ಕುಲದೀಪ್‌, ಯಜುವೇಂದ್ರ ಜಾಹಲ್‌ ಸ್ಪಿನ್‌ ದಾಳಿ ಎದುರಿಸುವುದು ನಮ್ಮ ಗುರಿ: ಕೇನ್‌ ವಿಲಿಯಮನ್ಸ್‌

ಶನಿವಾರ, ಮೇ 25, 2019
32 °C

ಕುಲದೀಪ್‌, ಯಜುವೇಂದ್ರ ಜಾಹಲ್‌ ಸ್ಪಿನ್‌ ದಾಳಿ ಎದುರಿಸುವುದು ನಮ್ಮ ಗುರಿ: ಕೇನ್‌ ವಿಲಿಯಮನ್ಸ್‌

Published:
Updated:
ಕುಲದೀಪ್‌, ಯಜುವೇಂದ್ರ ಜಾಹಲ್‌ ಸ್ಪಿನ್‌ ದಾಳಿ ಎದುರಿಸುವುದು ನಮ್ಮ ಗುರಿ: ಕೇನ್‌ ವಿಲಿಯಮನ್ಸ್‌

ಮುಂಬೈ: ಅ.22ರಿಂದ ಆರಂಭವಾಗಲಿರುವ ಭಾರತದ ವಿರುದ್ಧದ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾದ ಸ್ಪಿನರ್‌ಗಳಾದ ಕುಲದೀಪ್‌ ಯಾದವ್‌ ಮತ್ತು ಯಜುವೇಂದ್ರ ಜಾಹಲ್‌ ಅವರ ಸ್ಪಿನ್‌ ದಾಳಿಯನ್ನು ಎದುರಿಸುವುದು ನಮ್ಮ ಪ್ರಮುಖ ಗುರಿಯಾಗಿದೆ ಎಂದು ನ್ಯೂಜಿಲೆಂಡ್‌ ತಂಡ ನಾಯಕ ಕೇನ್‌ ವಿಲಿಯಮ್ಸನ್‌ ಹೇಳಿದ್ದಾರೆ.

ಇತ್ತೀಚಿಗಷ್ಟೆ ಮುಕ್ತಾಯಗೊಂಡ ಆಸ್ಟ್ರೇಲಿಯಾ ವಿರುದ್ಧದ ಏಕದಿನ, ಟಿ–20 ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಕುಲದೀಪ್‌ ಯಾದವ್‌ ಹಾಗೂ ಜಾಹಲ್‌ ಯಶಸ್ವಿ ಸ್ಪಿನ್‌ ಬೌಲರ್‌ಗಳಾಗಿ ಮಿಂಚಿದ್ದರು.

ಇದೀಗ ಕುಲದೀಪ್‌ ಯಾದವ್‌ ಹಾಗೂ ಜಾಹಲ್‌ ಅವರ ಸ್ವಿನ್‌ ಬೌಲಿಂಗ್‌ ಬಗ್ಗೆ ಎಚ್ಚರಿಕೆಯಿಂದ ಆಡಬೇಕಾಗಿದೆ ಎಂದು ಕೇನ್‌ ವಿಲಿಯಮ್ಸನ್‌ ಹೇಳಿದ್ದಾರೆ.

ಅ.22ರಿಂದ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ. ಪ್ರವಾಸಿ ತಂಡ ಈಗಾಗಲೇ ಭಾರತಕ್ಕೆ ಬಂದಿದ್ದು ಅಭ್ಯಾಸ ನಡೆಸುತ್ತಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry