ಬುರುಡೆ ಶಂಕರ ನಿಮ್ಮೂರಲ್ಲೇ ಇದ್ದಾನೆ: ಕಾಗೋಡು

ಬುಧವಾರ, ಜೂನ್ 26, 2019
22 °C

ಬುರುಡೆ ಶಂಕರ ನಿಮ್ಮೂರಲ್ಲೇ ಇದ್ದಾನೆ: ಕಾಗೋಡು

Published:
Updated:

ಶಿಕಾರಿಪುರ: ‘ರಾಜ್ಯ ಸರ್ಕಾರದಿಂದ ರೈತರ ಸಾಲ ಮನ್ನಾ ಆಗಿಲ್ಲ ಎಂದು ಬುರುಡೆ ಬಿಡುವ ಬುರುಡೆ ಶಂಕರ ನಿಮ್ಮೂರಲ್ಲೇ ಇದ್ದಾನೆ’ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ನಡೆದ ತಾಲ್ಲೂಕು ಕಾಂಗ್ರೆಸ್‌ ಬೂತ್‌ ಕಮಿಟಿ ಅಧ್ಯಕ್ಷರ ಸಭೆಯಲ್ಲಿ ಅವರು ಮಾತನಾಡಿದರು. ‘ರಾಜ್ಯದ ರೈತರ ಸಾಲ ಮನ್ನಾ ಮಾಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಲದ ಹೊರೆಯನ್ನು ಇಳಿಸಿದ್ದಾರೆ. 

ಸಹಕಾರ ಸಂಘಗಳಲ್ಲಿ ಸಾಲ ಮನ್ನಾ ಆಗಿ, ರೈತರು ಹೊಸ ಸಾಲ ಪಡೆದಿದ್ದಾರೆ. ಆದರೆ, ಸಾಲ ಮನ್ನಾದ ಹಣವನ್ನು ಸೊಸೈಟಿಗಳಿಗೆ ಸರ್ಕಾರ ಕೊಟ್ಟಿಲ್ಲ ಎಂದು ನಿಮ್ಮ ಊರಿನ ನಾಯಕ ಬುರುಡೆ ಬಿಡುತ್ತಿದ್ದಾನೆ. ಆ ನಾಯಕನಿಗೆ ಏನು ಹೇಳಬೇಕು’ ಎಂದು ಟೀಕಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry