ಜರ್ಮನಿಗೆ ಕೊಲಂಬಿಯಾ ಸವಾಲು

ಸೋಮವಾರ, ಜೂನ್ 17, 2019
22 °C
ಇಂದಿನಿಂದ ಪ್ರಿ ಕ್ವಾರ್ಟರ್‌ ಫೈನಲ್‌ ಪಂದ್ಯಗಳು; ಪರುಗ್ವೆ–ಅಮೆರಿಕ ಮುಖಾಮುಖಿ

ಜರ್ಮನಿಗೆ ಕೊಲಂಬಿಯಾ ಸವಾಲು

Published:
Updated:

ನವದೆಹಲಿ: ಫಿಫಾ 17 ವರ್ಷದೊಳಗಿನವರ ವಿಶ್ವಕಪ್ ಫುಟ್‌ಬಾಲ್ ಟೂರ್ನಿ ನಿರ್ಣಾಯಕ ಘಟ್ಟ ತಲುಪಿದ್ದು 16ರ ಹಂತದ ಪಂದ್ಯಗಳು ಸೋಮವಾರ ಆರಂಭವಾಗಲಿವೆ. ಮೊದಲ ಪಂದ್ಯದಲ್ಲಿ ಜರ್ಮನಿ ಮತ್ತು ಕೊಲಂಬಿಯಾ ತಂಡಗಳು ಸೆಣಸಲಿವೆ. ಮತ್ತೊಂದು ಪಂದ್ಯದಲ್ಲಿ ಅಮೆರಿಕವನ್ನು ಪರುಗ್ವೆ ಎದುರಿಸಲಿದೆ.

ಜರ್ಮನಿ ಮತ್ತು ಕೊಲಂಬಿಯಾ ನಡುವಿನ ಪಂದ್ಯದಲ್ಲಿ ಭಾರಿ ಪೈಪೋಟಿ ನಿರೀಕ್ಷಿಸಲಾಗಿದೆ. ಆಕ್ರಮಣ ಮತ್ತು ರಕ್ಷಣೆಯಲ್ಲಿ ಪಳಗಿರುವ ಉಭಯ ತಂಡಗಳು ಗೋಲು ಗಳಿಕೆಗೆ ನಡೆಸುವ ಶ್ರಮ ಪ್ರೇಕ್ಷಕರನ್ನು ರಂಜಿಸುವ ಭರವಸೆ ಇದೆ.

ನಾಲ್ಕು ಬಾರಿ ವಿಶ್ವ ಚಾಂಪಿಯನ್ ಆದ ಜರ್ಮನಿ 17 ವರ್ಷದೊಳಗಿನವರ ಟೂರ್ನಿಯಲ್ಲೂ ಉತ್ತಮ ದಾಖಲೆ ಹೊಂದಿದೆ. ಟೂರ್ನಿಯಲ್ಲಿ ಅತಿ ಹೆಚ್ಚು (44) ಪಂದ್ಯಗಳನ್ನು ಆಡಿರುವ ಈ ತಂಡ ನಾಲ್ಕು ಬಾರಿ ಸೆಮಿಫೈನಲ್‌ಗೆ ಪ್ರವೇಶಿಸಿದೆ. 1985ರಲ್ಲಿ ರನ್ನರ್ ಅಪ್ ಕೂಡ ಆಗಿತ್ತು. ಹೀಗಾಗಿ ತಂಡ ಈಗ ಪೂರ್ಣ ಭರವಸೆಯಲ್ಲಿದೆ. ಈ ಬಾರಿ ಟೂರ್ನಿಯಲ್ಲಿ ಇರಾನ್ ವಿರುದ್ಧ ಸೊಲುಂಡು ಅಭಿಯಾನ ಆರಂಭಿಸಿದ ತಂಡ ನಂತರ ಗೆಲುವಿನ ತೋರಣ ಕಟ್ಟಿತ್ತು.

ದಕ್ಷಿಣ ಅಮೆರಿಕದಲ್ಲಿ ಫುಟ್‌ಬಾಲ್‌ ಕ್ರೀಡೆಯಲ್ಲಿ ದೊಡ್ಡ ಹೆಸರು ಮಾಡಿರುವ ಕೊಲಂಬಿಯಾ ಕೂಡ ಗೆಲುವಿನ ತವಕದಲ್ಲಿದೆ. ಈ ಹಿಂದೆ ಐದು ಬಾರಿ ನಾಕೌಟ್ ಹಂತಕ್ಕೆ ತಲುಪಿರುವ ಈ ತಂಡ 2009ರಲ್ಲಿ ಮೂರನೇ ಸ್ಥಾನ ಗಳಿಸಿತ್ತು.ಎರಡೂ ತಂಡಗಳು ಗುಂಪು ಹಂತದಲ್ಲಿ ತಲಾ ಎರಡು ಪಂದ್ಯಗಳನ್ನು ಗೆದ್ದಿದ್ದು ಒಂದೊಂದು ಪಂದ್ಯ ಸೋತಿವೆ. ತಲಾ ಐದು ಗೋಲುಗಳನ್ನು ಗಳಿಸಿವೆ. ಎರಡೂ ತಂಡಗಳು ಕೊನೆಯದಾಗಿ ಸೆಣಸಿದಾಗ 3–3ರ ಡ್ರಾ ಸಾಧಿಸಿವೆ. ಈ ಲೆಕ್ಕಾಚಾರಗಳು ತಂಡಗಳ ಬಲಾಬಲವನ್ನು ತೋರಿಸುತ್ತಿವೆ.

ಪೆರುಗ್ವೆಗೆ ಅಮೆರಿಕ ಸವಾಲು: ಪರುಗ್ವೆ ಮತ್ತು ಅಮೆರಿಕ ನಡುವಿನ ಪಂದ್ಯದಲ್ಲೂ ಭಾರಿ ಪೈಪೋಟಿಯ ನಿರೀಕ್ಷೆ ಇದೆ.

ಗುಂಪು ಹಂತದಲ್ಲಿ ಎಲ್ಲ ಪಂದ್ಯಗಳನ್ನು ಗೆದ್ದಿರುವ ಪೆರುಗ್ವೆ ಮೂರು ಪಂದ್ಯಗಳಲ್ಲಿ ಒಟ್ಟು 10 ಗೋಲುಗಳನ್ನು ದಾಖಲಿಸಿದೆ. ಕೊಲಂಬಿಯಾ ಮೇಲೆ ಸೋತಿದ್ದರೂ ನಂತರ ಉತ್ತಮ ಆಟವಾಡಿ ಎರಡು ಜಯ ಸಾಧಿಸಿರುವ ಅಮೆರಿಕದ ಸಾಮರ್ಥ್ಯದ ಬಗ್ಗೆ ತಿಳಿದಿರುವ ಪೆರುಗ್ವೆ ಯಾವುದೇ ಕಾರಣಕ್ಕೂ ಎದುರಾಳಿಗಳನ್ನು ಕ್ಷುಲ್ಲಕವಾಗಿ ಕಾಣದು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry