ಬೆಂಕಿ ಹತ್ತಿಕೊಂಡ ಕಾರಿನಲ್ಲಿದ್ದ ಭಾರತೀಯ ಮಹಿಳೆ ಸಾವು

ಗುರುವಾರ , ಜೂನ್ 20, 2019
26 °C

ಬೆಂಕಿ ಹತ್ತಿಕೊಂಡ ಕಾರಿನಲ್ಲಿದ್ದ ಭಾರತೀಯ ಮಹಿಳೆ ಸಾವು

Published:
Updated:
ಬೆಂಕಿ ಹತ್ತಿಕೊಂಡ ಕಾರಿನಲ್ಲಿದ್ದ ಭಾರತೀಯ ಮಹಿಳೆ ಸಾವು

ನ್ಯೂಯಾರ್ಕ್‌: 25 ವರ್ಷ ವಯಸ್ಸಿನ ಭಾರತೀಯ ಸಂಜಾತೆ ಹರ್ಲೀನ್‌ ಗ್ರೆವಾಲ್‌ ಕಾರು ಅಪಘಾತದ ನಂತರ ಉಂಟಾದ ಬೆಂಕಿಯಲ್ಲಿ ಸುಟ್ಟು ಕರಕಲಾದ ಘಟನೆ ಶುಕ್ರವಾರ ನಡೆದಿದೆ.ಆಕೆ ಪ್ರಯಾಣಿಸುತ್ತಿದ್ದ ಐಷಾರಾಮಿ ಕಾರನ್ನು 23 ವರ್ಷದ ಸಯೀದ್‌ ಅಹಮದ್‌ ಓಡಿಸುತ್ತಿದ್ದ. ವೇಗವಾಗಿ ಬಂದ ಕಾರು ‘ಬ್ರೂಕ್ಲಿನ್‌ ಕ್ವೀನ್ಸ್‌ ಎಕ್ಸ್‌ಪ್ರೆಸ್‌ ವೇ’ಯ ಕಾಂಕ್ರೀಟ್‌ ತಡೆಗೋಡೆಗೆ ಗುದ್ದಿದಾಗ ಬೆಂಕಿ ಹತ್ತಿಕೊಂಡಿದೆ. ಹರ್ಲೀನ್‌ ಅವರನ್ನು ರಕ್ಷಿಸುವ ಪ್ರಯತ್ನವನ್ನು ಚಾಲಕ ಮಾಡಿಲ್ಲ ಎಂದು ನ್ಯೂಯಾರ್ಕ್‌ ಡೈಲಿ ವರದಿ ಮಾಡಿದೆ.ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ಆರಿಸುವ ವೇಳೆಗೆ ಹರ್ಲೀಮ್‌ ಮೃತಪಟ್ಟಿದ್ದರು. ಚಾಲಕ ಪರಾರಿಯಾಗಿ ಆಸ್ಪತ್ರೆಗೆ ಧಾವಿಸಿ ಚಿಕಿತ್ಸೆ ಪಡೆದಿದ್ದಾನೆ. ಆತನ ಕೈ ಮತ್ತು ಕಾಲಿಗೆ ಸುಟ್ಟ ಗಾಯಗಳಾಗಿತ್ತು ಎಂದು ವರದಿ ಹೇಳಿದೆ. ಚಾಲಕನನ್ನು ಬಂಧಿಸಿದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry