ಇಂಡೊ–ಟಿಬೆಟಿಯನ್ ಪೊಲೀಸ್‌ ಪಡೆಗೆ ಸಶಸ್ತ್ರ ತುಕಡಿ

ಬುಧವಾರ, ಮೇ 22, 2019
24 °C

ಇಂಡೊ–ಟಿಬೆಟಿಯನ್ ಪೊಲೀಸ್‌ ಪಡೆಗೆ ಸಶಸ್ತ್ರ ತುಕಡಿ

Published:
Updated:
ಇಂಡೊ–ಟಿಬೆಟಿಯನ್ ಪೊಲೀಸ್‌ ಪಡೆಗೆ ಸಶಸ್ತ್ರ ತುಕಡಿ

ನವದೆಹಲಿ: ಇಂಡೊ ಟಿಬೆಟಿಯನ್ ಗಡಿ ಪೊಲೀಸ್ ಪಡೆಯಲ್ಲಿ (ಐಟಿಬಿಪಿ) ಶಕ್ತಿಯುತ ವಾಹನಗಳ ತುಕಡಿ ಮತ್ತು ಸಶಸ್ತ್ರ ತುಕಡಿಯನ್ನು ಆರಂಭಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಭಾರತೀಯ ಸೇನೆಯ ಭಾಗವಲ್ಲದ ಮತ್ತು ಗಡಿ ಕಾವಲು ಪಡೆಯಾದ ಐಟಿಬಿಪಿಯಲ್ಲಿ ಸೇನಾ ತುಕಡಿಗಳಿಗೆ ಸರಿಸಮನಾದ ತುಕಡಿಗಳನ್ನು ಆರಂಭಿಸುತ್ತಿರುವುದು ಇದೇ ಮೊದಲು. ಭಾರತ–ಪಾಕ್ ಗಡಿಯ ಕಾವಲು ನಿರ್ವಹಿಸುತ್ತಿರುವ ಗಡಿ ಭದ್ರತಾ ಪಡೆಯಲ್ಲಿ (ಬಿಎಸ್‌ಎಫ್) ಮಾತ್ರ ಒಂದು ಫಿರಂಗಿ ತುಕಡಿ ಇದೆ.

ಭಾರತ–ಚೀನಾ ಗಡಿಯಲ್ಲಿ ಎರಡೂ ದೇಶಗಳ ನಡುವೆ ಸಂಘರ್ಷ ಉಂಟಾದಲ್ಲಿ ಅಂತಹ ಸ್ಥಳಕ್ಕೆ ಸೇನಾ ಸಿಬ್ಬಂದಿಯನ್ನು ತ್ವರಿತವಾಗಿ ಸಾಗಿಸಲು ಶಕ್ತಿಯುತ ವಾಹನಗಳ ತುಕಡಿಯ ಅವಶ್ಯಕತೆ ಇದೆ. ಜತೆಗೆ ಸೇನಾ ಸಿಬ್ಬಂದಿ ಸಂಘರ್ಷದ ಸ್ಥಳ ತಲುಪುವುದಕ್ಕೂ ಮುನ್ನ ಎದುರಾಳಿ ಪಡೆಗೆ ತುರ್ತು ಪ್ರತಿಕ್ರಿಯೆ ನೀಡಲು ಗಡಿ ಪೊಲೀಸ್ ಪಡೆಯಲ್ಲಿ ಸಶಸ್ತ್ರ ತುಕಡಿಯ ಅವಶ್ಯಕತೆ ಇದೆ. ದೋಕಲಾದಲ್ಲಿ ಚೀನಾ ಸೇನೆ ಜತೆಗಿನ ಸಂಘರ್ಷದ ಪರಿಣಾಮ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.* ಐಟಿಬಿಪಿಯ ಮಹಾ ನಿರ್ದೇಶಕರು, ಸರ್ಕಾರದ ಮುಂದೆ ಇಂತಹ ಪ್ರಸ್ತಾವ ಇರಿಸಿದ್ದರು

* ಗೃಹ ಸಚಿವಾಲಯ ಮತ್ತು ರಕ್ಷಣಾ ಸಚಿವಾಲಯಗಳು ಪರಸ್ಪರ ಸಮಾಲೋಚಿಸಿ ಪ್ರಸ್ತಾವಕ್ಕೆ ಒಪ್ಪಿಗೆ ಸೂಚಿಸಿವೆ

* ಐಟಿಬಿಪಿಯಲ್ಲಿರುವ ಶಸ್ತ್ರಾಸ್ತ್ರಗಳ ಆಧುನೀಕರಣ ಮತ್ತು 81 ಎಂ.ಎಂ. ಮಾರ್ಟರ್ ಷೆಲ್ ಲಾಂಚರ್‌ಗಳನ್ನು ಖರೀದಿಸಲು ಒಪ್ಪಿಗೆ ದೊರೆತಿದೆ

* ಕಳೆದ ವರ್ಷವೇ 150 ಶಕ್ತಿಯುತ ಎಸ್‌ಯುವಿಗಳ ಖರೀದಿಗೆ ಅನುಮೋದನೆ ದೊರೆತಿತ್ತು. ಅವುಗಳಲ್ಲಿ 60 ಎಸ್‌ಯುವಿಗಳು ಈಗಾಗಲೆ ಸೇವೆಯಲ್ಲಿವೆ

* ಐದು ಸ್ನೋ–ಸ್ಕೂಟರ್‌ ಈಗಾಗಲೇ ಸೇವೆಯಲ್ಲಿವೆಎಸ್‌ಯುವಿ

ನಾಲ್ಕೂ ಚಕ್ರಗಳಿಗೂ ಎಂಜಿನ್‌ ಶಕ್ತಿ ರವಾನೆಯಾಗುವ ಸವಲತ್ತು (ಫೋರ್‌ ವ್ಹೀಲ್ ಡ್ರೈವ್) ಇರುವ ಸ್ಪೋರ್ಟ್‌ ಯುಟಿಲಿಟಿ ವೆಹಿಕಲ್‌ಗಳು (ಎಸ್‌ಯುವಿ) ಕಡಿದಾದ ಮತ್ತು ಇಕ್ಕಟ್ಟಾದ ಸ್ಥಳಗಳಲ್ಲೂ ವೇಗವಾಗಿ ಚಲಿಸುವ ಸಾಮರ್ಥ್ಯ ಹೊಂದಿರುತ್ತವೆ. ದೊಡ್ಡ ಸೇನಾ ಟ್ರಕ್‌ಗಳು ಸಂಚರಿಸಲು ಸಾಧ್ಯವಾಗದ ಸ್ಥಳಗಳಲ್ಲಿ ಇವುಗಳ ಬಳಕೆಯಿಂದ ಗಡಿ ಪಡೆ ಸಿಬ್ಬಂದಿಯ ತ್ವರಿತ ಸಾಗಾಟಕ್ಕೆ ಅನುಕೂಲ ವಾಗಲಿದೆ. ಈಗಾಗಲೇ 60 ಎಸ್‌ಯುವಿಗಳನ್ನು ಭಾರತ–ಚೀನಾ ಗಡಿಯಲ್ಲಿ ಗಸ್ತು ಮತ್ತು ಸಿಬ್ಬಂದಿ ಓಡಾಟಕ್ಕೆ ಬಳಸಲಾಗುತ್ತಿದೆ.ಎಟಿವಿ

ಎಸ್‌ಯುವಿಗಳಿಗಿಂತಲೂ ಚಿಕ್ಕದಾದ ಮತ್ತು ಕೆಸರು, ಕಲ್ಲುಬಂಡೆ, ಮರಳು ಮತ್ತು ಹಿಮದ ಮೇಲೂ ಸಂಚರಿಸುವ ಸಾಮರ್ಥ್ಯವಿರುವುದರಿಂದ ಇವನ್ನು ಆಲ್‌ ಟೆರೇನ್ ವೆಹಿಕಲ್ (ಎಟಿವಿ) ಎಂದು ಕರೆಯಲಾಗುತ್ತದೆ. ಇದರಲ್ಲಿ ಒಬ್ಬರು ಮತ್ತು ಇಬ್ಬರು ಸಂಚರಿಸಲು ಅವಕಾಶವಿರುತ್ತದೆ. ಗಡಿಯಲ್ಲಿ ಗಸ್ತು ತಿರುಗಲು ಮತ್ತು ತ್ವರಿತ ಓಡಾಟಕ್ಕೆ ಇದರಿಂದ ಅನುಕೂಲವಾಗಲಿದೆ.ಸ್ನೋ–ಸ್ಕೂಟರ್

ಹಿಮದ ಮೇಲೆ ವೇಗದ ಚಾಲನೆ ಸಾಧ್ಯವಾಗುವಂತೆ ಇವುಗಳನ್ನು ರೂಪಿಸಲಾಗಿರುತ್ತದೆ. ಗರಿಷ್ಠ ಇಬ್ಬರು ಸಂಚರಿಸಬಹುದು. ಗಡಿಯಲ್ಲಿ ಗಸ್ತು ತಿರುಗಲು ಮತ್ತು ತ್ವರಿತ ಓಡಾಟಕ್ಕೆ ಇದರಿಂದ ಅನುಕೂಲವಾಗಲಿದೆ. ಸಮುದ್ರಮಟ್ಟದಿಂದ 12,000 ಅಡಿ ಎತ್ತರದಲ್ಲಿರುವ 50 ಗಡಿ ಠಾಣೆಗಳಲ್ಲಿ ಮತ್ತು 12,000 ಅಡಿ 30 ಗಡಿ ಠಾಣೆಗಳಲ್ಲಿ ತಲಾ ಒಂದೊಂದು ಸ್ನೋ–ಸ್ಕೂಟರ್‌ ಇರಲಿವೆ.ಎಕ್ಸವೇಟರ್‌

ತುರ್ತು ಸಂದರ್ಭದಲ್ಲಿ ರಸ್ತೆಗಳನ್ನು ನಿರ್ಮಿಸಲು ಮತ್ತು ಭೂ–ಹಿಮ ಕುಸಿತದ ಸಂದರ್ಭಗಳಲ್ಲಿ ರಸ್ತೆಗಳಲ್ಲಿ ಅಡಚಣೆ ತೆರವು ಮಾಡಲು ಇಂತಹ ಎಕ್ಸವೇಟರ್‌ಗಳನ್ನು ಸೇನೆ ಬಳಸುತ್ತದೆ. ಇಂತಹ ಹಲವು ಎಕ್ಸವೇಟರ್‌ಗಳನ್ನು ಖರೀದಿಸಲು ಐಟಿಬಿಪಿಗೆ ಅನುಮೋದನೆ ದೊರೆತಿದೆ.ಶಕ್ತಿಯುತ ವಾಹನಗಳ ತುಕಡಿ

250 ಶಕ್ತಿಯುತ ವಾಹನಗಳ ಖರೀದಿಗೆ ಅನುಮೋದನೆ ದೊರೆತಿದೆ. ಇನ್ನು ಕೆಲವೇ ತಿಂಗಳಲ್ಲಿ ಈ ವಾಹನಗಳು ಐಟಿಬಿಪಿಯ ಸೇವೆಗೆ ನಿಯೋಜನೆ ಆಗಲಿವೆ

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry