ತನಿಖೆ ವಿಳಂಬ: ಹೈಕೋರ್ಟ್‌ ತರಾಟೆ

ಭಾನುವಾರ, ಜೂನ್ 16, 2019
32 °C
ನ್ಯಾಯಾಲಯ ಮುಂದೆ ಪ್ರತಿಭಟನೆ: ನಜೀಬ್ ತಾಯಿ ವಶಕ್ಕೆ

ತನಿಖೆ ವಿಳಂಬ: ಹೈಕೋರ್ಟ್‌ ತರಾಟೆ

Published:
Updated:
ತನಿಖೆ ವಿಳಂಬ: ಹೈಕೋರ್ಟ್‌ ತರಾಟೆ

ನವದೆಹಲಿ: ‘ಜವಾಹರ್‌ ಲಾಲ್‌ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ನಜೀಬ್‌ ಅಹ್ಮದ್‌ ನಾಪತ್ತೆ ಪ್ರಕರಣದ ತನಿಖೆಯಲ್ಲಿ ಕೇಂದ್ರಿಯ ತನಿ

ಖಾದಳವು (ಸಿಬಿಐ) ತೀವ್ರ ನಿರಾಸಕ್ತಿ ತೋರುತ್ತಿದೆ’ ಎಂದು ದೆಹಲಿ ಹೈಕೋರ್ಟ್‌ ಚಾಟಿ ಬೀಸಿದೆ.

ಇದರ ಬೆನ್ನಲ್ಲೇ ಹೈಕೋರ್ಟ್‌ ಮುಂದೆ ಪ್ರತಿಭಟನೆ ನಡೆಸಿದ ನಜೀಬ್‌ ತಾಯಿ ಹಾಗೂ 30 ಮಂದಿಯನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದರು.

ನಜೀಬ್‌ ನಾಪತ್ತೆ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ಎಸ್‌. ಸಿಸ್ತಾನಿ ಹಾಗೂ ಚಂದರ್ ಶೇಖರ್‌, ‘ಒಂದು ವರ್ಷದಿಂದ ನಜೀಬ್‌ ನಾಪತ್ತೆಯಾಗಿದ್ದು, ಆತ ಎಲ್ಲಿದ್ದಾನೆ ಎಂಬ ಬಗ್ಗೆ ಹುಡುಕಲು ಸಿಬಿಐಗೆ ಸಾಧ್ಯವಾಗಿಲ್ಲ. ಕಾಗದದ ಮೇಲೂ ಯಾವುದೇ ಫಲಿತಾಂಶ ಕಂಡುಬಂದಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಜೀಬ್‌ ತಾಯಿ ವಶಕ್ಕೆ: ‘ನಜೀಬ್‌ ತಾಯಿ ಫಾತಿಮಾ ನಫೀಸ್‌ ಹಾಗೂ ಜೆಎನ್‌ಯು ವಿದ್ಯಾರ್ಥಿಗಳು ಹೈಕೋರ್ಟ್ ಮುಂದೆ ಪ್ರತಿಭಟಿಸುತ್ತಿದ್ದರು, ನ್ಯಾಯಾಲಯದ ಒಳಗೆ ಪ್ರವೇಶಿಸಲು ಯತ್ನಿಸಿದ ವೇಳೆ ಬಂಧಿಸಲಾಗಿದೆ’ ಎಂದು ಡಿಸಿಪಿ ಬಿ.ಕೆಸಿಂಗ್‌ ತಿಳಿಸಿದರು.ಬಂಧಿತರಲ್ಲಿ ಬಹುತೇಕ ವಿದ್ಯಾರ್ಥಿಗಳಿದ್ದು, ಬರಾಕಾಂಬ ಪೊಲೀಸ್‌ ಠಾಣೆಗೆ ಕರೆದೊಯ್ಯಲಾಯಿತು ಎಂದರು. 2016ರ ಅಕ್ಟೋಬರ್‌ 15ರಂದು ನವದೆಹಲಿಯ ಮಹಿಮಾಂಡೋವಿ ಹಾಸ್ಟೆಲ್‌ನಿಂದ 27 ವರ್ಷದ ಎಂಎಸ್ಸಿ ವಿದ್ಯಾರ್ಥಿ ನಜೀಬ್‌ ಕಣ್ಮರೆಯಾಗಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry