ಮುಖ್ಯಮಂತ್ರಿಯನ್ನು ಡೆಂಗಿ ಸೊಳ್ಳೆಗೆ ಹೋಲಿಸಿ ವ್ಯಂಗ್ಯ

ಸೋಮವಾರ, ಜೂನ್ 24, 2019
24 °C

ಮುಖ್ಯಮಂತ್ರಿಯನ್ನು ಡೆಂಗಿ ಸೊಳ್ಳೆಗೆ ಹೋಲಿಸಿ ವ್ಯಂಗ್ಯ

Published:
Updated:
ಮುಖ್ಯಮಂತ್ರಿಯನ್ನು ಡೆಂಗಿ ಸೊಳ್ಳೆಗೆ ಹೋಲಿಸಿ ವ್ಯಂಗ್ಯ

ಚೆನ್ನೈ: ತಮಿಳುನಾಡಿನಲ್ಲಿ ಡೆಂಗಿ ಜ್ವರದಿಂದ ಸಾವು ಸಂಭವಿಸುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿರುವ ವಿರೋಧ ಪಕ್ಷ ಡಿಎಂಕೆ, ಮುಖ್ಯಮಂತ್ರಿ ಮತ್ತು ಅವರ ಸಂಪುಟದ ಸದಸ್ಯರನ್ನು ಡೆಂಗಿ ಸೊಳ್ಳೆಗಳಂತೆ ವ್ಯಂಗ್ಯಚಿತ್ರ ರಚಿಸಿ ಟೀಕಿಸಿದೆ.

ಡಿಎಂಕೆಯ ಮುಖವಾಣಿ ‘ಮುರಸೋಳಿ’ ಪತ್ರಿಕೆಯಲ್ಲಿ, ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಮತ್ತು ಉಪಮುಖ್ಯಮಂತ್ರಿ ಓ.ಪನ್ನೀರ ಸೆಲ್ವಂ ಅವರನ್ನು ಸೊಳ್ಳೆಗಳ ರೀತಿ ಚಿತ್ರಿಸಿ ಮೊದಲ ಪುಟದಲ್ಲಿ ಪ್ರಕಟಿಸಿದೆ. ಇವರಿಬ್ಬರನ್ನು ದ್ರೋಹಿಗಳು ಎಂದು ಜರಿಯಲಾಗಿದೆ. ಇದೇ ವ್ಯಂಗ್ಯಚಿತ್ರವನ್ನು ವಾಟ್ಸ್‌ಆ್ಯಪ್‌ಗಳಲ್ಲಿ ಹರಿಯಬಿಡಲಾಗಿದೆ.

ಆರೋಗ್ಯ ಸಚಿವ ಸಿ. ವಿಜಯಭಾಸ್ಕರ್‌ ಅವರ ಹೆಸರನ್ನು ಡೆಂಗಿ ಎಂದೂ, ಪಳನಿಸ್ವಾಮಿ ಸರ್ಕಾರವನ್ನು ಡೆಂಗಿ ಆಡಳಿತ ಎಂದು ವ್ಯಂಗ್ಯ ಮಾಡಲಾಗಿದೆ.

ಡಿಎಂಕೆ‌ ಈ ವಿಷಯವನ್ನು ರಾಜಕೀಯಕ್ಕೆ ಬಳಸುತ್ತಿದೆ ಎಂದು ಪಳನಿಸ್ವಾಮಿ ಟೀಕಿಸಿದ್ದಾರೆ. ಡೆಂಗಿ ಜ್ವರವನ್ನು ತಡೆಗಟ್ಟುವ ಸಲುವಾಗಿ ಸರ್ಕಾರ ‘ನೀಲವೆಂಬು ಕದಿನೀರ್’ (ಕಹಿಬೇವಿನಿಂದ ತಯಾರಿಸಿದ ಸಾಂಪ್ರದಾಯಿಕ ಔಷಧಿ) ವಿತರಣೆ ಮತ್ತು ಡೆಂಗಿ ಜಾಗೃತಿ ಕಾರ್ಯಕ್ರಮಗಳನ್ನು ಹಾಕಿಕೊಂಡಿರುವಾಗ ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್‌ ಮತ್ತು ಕೆ. ದಿನಕರನ್‌ ಅವರು ಟೀಕಿಸುತ್ತಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry