ಶಂಕಿತರ ರೇಖಾಚಿತ್ರದಲ್ಲಿ ಕುಂಕುಮ–ಆಕ್ಷೇಪ

ಭಾನುವಾರ, ಮೇ 26, 2019
27 °C

ಶಂಕಿತರ ರೇಖಾಚಿತ್ರದಲ್ಲಿ ಕುಂಕುಮ–ಆಕ್ಷೇಪ

Published:
Updated:
ಶಂಕಿತರ ರೇಖಾಚಿತ್ರದಲ್ಲಿ ಕುಂಕುಮ–ಆಕ್ಷೇಪ

ಉಡುಪಿ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಶಂಕಿತರ ರೇಖಾಚಿತ್ರದಲ್ಲಿ ಆರೋಪಿಯೊಬ್ಬನ ಹಣೆಯ ಮೇಲೆ ಕುಂಕುಮ ಪ್ರದರ್ಶನ ಮಾಡಿರುವುದಕ್ಕೆ ವಿಶ್ವ ಹಿಂದೂ ಪರಿಷತ್‌ನ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಗೋಪಾಲ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಪಿಗಳು ಹಿಂದೂ ಸಂಘಟನೆಗಳಿಗೆ ಸೇರಿದವರು ಎಂದು ಬಿಂಬಿಸುವ ರಾಜಕೀಯ ಹುನ್ನಾರವನ್ನು ಸರ್ಕಾರ ಮಾಡುತ್ತಿದೆ ಎಂದರು.

‘ಗೌರಿ ಹತ್ಯೆ ಬಗ್ಗೆ ನಮಗೂ ದಃಖವಿದೆ. ಅವರ ಹತ್ಯೆಯ ಬಗ್ಗೆ ಸರಿಯಾದ ತನಿಖೆಯಾಗಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ನಾವೂ ಬಯಸುತ್ತೇವೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry