ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಗಿಗೆ ಕೀಟಬಾಧೆ: ನಿಯಂತ್ರಣಕ್ಕೆ ಸಲಹೆ

Last Updated 16 ಅಕ್ಟೋಬರ್ 2017, 8:54 IST
ಅಕ್ಷರ ಗಾತ್ರ

ಹುಣಸೂರು: ತಾಲ್ಲೂಕಿನ ಚಿಲ್ಕುಂದ ಪಂಚಾಯಿತಿ ವ್ಯಾಪ್ತಿಯಲ್ಲಿ ರಾಗಿ ಬೆಳೆಗೆ ಕಾಣಿಸಿಕೊಂಡ ಹಸಿರು ಕಾಂಡ ಕೊರೆಯುವ ‘ಸೈನಿಕಹುಳು’ ಬಾಧೆ ಮತ್ತು ಗರಿ ತಿನ್ನುವ ‘ಕೊಂಡಲಿಹುಳು’ ಬಾಧೆ ಕಾಣಿಸಿಕೊಂಡಿದೆ. ಇದರ ನಿಯಂತ್ರಣಕ್ಕೆ ಕೃಷಿ ಇಲಾಖೆ ಅಧಿಕಾರಿ ಹರೀಶ್‌್‌ ನೇತೃತ್ವದಲ್ಲಿ ಶನಿವಾರ ರೈತರಿಗೆ ತಿಳಿವಳಿಕೆ ನೀಡಲಾಯಿತು.

ಸೈನಿಕಹುಳು ನಿಯಂತ್ರಣಕ್ಕೆ ಕ್ಲೋರೋಫೈರಿಪಾಸ್‌ ಅಥವಾ ಕ್ವಿನಾಲ್‌ ಫಾಸ್ ಔಷಧಿಯನ್ನು ಒಂದು ಎಕರೆಗೆ 200 ಲೀಟರ್‌ನಷ್ಟು ಸಿಂಪಡಿಸಬೇಕು ಎಂದು ಹರೀಶ್‌ ಮಾಹಿತಿ ನೀಡಿದರು.

ಒಂದು ಎಕರೆಗೆ ಸಾಲುವಷ್ಟು ವಿಷಪಾಷಣವನ್ನು ಸಿದ್ಧಪಡಿಸಲು 20 ಕೆ.ಜಿ ಭತ್ತದ ತೌಡು, 2 ಕೆ.ಜಿ. ಬೆಲ್ಲ, 4 ಲೀಟರ್ ನೀರಿನಲ್ಲಿ ಬೆರೆಸಿ ಗಾಳಿಯಾಡದ ಡ್ರಮ್ ಅಥವಾ ಚೀಲಗಳಲ್ಲಿ ಶೇಖರಿಸಬೇಕು. ಒಂದು ರಾತ್ರಿ ಕೊಳೆಯಲು ಬಿಟ್ಟು, ಮರುದಿನ ಮಾನೋಕ್ರೋಟೋಪಸ್‌ ಔಷಧಿ ಹಾಗೂ ನುವಾನ್‌ 100 ಮಿ.ಲೀ. ಮಿಶ್ರಣ ಮಾಡಿ ಸಂಜೆ ಹೊಲದಲ್ಲಿ ಹರಡಬೇಕು ಎಂದರು.

ಔಷಧಿ ಹಾಕುವಾಗ ರೈತರು ಕೈಗವಸು ಬಳಸಬೇಕು. ಅಲ್ಲದೇ ನವಿಲು ಹಾಗೂ ಪಕ್ಷಿಗಳು ಹೆಚ್ಚಿಗೆ ಕಾಣಿಸುವ ಹೊಲಗಳಲ್ಲಿ ಬಳಸುವುದು ನಿಷೇಧಿಸಿದೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT