ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾಟಕದ ರಾಜಕಾರಣ ನನ್ನದಲ್ಲ’

Last Updated 16 ಅಕ್ಟೋಬರ್ 2017, 6:10 IST
ಅಕ್ಷರ ಗಾತ್ರ

ಕಡೂರು: ‘ನನ್ನದು ಜನತೆಯ ಮನಗೆಲ್ಲುವಂಥ ರಾಜಕಾರಣವೇ ಹೊರತು ನಾಟಕದ ರಾಜಕಾರಣವಲ್ಲ. ಅದರ ಅಗತ್ಯವೂ ಇಲ್ಲ’ ಎಂದು ಶಾಸಕ ಸಿ.ಟಿ. ರವಿ ತಿರುಗೇಟು ನೀಡಿದರು. ಕಡೂರು ತಾಲ್ಲೂಕಿನ ಪಿಳ್ಳೇನಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದ ಗ್ರಾಮವಾಸ್ತವ್ಯ ಮತ್ತು ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.

‘ಜನರ ಸಮಸ್ಯೆಯನ್ನು ಹತ್ತಿರದಿಂದ ಪ್ರತ್ಯಕ್ಷ ಕಂಡು ಅದಕ್ಕೆ ಪರಿಹಾರ ಕಂಡು ಹಿಡಿಯುವ ಮತ್ತು ಜನಸಾಮಾನ್ಯರಿಗೂ ಶಾಸಕ ಸಿಗಬೇಕು ಎಂಬ ಆಶಯದಿಂದ 2005ರಿಂದಲೂ ಈ ಗ್ರಾಮವಾಸ್ತವ್ಯವನ್ನು ಆಯೋಜಿ ಸುತ್ತಿದ್ದೇನೆ’ ಎಂದರು.

‘ಹಲವು ಸಮಸ್ಯೆಗಳಿಗೆ ನೇರವಾಗಿ ಅಧಿಕಾರಿಗಳಿಂದ ಪರಿಹಾರ ಕಂಡಕೊಳ್ಳಲು ಅನು ಕೂಲವಾಗುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಗ್ರಾಮವಾಸ್ತವ್ಯದ ಬದಲಾಗಿ ಗ್ರಾಮೋತ್ಸವ ಎಂಬಂತೆ ಯಶಸ್ವಿಯಾಗಿದೆ. ಆದರೆ, ಇದನ್ನು ಸಹಿಸದ ವಿರೋಧಿಗಳು ವಿನಾಕಾರಣ ಆರೋಪ ಮಾಡುತ್ತಿದ್ದು ಜನತೆ ಅದನ್ನು ನಂಬುವುದಿಲ್ಲ’ ಎಂದರು.

‘ಪಿಳ್ಳೇನಹಳ್ಳಿ ಗ್ರಾಮದ ರಸ್ತೆ ಅಭಿವೃದ್ದಿಗೆ ₹ 30 ಲಕ್ಷ ವೆಚ್ಚದ ಕಾಮಗಾರಿಗಳನ್ನು ಅನುಷ್ಠಾನಗೊಳಿಸ ಲಾಗಿದೆ. ಇದರಲ್ಲಿ ತಾಂಡಗಳ ಅಭಿವೃದ್ಧಿ, ರಸ್ತೆ, ಚರಂಡಿ ಅಭಿವೃದ್ಧಿಯೂ ಸೇರಿದೆ. ಒಟ್ಟಾರೆಯಾಗಿ ಪಿಳ್ಳೇನಹಳ್ಳಿ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡುವ ಪ್ರಯತ್ನ ನನ್ನದು’ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಚೈತ್ರಶ್ರೀ ಮಾಲತೇಶ್ ಮಾತನಾಡಿ, ಜನರ ಸಮಸ್ಯೆಗಳನ್ನು ಸ್ವತಃ ಅರಿಯಲು ಕ್ಷೇತ್ರದ ಶಾಸಕರೇ ಗ್ರಾಮವಾಸ್ತವ್ಯ ಮಾಡುವುದು ಅವರ ಜನಪರ ಕಾಳಜಿಯನ್ನು ತೋರಿಸುತ್ತದೆ ಎಂದರು.

ಗಂಗೆಹಳ್ಳಕ್ಕೆ ಸೇತುವೆ ದುರಸ್ತಿ, ಶುದ್ಧಗಂಗಾ ನೀರಿನ ಸಮರ್ಪಕ ನಿರ್ವಹಣೆ, ಗ್ರಂಥಾಲಯದ ನವೀಕರಣ ಮುಂತಾದ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ಪ್ರಸ್ತಾಪಿಸಿದರು.
ಕಾರ್ಯಕ್ರಮದ ಉದ್ದಕ್ಕೂ ಮಂದಗತಿಯಲ್ಲಿ ಸುರಿ ಯುತ್ತಿದ್ದ ಮಳೆಯನ್ನು ಲೆಕ್ಕಿಸದೆ ಸಾರ್ವಜನಿಕರು ಉತ್ಸಾಹದಿಂದಲೇ ಸಭೆಯಲ್ಲಿ ಪಾಲ್ಗೊಂಡರು.

ತಹಶೀಲ್ದಾರ್‌ ಎಂ. ಭಾಗ್ಯ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಜಶ್ವಂತ್ ಅನಿಲ್‌ ಕುಮಾರ್, ಸೋಮಶೇಖರ್, ತಾಲ್ಲೂಕು ಪಂಚಾಯಿತಿ ಸದಸ್ಯೆ ರುದ್ರಮೂರ್ತಿ, ಗ್ರಾಮ ಪಂಚಾಯಿತಿ ಅದ್ಯಕ್ಷೆ ಲತಾ, ಉಪಾಧ್ಯಕ್ಷೆ ಸುಧಾ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಕಲ್ಮುರಡಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಲಕ್ಷ್ಮಣ್‍ನಾಯ್ಕ್ ಉಪಸ್ಥಿತರಿದ್ದರು.

ಸೋಮ್ಲಾಪುರ: ಕಬಡ್ಡಿ ಪಂದ್ಯಾವಳಿ ಇಂದು
ಕೊಪ್ಪ: ‌ತಾಲ್ಲೂಕಿನ ಸೋಮ್ಲಾಪುರದ ಸಂಜೀವಿನಿ ಗೆಳೆಯರ ಬಳಗದ ವತಿಯಿಂದ ಮರಿತೊಟ್ಲು ಗ್ರಾಮ ಪಂಚಾಯಿತಿ ಮಟ್ಟದ ಪುರುಷ ಹಾಗೂ ಮಹಿಳೆಯರ ಕಬಡ್ಡಿ ಪಂದ್ಯಾವಳಿ ಇದೇ 15ರಂದು ಸೋಮ್ಲಾಪುರದ ಸರ್ಕಾರಿ ಪ್ರಾಥಮಿಕ ಶಾಲಾ ಕ್ರೀಡಾಂಗಣದಲ್ಲಿ ನಡೆಯಲಿದೆ.

ಬೆಳಿಗ್ಗೆ 8ರಿಂದ ಪಂದ್ಯಾವಳಿ ಆರಂಭವಾಗಲಿದೆ. ಸಂಜೆ 6ಕ್ಕೆ ಮರಿತೊಟ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಲತಾ ಹರೀಶ್ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಟಿ.ಡಿ. ರಾಜೇಗೌಡ ವಿಜೇತರಿಗೆ ಬಹುಮಾನ ವಿತರಿಸುವರು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT