ಭಾನುವಾರ, ಸೆಪ್ಟೆಂಬರ್ 22, 2019
22 °C

ಭಾರತ ಶಕ್ತಿಶಾಲಿ ಎಂದು ಚೀನಾ ಅರಿತಿದೆ: ರಾಜನಾಥ್

Published:
Updated:
ಭಾರತ ಶಕ್ತಿಶಾಲಿ ಎಂದು ಚೀನಾ ಅರಿತಿದೆ: ರಾಜನಾಥ್

ಲಖನೌ: ಭಾರತ ಇನ್ನು ಬಲಹೀನವಲ್ಲ ಎಂದು ಚೀನಾ ಅರಿತುಕೊಂಡಿದೆ ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಭಾನುವಾರ ಹೇಳಿದರು.

‘ಭಾರತದ ಗಡಿಗಳು ಸಂಪೂರ್ಣ ಸುರಕ್ಷಿತವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ನೇತೃತ್ವದಲ್ಲಿ ಭಾರತ ಪ್ರಬಲ ದೇಶ ಎನಿಸಿಕೊಂಡಿದೆ. ಜಾಗತಿಕ ಮಟ್ಟದಲ್ಲೂ ದೇಶದ ಗೌರವ ಹೆಚ್ಚಿದೆ’ ಎಂದು ಅವರು ಹೇಳಿದರು.

ಭಾರತೀಯ ಲೋಧಿ ಮಹಾಸಭಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾನತಾಡಿದ ಅವರು ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡರು. ನೆರೆದೇಶವು ಭಾರತಕ್ಕೆ ಭಯೋತ್ಪಾದಕರನ್ನು ಕಳುಹಿಸುತ್ತಿದೆ ಎಂದು ಆರೋಪಿಸಿದರು. ‘ಪಾಕಿಸ್ತಾನವು ಭಾರತವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದೆ. ನಮ್ಮ ಸೈನಿಕರು ಗಡಿಯಲ್ಲಿ ಪ್ರತಿನಿತ್ಯ 2–4 ಉಗ್ರರನ್ನು ಸದೆಬಡಿಯುತ್ತಿದ್ದಾರೆ’ ಎಂದು ಅವರು ಹೇಳಿದರು.

Post Comments (+)