ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದುವರಿದ ಗೂಳಿ ಓಟ: ಷೇರುಪೇಟೆಯಲ್ಲಿ ಗರಿಗೆದರಿದ ಚಟುವಟಿಕೆ

Last Updated 16 ಅಕ್ಟೋಬರ್ 2017, 5:11 IST
ಅಕ್ಷರ ಗಾತ್ರ

ಮುಂಬೈ: ವಾರದ ವಹಿವಾಟಿನ ಆರಂಭದಲ್ಲಿ ಷೇರುಪೇಟೆಯಲ್ಲಿ ಚಟುವಟಿಕೆ ಗರಿಗೆದರಿದೆ. ಸೋಮವಾರದ ವಹಿವಾಟು ಆರಂಭಗೊಂಡಾಗ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 212.47 ಅಂಶ ಚೇತರಿಕೆ ದಾಖಲಿಸಿದ್ದು, 32,645.16 ತಲುಪಿತ್ತು.

ನಿಫ್ಟಿ 50 ಅಂಶ ಹೆಚ್ಚಳಗೊಂಡು 10,200 ದಾಖಲಿಸಿತ್ತು. ಅಮೆರಿಕನ್ ಡಾಲರ್ ವಿರುದ್ಧ ರೂಪಾಯಿ ಮೌಲ್ಯವೂ ಏರಿಕೆ ಕಂಡಿದೆ. ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳ ಮೌಲ್ಯದಲ್ಲಿ ಏರಿಕೆಯಾಗಿದೆ.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕಂಪೆನಿಗಳ ಎರಡನೇ ತ್ರೈಮಾಸಿಕ ಆರ್ಥಿಕ ಸಾಧನೆ ಈ ವಾರ ಷೇರು‍ಪೇಟೆ ಮೇಲೆ ಪ್ರಭಾವ ಬೀರಲಿದೆ ಎಂದು ಮಾರುಕಟ್ಟೆ ಪರಿಣತರು ಈ ಹಿಂದೆಯೇ ಸುಳಿವು ನೀಡಿದ್ದರು. ಕಳೆದ ವಾರವೂ ಪೇಟೆಯಲ್ಲಿ ಸಕಾರಾತ್ಮಕ ವಹಿವಾಟು ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT