ತಾಜ್ ಮಹಲ್ ಹೇಳಿಕೆ: ಸಂಗೀತ್‌ ಸೋಮ್ ವಿರುದ್ಧ ಟ್ವಿಟರ್‌ನಲ್ಲಿ ಟೀಕೆಗಳ ಮಳೆ

ಬುಧವಾರ, ಜೂನ್ 26, 2019
28 °C

ತಾಜ್ ಮಹಲ್ ಹೇಳಿಕೆ: ಸಂಗೀತ್‌ ಸೋಮ್ ವಿರುದ್ಧ ಟ್ವಿಟರ್‌ನಲ್ಲಿ ಟೀಕೆಗಳ ಮಳೆ

Published:
Updated:
ತಾಜ್ ಮಹಲ್ ಹೇಳಿಕೆ: ಸಂಗೀತ್‌ ಸೋಮ್ ವಿರುದ್ಧ ಟ್ವಿಟರ್‌ನಲ್ಲಿ ಟೀಕೆಗಳ ಮಳೆ

ಬೆಂಗಳೂರು: ಭಾರತೀಯ ಸಂಸ್ಕೃತಿಯಲ್ಲಿ ತಾಜ್‌ ಮಹಲ್ ಒಂದು ಕಪ್ಪು ಚುಕ್ಕೆ ಎಂಬ ಬಿಜೆಪಿ ಶಾಸಕ ಸಂಗೀತ್ ಸೋಮ್ ಹೇಳಿಕೆಗೆ ನೆಟಿಜನ್‌ಗಳಿಂದ ತೀಕ್ಷ್ಣ ಆಕ್ಷೇಪ ವ್ಯಕ್ತವಾಗಿದೆ. ನೂರಾರು ಜನ ಸಂಗೀತ್ ಸೋಮ್ ಅವರನ್ನು ಟ್ವಿಟರ್‌ನಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.

ತಾಜ್‌ ಮಹಲ್ ಅನ್ನು ದೇಶವಿರೋಧಿಗಳು ನಿರ್ಮಿಸಿದ್ದು. ಹೀಗಾಗಿ ಅದು ಭಾರತೀಯ ಸಂಸ್ಕೃತಿಯ ಬಾಗವಲ್ಲ ಎಂದು ಸೋಮ್ ಹೇಳಿದ್ದರು. ಇದಕ್ಕೆ ಟ್ವಿಟರ್‌ನಲ್ಲಿ ವ್ಯಂಗ್ಯವಾಗಿ ಪ್ರತಿಕ್ರಿಯಿಸಿರುವ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಒವೈಸಿ, ‘ದೆಹಲಿಯ ಕೆಂಪುಕೋಟೆಯನ್ನು ನಿರ್ಮಿಸಿದವರೂ ದೇಶವಿರೋಧಿಗಳೇ. ಪ್ರಧಾನಿ ಮೋದಿ ಅಲ್ಲಿ ತ್ರಿವರ್ಣ ಧ್ವಜ ಹಾರಿಸುವುದನ್ನು ನಿಲ್ಲಿಸುತ್ತಾರೆಯೇ? ತಾಜ್ ಮಹಲ್‌ಗೆ ಭೇಟಿ ನೀಡಬೇಡಿ ಎಂದು ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದೇಶದ ಮತ್ತು ವಿದೇಶಿ ಪ್ರವಾಸಿಗರಿಗೆ ಹೇಳಬಲ್ಲರೇ’ ಎಂದು ಪ್ರಶ್ನಿಸಿದ್ದಾರೆ.

‘ಆಗಸ್ಟ್ 15ರಂದು ಇನ್ನು ಕೆಂಪುಕೋಟೆಯಲ್ಲಿ ಭಾಷಣವಿಲ್ಲ. ಆ ದಿನ ಪ್ರಧಾನಿಯವರು ನೆಹರು ಸ್ಟೇಡಿಯಂನಿಂದ ಭಾಷಣ ಮಾಡಲಿದ್ದಾರೆ’ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ.

‘ತಾಜ್‌ ಮಹಲ್ ನಿರ್ಮಿಸಿದವರು ದೇಶಕ್ಕೆ ಹಾನಿ ಮಾಡಿದವರು... ಆದರೆ, ಪ್ರವಾಸೋದ್ಯಮಕ್ಕೆ ನೆರವಾಗುವಂಥ ಏನಾದರೂ ಒಂದನ್ನು ಆರ್‌ಎಸ್‌ಎಸ್‌ ಕಟ್ಟಿದೆಯೇ?’ ಎಂದು ಕಾಮಿಡಿಯನ್ ಕುನಾಲ್ ಕಮ್ರಾ ವ್ಯಂಗ್ಯವಾಡಿದ್ದಾರೆ.

‘ಸಂಗೀತ್ ಸೋಮ್, ತಾಜ್‌ ಮಹಲ್ ಮಾತ್ರವಲ್ಲದೆ ಸಂಸತ್ ಭವನ ಮತ್ತು ರಾಷ್ಟ್ರಪತಿ ಭವನವನ್ನೂ ದೇಶವಿರೋಧಿಗಳೇ ಕಟ್ಟಿಸಿದ್ದಾರೆ. ಅವುಗಳನ್ನೂ ಮುಚ್ಚಲು ನೀವು ಮುಂದಾಗುತ್ತೀರಾ’ ಎಂದು ಅನೂಪ್ ಚಾತೋಥ್ ಎಂಬುವವರು ಪ್ರಶ್ನಿಸಿದ್ದಾರೆ.

ಸಂಗೀತ್‌ ಸೋಮ್ ಹೇಳಿಕೆಗೆ ಸಾವಿರಕ್ಕೂ ಹೆಚ್ಚು ಮಂದಿ ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ...
ತಾಜ್‌ ಮಹಲ್ ಕಪ್ಪು ಚುಕ್ಕೆ, ಇತಿಹಾಸವನ್ನು ಬದಲಿಸುತ್ತೇವೆ: ಬಿಜೆಪಿ ಶಾಸಕ ಸಂಗೀತ್‌ ಸೋಮ್ ವಿವಾದಿತ ಹೇಳಿಕೆ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry