ಮುಂಗಾರು: ದಾಖಲೆಯ ಸುರಿಮಳೆ

ಬುಧವಾರ, ಜೂನ್ 26, 2019
28 °C
ನಾಲ್ಕು ತಿಂಗಳಲ್ಲಿ 1,655 ಮಿ.ಮೀ ಮಳೆ * ಅಕ್ಟೋಬರ್‌ನಲ್ಲೂ ಮುಂದುವರಿದ ಹನಿಗಳ ಲೀಲೆ

ಮುಂಗಾರು: ದಾಖಲೆಯ ಸುರಿಮಳೆ

Published:
Updated:

ಬೆಂಗಳೂರು: ಈ ಬಾರಿಯ ಮುಂಗಾರು ಮಳೆ ಹನಿಗಳೊಂದಿಗೆ ದಾಖಲೆಗಳ ಬುಟ್ಟಿಯನ್ನೇ ಹೊತ್ತು ತಂದಿದೆ. ನಗರ ದಶಕದಲ್ಲೇ ಕಾಣದ ವರ್ಷಧಾರೆಗೆ ಸಾಕ್ಷಿಯಾಗಿದೆ. ಅಕ್ಟೋಬರ್‌ನಲ್ಲಿ ಇದುವರೆಗೆ ಸುರಿದ ಮಳೆಯೂ ಹತ್ತು ವರ್ಷಗಳ ದಾಖಲೆಯನ್ನು ಮುರಿದಿದೆ.

ಆಗಸ್ಟ್‌ನಿಂದ ಚುರುಕುಗೊಂಡಿರುವ ಮುಂಗಾರು, ಮಳೆ ಹನಿಗಳ ರಾಶಿಯನ್ನೇ ಸುರಿಸುತ್ತಿದೆ. ಕಳೆದ 3 ತಿಂಗಳಿನಿಂದಲೂ ವಾಡಿಕೆಗಿಂತ ದುಪ್ಪಟ್ಟು ಮಳೆಯಾಗುತ್ತಿದ್ದು, ಈ ತಿಂಗಳಿನಲ್ಲಿಯೂ ಅದು ಮುಂದುವರಿದಿದೆ.

ಅಕ್ಟೋಬರ್‌ 1ರಿಂದ 15ರವರೆಗೆ ನಗರದಲ್ಲಿ 386.5 ಮಿ.ಮೀ ಮಳೆಯಾಗಿದೆ. ಇದು 2007ರಿಂದ ಇಲ್ಲಿಯವರೆಗೆ ಈ ತಿಂಗಳಿನಲ್ಲಿ ಸುರಿದ ಅತಿ ಹೆಚ್ಚು ಪ್ರಮಾಣದ ಮಳೆಯಾಗಿದೆ.

2014ರಲ್ಲಿ ಸುರಿದ 343.8 ಮಿ.ಮೀ ಮಳೆ ಈ ದಶಕದ ಇದುವರೆಗಿನ ದಾಖಲೆಯಾಗಿತ್ತು. 2005ರ ಅಕ್ಟೋಬರ್‌ನಲ್ಲಿ ಸುರಿದ 605.6 ಮಿ.ಮೀ ಮಳೆ ಸಾರ್ವತ್ರಿಕ ದಾಖಲೆಯಾಗಿದ್ದು, ಈ ತಿಂಗಳ ಅಂತ್ಯದವರೆಗೂ ಇದೇ  ಪ್ರಮಾಣದ ಮಳೆ ಮುಂದುವರಿದರೆ ಆ ದಾಖಲೆಯೂ ಅಳಿಸಿ ಹೋಗಲಿದೆ.

ಒಂದು ದಿನದ ಮಳೆಯಲ್ಲೂ ದಾಖಲೆ:  ಅ.6ರಂದು ಸುರಿದ 76 ಮಿ.ಮೀ ಮಳೆಯು ಹತ್ತು ವರ್ಷಗಳಲ್ಲಿ ಈ ತಿಂಗಳಲ್ಲಿ ಒಂದೇ ದಿನ ಸುರಿದ ದಾಖಲೆ ಮಳೆ.

2014ರ ಅಕ್ಟೋಬರ್ 9ರಂದು ಸುರಿದಿದ್ದ 63.1 ಮಿ.ಮೀ ಮಳೆ ಈ ಹಿಂದಿನ ದಾಖಲೆಯಾಗಿತ್ತು. ಇದಲ್ಲದೆ 1997ರಲ್ಲಿ ಅಕ್ಟೋಬರ್‌ 1ರಂದು 178.9 ಮಿ.ಮೀ ಮಳೆಯಾಗಿತ್ತು. ಇದು ಸಾರ್ವತ್ರಿಕ ದಾಖಲೆಯಾಗಿದೆ.

ದಾಖಲೆಗೆ ಮುನ್ನುಡಿ :  ಜನವರಿಯಿಂದ ಅಕ್ಟೋಬರ್‌ 15ರವರೆಗೆ ನಗರದಲ್ಲಿ 1,655.7 ಮಿ.ಮೀ ಮಳೆ ಸುರಿದಿದೆ. ಇದು ವಾಡಿಕೆಗಿಂತ ಶೇ 62ರಷ್ಟು (719 ಮಿ.ಮೀ) ಅಧಿಕ ಮಳೆಯಾಗಿದೆ.

‘2005ರಲ್ಲಿ ಬೆಂಗಳೂರು ನಗರ 1606.8 ಮಿ.ಮೀ ಮಳೆಗೆ ಸಾಕ್ಷಿಯಾಗಿತ್ತು. ಆ ನಂತರ ಈ ಪ್ರಮಾಣದಲ್ಲಿ ಮಳೆಯಾಗುತ್ತಿರುವುದು ಪ್ರಸಕ್ತ ವರ್ಷದಲ್ಲಿಯೇ’ ಎನ್ನುತ್ತಾರೆ ಹವಾಮಾನ ಇಲಾಖೆ ಅಧಿಕಾರಿಗಳು.

‘ಇದೇ 18ರವರೆಗೆ ಮಳೆ ಪ್ರಬಲವಾಗಿರುತ್ತದೆ. ಅಲ್ಲದೆ, ಹಿಂಗಾರು ಮಳೆಯೂ ವಾಡಿಕೆಯಷ್ಟು ಆಗುವುದರಿಂದ ಈ ಬಾರಿ ಹೊಸ ದಾಖಲೆ ಸೃಷ್ಟಿಸುವ ಸಾಧ್ಯತೆ ಇದೆ’ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರ ವಿಭಾಗದ ಹಂಗಾಮಿ ನಿರ್ದೇಶಕ ಸುಂದರ ಮೇತ್ರಿ ತಿಳಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry