ಗುರುವಾರ , ಸೆಪ್ಟೆಂಬರ್ 19, 2019
29 °C

ಪರೀಕ್ಷಾ ಅಕ್ರಮ: ಮೂವರ ಬಂಧನ

Published:
Updated:
ಪರೀಕ್ಷಾ ಅಕ್ರಮ: ಮೂವರ ಬಂಧನ

ದಾವಣಗೆರೆ: ಮೊರಾರ್ಜಿ ದೇಸಾಯಿ ವಸತಿಯುತ ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳ ನೇಮಕಾತಿಗೆ ನಡೆಯುತ್ತಿದ್ದ ಪರೀಕ್ಷೆ ವೇಳೆ ಅಕ್ರಮದಲ್ಲಿ ಭಾಗಿಯಾಗಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಪರೀಕ್ಷಾ ಅಕ್ರಮ ಕುರಿತು ಖಚಿತ ಮಾಹಿತಿ ಆಧರಿಸಿ ಸೋಮವಾರ ಮಧ್ಯಾಹ್ನ ಹೆಚ್ಚುವರಿ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ ನೇತೃತ್ವದ ತಂಡ 2 ಪರೀಕ್ಷಾ ಕೇಂದ್ರದ ಮೇಲೆ ದಾಳಿ ನಡೆಸಿತು. ಈ ಸಂದರ್ಭ ನೂತನ ಕಾಲೇಜಿನಲ್ಲಿ ಚನ್ನಗಿರಿ ತಾಲ್ಲೂಕಿನ ಬೆಳಲಗೆರೆಯ ಡಿ.ಶ್ರೀನಿವಾಸ್‌, ದಾವಣಗೆರೆ ತಾಲ್ಲೂಕಿನ ಒಬಜ್ಜಿಹಳ್ಳಿಯ ಸುಭಾಷ್‌ ಸಿಕ್ಕಿಬಿದ್ದಿದ್ದಾರೆ. ಮತ್ತೊಂದೆಡೆ, ಮಿಲ್ಲತ್ ಶಾಲೆಯಲ್ಲಿ ಪರೀಕ್ಷೆ ಬರೆಯುತ್ತಿದ್ದ ಚನ್ನಗಿರಿ ತಾಲ್ಲೂಕಿನ ಮಿಯಾಪುರದ ಆರ್.ತಿಪ್ಪೇಶ್‌ ನಾಯ್ಕ ಸಿಕ್ಕಿಬಿದ್ದಿದ್ದಾನೆ.

ಲಾಡ್ಜ್‌ನಲ್ಲಿ ಕುಳಿತು ಮೊಬೈಲ್‌ನಲ್ಲಿ ಕೀ ಉತ್ತರ ನೀಡುತ್ತಿದ್ದ ಪ್ರಮುಖ ಆರೋಪಿ ಪ್ರದೀಪ್‌ ಪರಾರಿಯಾಗಿದ್ದಾನೆ. ಬಂಧಿತರಿಂದ ರಿಸೀವರ್, ಮೊಬೈಲ್‌, ಮೈಕ್‌ ಮೊದಲಾದ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಉದ್ಯೋಗ ಖಾತರಿಯಾದಲ್ಲಿ ಪ್ರದೀಪ್‌ಗೆ ತಲಾ ₹ 11.5 ಲಕ್ಷ  ನೀಡುವುದಾಗಿ ಬಂಧಿತರು ವಿಚಾರಣೆ ವೇಳೆ ತಿಳಿಸಿದ್ದಾರೆ ಎನ್ನಲಾಗಿದೆ

Post Comments (+)