ಬಹುಮುಖ ಪ್ರತಿಭೆಯ ಶಿಲ್ಪಿ ಪಿ. ಮುನಿರತ್ನಾಚಾರಿ

ಮಂಗಳವಾರ, ಜೂನ್ 18, 2019
31 °C

ಬಹುಮುಖ ಪ್ರತಿಭೆಯ ಶಿಲ್ಪಿ ಪಿ. ಮುನಿರತ್ನಾಚಾರಿ

Published:
Updated:
ಬಹುಮುಖ ಪ್ರತಿಭೆಯ ಶಿಲ್ಪಿ ಪಿ. ಮುನಿರತ್ನಾಚಾರಿ

ಸಂಡೂರು: ಜೀವನದಲ್ಲಿ ಘಟಿಸುವ ಸಣ್ಣ ಘಟನೆಗಳು ಜೀವನದ ಗತಿಯನ್ನೇ ಬದಲಿಸುತ್ತವೆ ಎಂಬುದಕ್ಕೆ ಶಿಲ್ಪಿ ಪಿ. ಮುನಿರತ್ನಾಚಾರಿ ಅವರ ಬದುಕೇ ಉತ್ತಮ ಉದಾಹರಣೆ.

ಸಂಡೂರಿನ ಶಿಲ್ಪಿ ಪಿ. ಸುಬ್ಬಾಚಾರಿ ಅವರ ಸುಪುತ್ರರಾದ ಮುನಿರತ್ನಾಚಾರಿ ಅವರು ಚಿಕ್ಕಂದಿನಲ್ಲೇ ತಂದೆಯೊಂದಿಗೆ ಸೇರಿ ಚಿಕ್ಕ ಮೂರ್ತಿಗಳನ್ನು ತಯಾರಿಸುತ್ತಿದ್ದರು.

‘ಮಾಜಿ ಸಚಿವ ದಿವಂಗತ ಎಂ.ವೈ. ಘೋರ್ಪಡೆ ಅವರು ತಾಲ್ಲೂಕಿನ ಕಲಾವಿದರನ್ನು ಗುರುತಿಸಿ, ಅವರಿಗೆ ತರಬೇತಿ ಕೊಡಿಸಲು ಮುಂದಾದರು. ಆಗ ಎಸ್‌.ಟಿ ಘೋಡ್ಕೆ ಅವರು ನನ್ನನ್ನು ಕರೆದುಕೊಂಡು ಹೋಗಿ ಘೋರ್ಪಡೆ ಅವರಿಗೆ ಪರಿಚಯಿಸಿದರು’ ಎಂದು ಮುನಿರತ್ನಾಚಾರಿ ನೆನಪಿನಂಗಳಕ್ಕೆ ಜಾರಿದರು.

‘ನನ್ನಲ್ಲಿನ ಕಲೆಯ ಬಗೆಗಿನ ಆಸಕ್ತಿ ಗಮನಿಸಿದ ಘೋರ್ಪಡೆ ಅವರು, ಬೆಂಗಳೂರಿನ ದೇವಲಕೊಂಡ ವಾದಿರಾಜ್ ಅವರ ಬಳಿ ಶಿಲ್ಪಕಲೆ ತರಬೇತಿಗೆ ಕಳುಹಿಸಿಕೊಟ್ಟರು. ಅಲ್ಲಿಂದ ನನ್ನ ಜೀವ ತಿರುವು ಪಡೆದುಕೊಂಡಿತು. ಶಿಲ್ಪ ಕಲೆಯಲ್ಲಿ ಸಾಧನೆಗೆ ಅವಕಾಶ ಕಲ್ಪಿಸಿತು’ ಎಂದು ಹೇಳಿದರು.

ದೇವಲಕೊಂಡ ವಾದಿರಾಜ್ ಅವರ ಶಿಲ್ಪಕಲಾ ಪ್ರತಿಷ್ಠಾನದಲ್ಲಿ ಗುರುಕುಲ ಪದ್ಧತಿಯಲ್ಲಿ ಐದು ವರ್ಷ ಚಿತ್ರಕಲೆ, ಶಿಲ್ಪ ಹಾಗೂ ಕಾಷ್ಠ ಶಿಲ್ಪ ತಯಾರಿಕೆಯಲ್ಲಿ ತರಬೇತಿ ಪಡೆದು ಬಂದ ಬಳಿಕ ಘೋರ್ಪಡೆಯವರ ಸಂಡೂರು ಕುಶಲ ಕಲಾ ಕೇಂದ್ರದಲ್ಲಿ ಮಾಸ್ಟರ್ ಕ್ರಾಫ್ಟ್‌ಮನ್ ಆಗಿ ನೇಮಕಗೊಂಡರು. 1987 ರಿಂದ 2000ದವರೆಗೆ ಸೇವೆ ಸಲ್ಲಿಸಿ ನಿವೃತ್ತರಾದರು. ಕುಶಲ ಕಲಾ ಕೇಂದ್ರದ ಆವರಣದಲ್ಲಿ ಕೆಲಸ ಮುಂದುವರಿಸಲು ಈಗಲೂ ಸಂಸ್ಥೆಯವರು ಅವಕಾಶ ನೀಡಿದ್ದಾರೆ ಎಂದು ಸ್ಮರಿಸಿದರು.

ಭಾಗವಹಿಸಿದ ಕಾರ್ಯಾಗಾರಗಳು: ಬೆಂಗಳೂರಿನ ವೆಂಕಟಾಚಲಂ ಆರ್ಟ್‌ ಅಂಡ್ ಕ್ರಾಫ್ಟ್ ಅಪ್ರಿಷಿಯೇಷನ್ ಕೋರ್ಸ್‌ ಮತ್ತು ಕಾರ್ಯಾಗಾರ, ನಾಗಪುರದ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದವರು ಬಾದಾಮಿಯಲ್ಲಿ ಏರ್ಪಡಿಸಿದ್ದ ಸಾಂಪ್ರದಾಯಿಕ ಶಿಲ್ಪಿಗಳ ಕಾರ್ಯಾಗಾರ, ವೆಂಕಟಪ್ಪ ಆರ್ಟ್‌ ಗ್ಯಾಲರಿಯಲ್ಲಿನ ಶಿಲ್ಪಕಲೆ ಶಿಬಿರ, ಬೆಂಗಳೂರಿನ ಶಿಲ್ಪ ಕಲಾ ಪ್ರತಿಷ್ಠಾನದವರು ಏರ್ಪಡಿಸಿದ್ದ ಶಿಲ್ಪ ಉತ್ಸವ, ಹೋಯ್ಸಳ ಶಿಲ್ಪ ಶಿಬಿರ, ಮಹಾಬಲಿಪುರಂನಲ್ಲಿ ಏರ್ಪಡಿಸಿದ್ದ ಶಿಲ್ಪಕಲಾ ಶಿಬಿರ ಸೇರಿದಂತೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ಹಲವು ಕಾರ್ಯಾಗಾರಗಳಲ್ಲಿ ಭಾಗವಹಿಸಿ, ಅಲ್ಲಿ ತಮ್ಮ ಕಲಾ ನೈಪುಣ್ಯತೆಯನ್ನು ಪ್ರದರ್ಶಿಸಿದ್ದಾರೆ.

ಶಿಲಾ ಮತ್ತು ಕಾಷ್ಠ ಮೂರ್ತಿಗಳು ಜಿಲ್ಲೆಯಲ್ಲದೇ ಹೊರ ಜಿಲ್ಲೆಗಳ ನೂರಾರು ದೇವಸ್ಥಾನಗಳ ಗರ್ಭಗುಡಿ, ಗೋಪುರಗಳನ್ನು ಅಲಂಕರಿಸಿವೆ. ಅಲ್ಲದೇ ಹೊರ ದೇಶಗಳಿಗೂ ರವಾನೆಯಾಗಿವೆ. ಮೂರ್ತಿಗಳನ್ನಲ್ಲದೇ ರಥ ನಿರ್ಮಾಣ ಕಾರ್ಯದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ, ತಮ್ಮ ಮಗನೊಂದಿಗೆ ಶಿಲ್ಪ ತಯಾರಿಕೆಯನ್ನು ಮುಂದುವರೆಸಿದ್ದಾರೆ. ಮುನಿರತ್ನಾಚಾರಿ ಅವರ ದೂರವಾಣಿ ಸಂಖ್ಯೆ 9483011003.

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry