ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಕನ್ಯಾ, ಶಾರದಾಗೆ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ

Last Updated 16 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು 2017–18ನೇ ಸಾಲಿನ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ಪ್ರಕಟಿಸಿದೆ. ಮೈಸೂರಿನ ಗಾಯಕಿ ಸುಕನ್ಯಾ ಪ್ರಭಾಕರ ಮತ್ತು ಮಂಗಳೂರಿನ ನೃತ್ಯಗಾರ್ತಿ ಶಾರದಾ ಮಣಿ ಶೇಖರ್ ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ವಾರ್ಷಿಕ ಪ್ರಶಸ್ತಿ ವಿವರ ಇಂತಿದೆ:

ಕರ್ನಾಟಕ ಸಂಗೀತ: ಹಾಡುಗಾರಿಕೆಯಲ್ಲಿ ಕೋಲಾರದ ರಾಮಪ್ಪ ನಾಯ್ಡು, ವೀಣೆಯಲ್ಲಿ ಮೈಸೂರಿನ ಬಿ.ಎಸ್. ವಿಜಯರಾಘವನ್, ನಾದಸ್ವರದಲ್ಲಿ ಭದ್ರಾವತಿಯ ಕೆ.ಎಸ್. ಮೋಹನಕುಮಾರ್.

ಹಿಂದೂಸ್ತಾನಿ ಸಂಗೀತ: ಬಾನ್ಸುರಿಯಲ್ಲಿ ಹೊನ್ನಾವರದ ಶಂಭುಭಟ್ ಕಡತೊಕ, ಗಾಯನದಲ್ಲಿ ಕುಂದಗೋಳದ ಹುಸೇನಸಾಬ್ ನದಾಫ್ ಹಾಗೂ ರಾಯಚೂರಿನ ರಾಮಾಚಾರ್ಯ ಕಾಖಂಡಕಿ, ಶಹನಾಯಿಯಲ್ಲಿ ಅಮರಾವತಿಯ ಬಸಪ್ಪ ಎಚ್‌. ಭಜಂತ್ರಿ.

ನೃತ್ಯ: ಬೆಂಗಳೂರಿನ ಸುಪರ್ಣಾ ವೆಂಕಟೇಶ್, ಎಸ್. ನಾಗಭೂಷಣ್, ಶಿವಮೊಗ್ಗದ ಎಸ್. ಕೇಶವಕುಮಾರ.

ಸುಗಮ ಸಂಗೀತ: ಬೆಂಗಳೂರಿನ ಕೆ.ಎಂ. ಕುಸುಮಾ, ದಾವಣಗೆರೆಯ ಟಿ. ರಾಜಾರಾಂ.

ಕಥಾ ಕೀರ್ತನ:‌ ಗದಗ್‌ನ ಕಲ್ಲಿನಾಥ್ ಶಾಸ್ತ್ರಿ ಹಾಗೂ ತುರುವೇಕೆರೆಯ ಹುಲಿಕಲ್ ನಾಗರಾಜ್.

ಗಮಕ: ಬೆಂಗಳೂರಿನ ಸತ್ಯವತಿ ರಾಮನಾಥ್.

ಸಂಘ ಸಂಸ್ಥೆ: ಧಾರವಾಡದ ಭಾರತೀಯ ಸಂಗೀತ ವಿದ್ಯಾಲಯದ ಸಿತಾರ ರತ್ನ ರೆಹಮತ್ ಖಾನ್.

ಗೌರವ ಪ್ರಶಸ್ತಿ ತಲಾ ₹ 50,000 ನಗದು ಪುರಸ್ಕಾರ ಒಳಗೊಂಡಿದ್ದು,  ವಾರ್ಷಿಕ ಪ್ರಶಸ್ತಿ ತಲಾ ₹ 25,000 ನಗದು ಒಳಗೊಂಡಿದೆ. ನ.27ರಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಕಾಡೆಮಿ ತಿಳಿಸಿದೆ.

ಲಲಿತಕಲಾ ಅಕಾಡೆಮಿ ಅಧ್ಯಕ್ಷರಾಗಿ ಎಂ.ಜಿ. ಕಮಲಾಕ್ಷಿ
ಬೆಂಗಳೂರು: ಲಲಿತಕಲಾ ಅಕಾಡೆಮಿ ಅಧ್ಯಕ್ಷರಾಗಿ ಎಂ.ಜಿ. ಕಮಲಾಕ್ಷಿ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.

ಈ ಹಿಂದೆ ಅಧ್ಯಕ್ಷರಾಗಿದ್ದ ಎಂ.ಎಸ್. ಮೂರ್ತಿ ಅವರ ಅವಧಿ ಜುಲೈನಲ್ಲಿ ಮುಕ್ತಾಯಗೊಂಡಿತ್ತು. ಖಾಲಿ ಇದ್ದ ಹುದ್ದೆಗೆ ಹಿರಿಯ ಕಲಾವಿದೆ ಕಮಲಾಕ್ಷಿ ಅವರನ್ನು ನೇಮಕ ಮಾಡಲಾಗಿದೆ ಎಂದು ಸಂಸ್ಕೃತಿ ಸಚಿವೆ ಉಮಾಶ್ರೀ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT