ರಸ್ತೆಯಲ್ಲೇ ಕಸದ ರಾಶಿ

ಮಂಗಳವಾರ, ಜೂನ್ 25, 2019
22 °C
ದುರ್ವಾಸನೆ, ರಸ್ತೆ ಗುಂಡಿಗೆ ನಿವಾಸಿಗಳು ಹೈರಾಣು

ರಸ್ತೆಯಲ್ಲೇ ಕಸದ ರಾಶಿ

Published:
Updated:
ರಸ್ತೆಯಲ್ಲೇ ಕಸದ ರಾಶಿ

ಬೆಂಗಳೂರು: 'ನಗರವನ್ನು ಕಸಮುಕ್ತಗೊಳಿಸುವುದಾಗಿ ಮುಖ್ಯಮಂತ್ರಿ ಮತ್ತು ಮೇಯರ್‌ ಇಬ್ಬರೂ ಹೇಳುತ್ತಲೇ ಇದ್ದಾರೆ. ಆದರೆ, ನಗರದಲ್ಲಿ ಕಸ ವಿಲೇವಾರಿ ಸರಿಯಾಗಿ ನಡೆಯದೆ, ನಡು ರಸ್ತೆಗಳಲ್ಲೇ ಕಸದ ರಾಶಿಗಳು ಕಾಣಿಸಿಕೊಳ್ಳುತ್ತಿವೆ.

ಕೊಳೆತು ದುರ್ನಾತ ಬೀರುತ್ತಿರುವ ಕಸ ಜನವಸತಿ ಪ್ರದೇಶಗಳ ನೈರ್ಮಲ್ಯವನ್ನೂ ಕೆಡಿಸುತ್ತಿದೆ. ಜನರು ಮೂಗುಮುಚ್ಚಿಕೊಂಡು ತಿರುಗಾಡುವ ಪರಿಸ್ಥಿತಿ ತಲೆದೋರಿದೆ' ಎಂದು ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.

‘ದೊಡ್ಡಕಲ್ಲಸಂದ್ರದ ನಾರಾಯಣನಗರ ಮೊದಲ ಹಂತದಲ್ಲಿ ಕಸ ವಿಲೇವಾರಿಯಾಗುತ್ತಿಲ್ಲ. ಟ್ರಕ್‌ಗಳಲ್ಲಿ ಕಸ ತಂದು ನಡು ರಸ್ತೆಗಳಿಗೆ ಸುರಿಯುವುದು ನಿರಂತರವಾಗಿ ನಡೆಯುತ್ತಿದೆ. ಕನಕಪುರ ರಸ್ತೆಯಿಂದ ಆವಲಹಳ್ಳಿಗೆ ಹೋಗುವ ಜೋಡಿ ರಸ್ತೆ ಕಸದಿಂದ ತುಂಬಿ ಹೋಗಿದ್ದು, ದುರ್ನಾತ ಬೀರುತ್ತಿದೆ. ಈ ರಸ್ತೆಯಲ್ಲಿ ಸಂಚರಿಸುವ ಬೈಕ್‌ ಸವಾರರು, ಪಾದಚಾರಿಗಳು ದುರ್ವಾಸನೆ ಸಹಿಸಲಾಗದೆ, ಮೂಗು ಮುಚ್ಚಿಕೊಳ್ಳುವ ಸ್ಥಿತಿ ಇದೆ’ ಎಂದು ಸ್ಥಳೀಯರು ದೂರುತ್ತಾರೆ.

‘ಕಸದಿಂದ ಉಂಟಾಗುತ್ತಿರುವ ದುರ್ವಾಸನೆಗೆ ಮುಕ್ತಿ ಕಾಣಿಸಲು ಈ ಭಾಗವನ್ನು ಪ್ರತಿನಿಧಿಸುವ ಶಾಸಕರು ಮತ್ತು ಪಾಲಿಕೆ ಸದಸ್ಯರು ಹಾಗೂ ಪಾಲಿಕೆ ಅಧಿಕಾರಿಗಳು ಮುಂದಾಗಬೇಕು’ ಎಂದು ಒತ್ತಾಯಿಸಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry