ಏಷ್ಯಾಕಪ್‌ಗೆ ಭಾರತ ಮಹಿಳಾ ತಂಡ: ರಾಣಿಗೆ ಸಾರಥ್ಯ

ಶನಿವಾರ, ಮೇ 25, 2019
33 °C

ಏಷ್ಯಾಕಪ್‌ಗೆ ಭಾರತ ಮಹಿಳಾ ತಂಡ: ರಾಣಿಗೆ ಸಾರಥ್ಯ

Published:
Updated:

ನವದೆಹಲಿ (ಪಿಟಿಐ): ಜಪಾನ್‌ನ ಕಾಕಾಮಿಗಹರದಲ್ಲಿ ಅಕ್ಟೋಬರ್‌ 28ರಿಂದ ನಡೆಯುವ ಏಷ್ಯಾಕಪ್‌ ಮಹಿಳಾ ಹಾಕಿ ಟೂರ್ನಿಗೆ ಸೋಮವಾರ 18 ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಗಿದೆ.

ಅನುಭವಿ ಸ್ಟ್ರೈಕರ್‌ ರಾಣಿ ರಾಂಪಾಲ್‌ ತಂಡವನ್ನು ಮುನ್ನಡೆಸಲಿ ದ್ದಾರೆ. ಗೋಲ್‌ಕೀಪರ್‌ ಸವಿತಾ ಉಪನಾಯಕಿಯಾಗಿದ್ದಾರೆ.

ಕರ್ನಾಟಕದ ಯಾವ ಆಟಗಾರ್ತಿಗೂ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಭಾರತ ತಂಡ ‘ಎ’ ಗುಂಪಿನಲ್ಲಿ ಸ್ಥಾನ ಗಳಿಸಿದೆ. ಚೀನಾ, ಮಲೇಷ್ಯಾ ಮತ್ತು ಸಿಂಗಪುರ ತಂಡಗಳೂ ಇದೇ ಗುಂಪಿನಲ್ಲಿವೆ.

ಅಕ್ಟೋಬರ್‌ 28 ರಂದು ಭಾರತ –ಸಿಂಗಪುರ ತಂಡಗಳು ಆಡಲಿವೆ.

ತಂಡ ಇಂತಿದೆ: ಗೋಲ್‌ ಕೀಪರ್‌: ಸವಿತಾ (ಉಪ ನಾಯಕಿ) ಮತ್ತು ರಜನಿ ಎತಿಮರ್ಫು. ಡಿಫೆಂಡರ್ಸ್‌: ದೀಪ್‌ ಗ್ರೇಸ್‌ ಎಕ್ಕಾ, ಸುನಿತಾ ಲಾಕ್ರಾ, ಸುಶೀಲಾ ಚಾನು ಫುಖ್ರಾಮ್‌ಬಮ್‌, ಸುಮನ್‌ ದೇವಿ ತೋಕಾಮ್‌ ಮತ್ತು ಗುರ್ಜಿತ್‌ ಕೌರ್‌. ಮಿಡ್‌ಫೀಲ್ಡರ್ಸ್‌: ನಿಕಿ ಪ್ರಧಾನ್‌, ನಮಿತಾ ಟೊಪ್ಪೊ, ಮೋನಿಕಾ, ಲಿಲಿಮಾ ಮಿಂಜ್‌ ಮತ್ತು ನೇಹಾ ಗೋಯಲ್‌. ಫಾರ್ವರ್ಡ್ಸ್‌: ರಾಣಿ ರಾಂಪಾಲ್‌ (ನಾಯಕಿ), ವಂದನಾ ಕಟಾರಿಯಾ, ಲಾಲ್ರೆಮ್‌ಸಿಯಾಮಿ, ಸೋನಿಕಾ, ನವನೀತ್‌ ಕೌರ್‌ ಮತ್ತು ನವಜ್ಯೋತ್‌ ಕೌರ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry