರ್ಗ, ಮಾಗಡಿಯಲ್ಲಿ ತಲಾ 1 ಸೆಂ.ಮೀ. ಮಳೆಯಾಗಿದೆ.

ಕಲಬುರ್ಗಿಯಲ್ಲಿ 33.3 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಉಷ್ಣಾಂಶ ಹಾಗೂ ಚಾಮರಾಜನಗರದಲ್ಲಿ 19.2 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಹವಾಮಾನ ಮುನ್ಸೂಚನೆ: ಮುಂದಿನ 48 ಗಂಟೆಗಳಲ್ಲಿ ರಾಜ್ಯದ ಕೆಲವು ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT