ಆಗ್ನೇಯ ರೈಲ್ವೆ: ಕಾಯ್ದಿರಿಸುವಿಕೆ ಚಾರ್ಟ್ ಇನ್ನು ಇಲ್ಲ

ಸೋಮವಾರ, ಮೇ 27, 2019
24 °C

ಆಗ್ನೇಯ ರೈಲ್ವೆ: ಕಾಯ್ದಿರಿಸುವಿಕೆ ಚಾರ್ಟ್ ಇನ್ನು ಇಲ್ಲ

Published:
Updated:

ಕೋಲ್ಕತ್ತ: ರೈಲ್ವೆ ಬೋಗಿಗಳ ಮೇಲೆ ಕಾಯ್ದಿರಿಸುವಿಕೆ ಪಟ್ಟಿಯನ್ನು ಅಂಟಿಸುವ ಪರಿಪಾಠ ಇನ್ನುಮುಂದೆ ಇಲ್ಲವಾಗಲಿದೆ. ಸೋಮವಾರದಿಂದ (ಅ.16) ಈ ಪದ್ಧತಿಯನ್ನು ನಿಲ್ಲಿಸಲಾಗುತ್ತಿದೆ ಎಂದು ಆಗ್ನೇಯ ರೈಲ್ವೆಯ ವಕ್ತಾರ ಸಂಜಯ್ ಘೋಷ್ ತಿಳಿಸಿದ್ದಾರೆ. ಹೌರಾದಿಂದ ಹೊರಡುವ ರೈಲುಗಳಲ್ಲಿ ಈ ಸೌಲಭ್ಯ ಇನ್ನು ಇರುವುದಿಲ್ಲ.ಬೋಗಿಗಳ ಹೊರಗಿನ ಭಾಗವನ್ನು ಸ್ವಚ್ಛವಾಗಿಡುವುದು, ಕಾಗದವನ್ನು ಉಳಿಸುವ ಮೂಲಕ ರೈಲ್ವೆಯನ್ನು ಪರಿಸ್ನರ ಸ್ನೇಹಿಯಾಗಿಸುವ ಉದ್ದೇಶ ಇದರ ಹಿಂದಿದೆ ಎಂದು ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry