7

ಪ್ರಶ್ನೋತ್ತರ

Published:
Updated:
ಪ್ರಶ್ನೋತ್ತರ

1. ವಿಶ್ವದಲ್ಲಿ ಅತಿ ಹೆಚ್ಚು ಜನಸಾಂದ್ರತೆ ಇರುವ ದೇಶ ಹಾಗೂ ಅತಿ ಕಡಿಮೆ ಜನಸಾಂದ್ರತೆ ಇರುವ ದೇಶಗಳನ್ನು ಗುರುತಿಸಿ?

a) ಚೀನಾ-ಫಿನ್‌ಲ್ಯಾಂಡ್‌

b) ಭಾರತ-ಸಿರಿಯಾ

c) ಮೊನ್ಯಾಕೊ-ಮಂಗೋಲಿಯಾ

d) ಬ್ರೆಜಿಲ್-ಇಂಡೋನೇಷ್ಯಾ

2. ಪ್ರಾಚೀನ ನಾಗರಿಕತೆಗಳಲ್ಲಿ ಒಂದಾಗಿರುವ ಮೆಸಪಟೋಮಿಯ ಇಂದಿನ ಯಾವ ದೇಶದ ಪುರಾತನ ಹೆಸರಾಗಿದೆ?

a) ಇರಾಕ್

b) ಇರಾನ್

c) ಈಜಿಪ್ಟ್‌

d) ಗ್ರೀಕ್

3. ವಿಶ್ವದಲ್ಲೇ ಅತಿ ಉದ್ದನೆಯ ಕರಾವಳಿ ತೀರವನ್ನು ಹೊಂದಿರುವ ದೇಶವನ್ನು ಈ ಕೆಳಕಂಡವುಗಳಲ್ಲಿ ಗುರುತಿಸಿ.

a) ಕೆನಡಾ

b) ಚೀನಾ

c) ಭಾರತ

d) ಅಮೆರಿಕ

4. ಈ ಕೆಳಕಂಡ ಯಾವ ದೇಶ ತನ್ನ ಧ್ವಜದ ಮೇಲೆ ತನ್ನದೇ ದೇಶದ ಭೂಪಟವನ್ನು ಹೊಂದಿದೆ?

a) ಲಿಬಿಯಾ

b) ಪೆರು

c) ದಕ್ಷಿಣಾ ಸೂಡಾನ್

d) ಸಿಪ್ರಸ್

5. ಭಾರತದ ಅತಿ ದೊಡ್ಡ ಸರೋವರ ಯಾವುದು ಹಾಗೂ ಇದು ಯಾವ ರಾಜ್ಯದಲ್ಲಿ ಇದೆ?

a) ಚಿಲ್ಕಾ ಸರೋವರ-ಒಡಿಶಾ

b) ಪುಲಿಕಾಟ್ ಸರೋವರ-ಆಂಧ್ರಪ್ರದೇಶ

c) ಗಂಗಾ ಸರೋವರ-ಉತ್ತರಪ್ರದೇಶ

d) ಕಾವೇರಿ ಸರೋವರ-ಕರ್ನಾಟಕ

6. ಕರ್ನಾಟಕದ ಯಾವ ಜಿಲ್ಲೆಯಲ್ಲಿ ಅತಿ ಹೆಚ್ಚು ಮ್ಯಾಂಗನೀಸ್ ಉತ್ಪಾದನೆಯನ್ನು ಮಾಡಲಾಗುತ್ತದೆ?

a) ಚಿತ್ರದುರ್ಗ

b) ಬಳ್ಳಾರಿ

c) ಯಾದಗಿರಿ

d) ಚಿಕ್ಕಬಳ್ಳಾಪುರ

7. ಭಾರತದ ಅತಿ ಉದ್ದವಾದ ರೈಲು ಮಾರ್ಗ ಯಾವುದು ಹಾಗೂ ಈ ರೈಲುಮಾರ್ಗದಲ್ಲಿ ಸಂಚರಿಸುವ ರೈಲಿನ ಹೆಸರನ್ನು ಕ್ರಮವಾಗಿ ಗುರುತಿಸಿ?

a) ಬೆಂಗಳೂರು-ಲಡಾಕ್/ ಕರ್ನಾಟಕ ಎಕ್ಸ್‌ಪ್ರೆಸ್‌

b) ಮುಂಬೈ-ಕೋಲ್ಕತ್ತಾ/ ವೈಷ್ಣವಿಎಕ್ಸ್‌ಪ್ರೆಸ್‌

c) ಕನ್ಯಾಕುಮಾರಿ-ಜಮ್ಮುತಾವಿ/ಹಿಮಸಾಗರ ಎಕ್ಸ್‌ಪ್ರೆಸ್‌

d) ದೆಹಲಿ-ತಿರುವನಂತಪುರ/ರಾಜಧಾನಿ ಎಕ್ಸ್‌ಪ್ರೆಸ್‌

8. ಅತಿ ಹೆಚ್ಚು ಉದ್ದವಾದ ರಾಷ್ಟ್ರೀಯ ಹೆದ್ದಾರಿ ಈ ಕೆಳಕಂಡ ಯಾವ ರಾಜ್ಯದಲ್ಲಿ ಹಾದು ಹೋಗಿದೆ?

a) ಮಧ್ಯಪ್ರದೇಶ

b) ಉತ್ತರಪ್ರದೇಶ

c) ತಮಿಳುನಾಡು

d) ಮಹಾರಾಷ್ಟ್ರ

9. ಈ ಕೆಳಕಂಡ ಬಂದರುಗಳಲ್ಲಿ ಭಾರತದ ಅತಿ ಆಳವಾದ ಬಂದರು ಮತ್ತು ದೊಡ್ಡ ಬಂದರನ್ನು ಗುರುತಿಸಿ?

a) ವಿಶಾಖಪಟ್ಟಣ-ಬಾಂಬೆ (ಮುಂಬೈ)

b) ಕೋಲ್ಕತ್ತಾ-ಕೊಚ್ಚಿನ್

c) ಕಾಂಡ್ಲಾ-ಪಾರಾದೀಪ್

d) ಕೊಚ್ಚಿನ್-ಮಂಗಳೂರು

10. ಭಾರತದಲ್ಲಿ ವಾಯುಸಾರಿಗೆ ಆರಂಭವಾದ ವರ್ಷ ಮತ್ತು ನಾಗರಿಕ ವಿಮಾನಯಾನ ಇಲಾಖೆ ಸ್ಥಾಪನೆಯಾದ ವರ್ಷವನ್ನು ಕ್ರಮವಾಗಿ ಗುರುತಿಸಿ?

a) 1901-1917

b) 1911-1927

c) 1921-1937

d) 1931-1978

*

ಉತ್ತರಗಳು 1-c, 2-a, 3- a, 4-d, 5-a, 6-b, 7-c, 8-d, 9-a, 10-b.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry