ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಟು ರದ್ದತಿ: ಚಳಿಗಾಲದ ಅಧಿವೇಶನದಲ್ಲಿ ವರದಿ ಮಂಡನೆ

Last Updated 15 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರದ ನೋಟು ರದ್ದತಿ ನಿರ್ಧಾರ ಕುರಿತ ಸಂಸದೀಯ ಸಮಿತಿಯು ವರದಿಯನ್ನು ಸಂಸತ್‌ ಚಳಿಗಾಲದ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆ ಇದೆ.

ಚಳಿಗಾಲದ ಅಧಿವೇಶನದಲ್ಲಿ ವರದಿ ಮಂಡಿಸುವ ವರದಿಯನ್ನು ಹಣಕಾಸು ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿ ಧ್ಯಕ್ಷರಾಗಿರುವ ಕಾಂಗ್ರೆಸ್ ಸಂಸದ ವೀರಪ್ಪ ಮೊಯ್ಲಿ ದೃಢಪಡಿಸಿದ್ದಾರೆ.

ಹಣಕಾಸು ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಗೆ ಕಾಂಗ್ರೆಸ್ ಸಂಸದ ವೀರಪ್ಪ ಮೊಯ್ಲಿ ಅಧ್ಯಕ್ಷರಾಗಿದ್ದು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರೂ ಸಮಿತಿಯ ಸದಸ್ಯರಾಗಿದ್ದಾರೆ.

‘ನೋಟು ರದ್ದತಿಯ ನಿರ್ಧಾರದಲ್ಲಿನ ಸಮಸ್ಯೆಗಳನ್ನು ವರದಿಯಲ್ಲಿ ವಿಶ್ಲೇಷಿಸಲಾಗಿದೆ. ನಿರ್ಧಾರ ಜಾರಿಯಲ್ಲಿನ ವೈಫಲ್ಯಗಳನ್ನೂ ವಿಶ್ಲೇಷಿಸಲಾಗಿದೆ’ ಎಂದು ಸಮಿತಿಯ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ.

‘ಈ ಹಿಂದೆಯೇ ವರದಿಯ ಕರಡನ್ನು ಸಮಿತಿಯ ಸದಸ್ಯರಿಗೆ ಹಂಚಲಾಗಿತ್ತು. ಆದರೆ ಅ ಸಮಿತಿಯ ಅವಧಿ ಮುಗಿದು ಸಮಿತಿಯನ್ನು ಹೊಸದಾಗಿ ರಚಿಸಲಾಗಿದೆ. ಹೀಗಾಗಿ ಸದಸ್ಯರಿಗೆ ಕರಡನ್ನು ಹಂಚಲಾಗುತ್ತದೆ. ಮೊದಲ ಕರಡನ್ನು ಸಿದ್ಧಪಡಿಸಿದಾಗ ತನಗೆ ವಾಪಸಾದ ₹ 500 ಮತ್ತು
₹ 1,000 ಮುಖಬೆಲೆಯ ನೋಟುಗಳ ಸಂಖ್ಯೆಯ ಬಗ್ಗೆ ಆರ್‌ಬಿಐ ಮಾಹಿತಿ ನೀಡಿರಲಿಲ್ಲ. ಈಗ ಈ ಮಾಹಿತಿ ಲಭ್ಯವಿದೆ.

ಹೀಗಾಗಿ ಕರಡನ್ನು ಪರಿಷ್ಕರಿಸಬೇಕು ಎಂದು ಕೆಲವು ಸದಸ್ಯರು ಈಗಾಗಲೇ ತಿಳಿಸಿದ್ದಾರೆ’ ಎಂದು ಮತ್ತೊಬ್ಬ ಸದಸ್ಯರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT