ಬಿಡಾಡಿ ದನಗಳ ಹಾವಳಿಗೆ ಬೇಕು ನಿಯಂತ್ರಣ

ಮಂಗಳವಾರ, ಜೂನ್ 18, 2019
23 °C

ಬಿಡಾಡಿ ದನಗಳ ಹಾವಳಿಗೆ ಬೇಕು ನಿಯಂತ್ರಣ

Published:
Updated:
ಬಿಡಾಡಿ ದನಗಳ ಹಾವಳಿಗೆ ಬೇಕು ನಿಯಂತ್ರಣ

ಕೊಪ್ಪಳ: ನಗರದಲ್ಲಿ ಬಿಡಾಡಿ ದನಗಳ ಹಾವಳಿ ಮಿತಿಮೀರಿದೆ. ನಗರಸಭೆಯ ಮುನ್ನೆಚ್ಚರಿಕೆಗೂ ಯಾವುದೇ ಬೆಲೆ ನೀಡದ ಜಾನುವಾರು ಮಾಲೀಕರು ಹಾಗೇ ಬಿಟ್ಟಿದ್ದಾರೆ. ಇವುಗಳಿಂದಾಗಿ ನಗರದ ಸಂಚಾರ ವ್ಯವಸ್ಥೆ ಹದಗೆಟ್ಟಿದೆ. ಪೊಲೀಸರು ಅಸಹಾಯಕರಾಗಿದ್ದಾರೆ.

ಎಲ್ಲೆಲ್ಲಿ ಇವೆ?: ಗಂಜ್‌ ವೃತ್ತ, ತಹಶೀಲ್ದಾರ್‌ ಕಚೇರಿ ಪ್ರದೇಶ, ಕೇಂದ್ರ ಬಸ್‌ ನಿಲ್ದಾಣ, ಮಾರುಕಟ್ಟೆ ಪ್ರದೇಶ ಹೀಗೆ ದಟ್ಟಣೆ ಹೆಚ್ಚು ಇರುವ ಪ್ರದೇಶಗಳಲ್ಲಿ ಅಡ್ಡಾದಿಡ್ಡಿ ಸುತ್ತಾಡುವುದು, ನಡುರಸ್ತೆಯಲ್ಲೇ ಹಾಯಾಗಿ ಮಲಗುವುದು ನಗರದಲ್ಲಿ ಕಾಣುವ ನಿತ್ಯದ ನೋಟ.

ಹಲವಾರು ದ್ವಿಚಕ್ರ ವಾಹನ ಸವಾರರು ರಾತ್ರಿ ವೇಳೆ ಜಾನುವಾರು ಮಲಗಿರುವುದು ಕಾಣದೇ ತೊಂದರೆ ಗೊಳಗಾಗಿದ್ದಾರೆ. ಕೂದಲೆಳೆಯ ಅಂತರದಲ್ಲಿ ಅಪಘಾತಗಳು ತಪ್ಪಿದ ಉದಾಹರಣೆಗಳೂ ಇವೆ. ನಗರದ ಸಂಚಾರ ಸುವ್ಯವಸ್ಥೆ ಹಾಗೂ ಸುರಕ್ಷತೆಯ ದೃಷ್ಟಿಯಿಂದಾದರೂ ಬಿಡಾಡಿ ದನಗಳನ್ನು ಕಟ್ಟಿಹಾಕಬೇಕು ಎಂಬುದು ನಾಗರಿಕರ ಒತ್ತಾಯ.

ಏನು ಮಾಡಬಹುದು?: ನಗರಸಭೆ ನಿರ್ದಾಕ್ಷಿಣ್ಯವಾಗಿ ಜಾನುವಾರುಗಳನ್ನು ಹಿಡಿದು ನಗರದಲ್ಲಿರುವ ಗೋಶಾಲೆಗೆ ಸಾಗಿಸಬಹುದು. ಜಾನುವಾರು ಸಾಕಣೆದಾರರನ್ನು ಪತ್ತೆಹಚ್ಚಿ ಈ ರೀತಿ ಬಿಡಾಡಿ ದನಗಳ ಮಾಲೀಕರಿಗೆ ದಂಡ ವಿಧಿಸಬಹುದು. ಅಥವಾ ಸಾಕಲು ಆಸಕ್ತಿಯುಳ್ಳವರಿಗೆ ಹರಾಜು ಮೂಲಕ ಕೊಡಬಹುದು ಎಂದು ಸಲಹೆ ಮಾಡುತ್ತಾರೆ ನಗರದ ಹಿರಿಯ ನಾಗರಿಕ ಗೋವಿಂದರಾವ್‌.

ಅಡೆತಡೆಗಳೇನು?: ನಗರಸಭೆ ಒಂದೆರಡು ಬಾರಿ ಪತ್ರಿಕಾ ಪ್ರಕಟಣೆ ಕೊಟ್ಟು ಎಚ್ಚರಿಸಿದ್ದು ಬಿಟ್ಟರೆ ಜಾನುವಾರು ನಿಯಂತ್ರಣ ಸಂಬಂಧಿಸಿ ಗಂಭೀರ ಕ್ರಮಗಳನ್ನು ಕೈಗೊಳ್ಳಲೇ ಇಲ್ಲ ಎಂಬುದು ಕೇಳಿಬರುತ್ತಿರುವ ಆರೋಪ. ನಗರಸಭೆಯ ಸಾಮಾನ್ಯ ಸಭೆಯಲ್ಲೂ ಈ ವಿಷಯ ಚರ್ಚೆಯಾಗಿದೆ. ಆದರೆ, ನಿರ್ಧಾರಕ್ಕೆ ಬಂದಿಲ್ಲ ಎಂದು ಸದಸ್ಯರೇ ಹೇಳುತ್ತಿರುವ ಮಾತು.

ಆದರೆ, ಗೋಶಾಲೆಗೆ ಸಾಗಿಸಿದ ತಕ್ಷಣ ಎಚ್ಚೆತ್ತುಕೊಳ್ಳುವ ಮಾಲೀಕರು ತಕ್ಷಣವೇ ಹೋಗಿ ಜಾನುವಾರುಗಳನ್ನು ವಾಪಸ್‌ ತರಲು ಮುಂದಾಗುತ್ತಾರೆ. ಒಮ್ಮೆ ಜಾನುವಾರು ಪಡೆದ ನಂತರ ವಾಪಸ್‌ ಕೊಡುವುದು ನಮಗೂ ಸಮಸ್ಯೆ ಎನ್ನುತ್ತವೆ ಗೋಶಾಲೆಯ ಮೂಲಗಳು.

ಕಾರಟಗಿ ಮಾದರಿ: ಇತ್ತೀಚೆಗೆ ಕಾರಟಗಿಯಲ್ಲಿ ಸ್ಥಳೀಯಾಡಳಿತವೇ ಜಾನುವಾರುಗಳನ್ನು ಹಿಡಿದು ಗೋಶಾಲೆಗೆ ಕಳುಹಿಸಿತ್ತು. ಅದೇ ಮಾದರಿಯಲ್ಲಿ ನಗರದಲ್ಲೂ ಕಾರ್ಯಾಚರಣೆ ನಡೆಯಬೇಕು ಎಂದು ನಾಗರಿಕರು ಒತ್ತಾಯಿಸುತ್ತಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry