ಕ್ರಿಕೆಟ್‌ಗೂ ಸೈ, ಫುಟ್‌ಬಾಲ್‌ಗೂ ಸೈ; ಕೊಹ್ಲಿ ತಂಡ ಗೆಲ್ಲಿಸಿದ ಎಂ.ಎಸ್‌.ದೋನಿ

ಶನಿವಾರ, ಮೇ 25, 2019
22 °C

ಕ್ರಿಕೆಟ್‌ಗೂ ಸೈ, ಫುಟ್‌ಬಾಲ್‌ಗೂ ಸೈ; ಕೊಹ್ಲಿ ತಂಡ ಗೆಲ್ಲಿಸಿದ ಎಂ.ಎಸ್‌.ದೋನಿ

Published:
Updated:
ಕ್ರಿಕೆಟ್‌ಗೂ ಸೈ, ಫುಟ್‌ಬಾಲ್‌ಗೂ ಸೈ; ಕೊಹ್ಲಿ ತಂಡ ಗೆಲ್ಲಿಸಿದ ಎಂ.ಎಸ್‌.ದೋನಿ

ಮುಂಬೈ: ಕ್ರಿಕೆಟ್‌ನಲ್ಲಿ ಎಂ.ಎಸ್‌.ದೋನಿ ಉತ್ತಮ ವಿಕೆಟ್‌ ಕೀಪರ್‌ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಹಾಗಾಗ ಫುಟ್‌ಬಾಲ್‌ನತ್ತ ಗಮನ ಹರಿಸುತ್ತಿದ್ದ ದೋನಿ ಭಾನುವಾರ ಆಲ್‌ ಸ್ಟಾರ್ಸ್‌ ಎಫ್‌ಸಿ ತಂಡದ ವಿರುದ್ಧ ನಡೆದ ಫುಟ್‌ಬಾಲ್‌ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ನೇತೃತ್ವದ ಆಲ್‌ ಹಾರ್ಟ್‌ ಎಫ್‌ಸಿ ತಂಡವನ್ನು ಗೆಲ್ಲಿಸಿದ್ದಾರೆ.

ಈ ಪಂದ್ಯದಲ್ಲಿ ದೋನಿ ಎರಡು ಗೋಲು ಗಳಿಸುವ ಮೂಲಕ ಉತ್ತಮ ಪ್ರದರ್ಶನ ನೀಡಿದ್ದಾರೆ. ಜತೆಗೆ, ವೃತ್ತಿಪರ ಫುಟ್‌ಬಾಲ್‌ ಆಟಗಾರರಿಗಿಂತಲ್ಲೂ ತಾವೇನೂ ಕಡಿಮೆ ಇಲ್ಲ ಎಂಬುಂದನ್ನು ಸಾಬೀತು ಮಾಡಿದ್ದಾರೆ.

ಬಾಲಿವುಡ್‌ ನಟ ಅಭಿಷೇಕ್‌ ಬಚ್ಚನ್‌ ನಾಯಕತ್ವದ ಆಲ್‌ ಸ್ಟಾರ್ಸ್‌ ಎಫ್‌ಸಿ ತಂಡವನ್ನು ವಿರಾಟ್‌ ಕೊಹ್ಲಿ ನಾಯಕತ್ವದ ಆಲ್‌ ಹಾರ್ಟ್‌ ಎಫ್‌ಸಿ ತಂಡ 7–3 ಗೋಲುಗಳ ಅಂತರದಿಂದ ಮಣಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry