ಆಹಾರ ಸಂಸ್ಕರಣೆ: ₹ 65 ಸಾವಿರ ಕೋಟಿ ಹೂಡಿಕೆ ನಿರೀಕ್ಷೆ

ಶನಿವಾರ, ಮೇ 25, 2019
27 °C

ಆಹಾರ ಸಂಸ್ಕರಣೆ: ₹ 65 ಸಾವಿರ ಕೋಟಿ ಹೂಡಿಕೆ ನಿರೀಕ್ಷೆ

Published:
Updated:
ಆಹಾರ ಸಂಸ್ಕರಣೆ: ₹ 65 ಸಾವಿರ ಕೋಟಿ ಹೂಡಿಕೆ ನಿರೀಕ್ಷೆ

ನವದೆಹಲಿ (ಪಿಟಿಐ): ದೇಶಿ ಆಹಾರ ಸಂಸ್ಕರಣೆ ಉದ್ದಿಮೆಯಲ್ಲಿ ಭಾರತವು ₹ 65 ಸಾವಿರ ಕೋಟಿಗಳಷ್ಟು ಬಂಡವಾಳ ಹೂಡಿಕೆ ಆಕರ್ಷಿಸಲಿದೆ.

‘ನವೆಂಬರ್‌ ತಿಂಗಳಲ್ಲಿ ಇಲ್ಲಿ ನಡೆಯಲಿರುವ ‘ವಿಶ್ವ ಆಹಾರ’ ಬೃಹತ್‌ ಸಮಾವೇಶಕ್ಕೆ ಮೊದಲೇ ವಿದೇಶಿ ಸಂಸ್ಥೆಗಳು ಈ ಮೊತ್ತದ ಹೂಡಿಕೆಗೆ ಬದ್ಧತೆ ತೋರಿಸಿವೆ’ ಎಂದು ಕೇಂದ್ರ ಆಹಾರ ಸಂಸ್ಕರಣೆ ಸಚಿವೆ ಹರ್ಸಿಮ್ರತ್‌ ಕೌರ್‌ ಬಾದಲ್‌ ಅವರು ಹೇಳಿದ್ದಾರೆ.

‘30 ದೇಶಗಳು, ಬಹುರಾಷ್ಟ್ರೀಯ ಸಂಸ್ಥೆಗಳ 50 ಸಿಇಒಗಳು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ₹ 65 ಸಾವಿರ ಕೋಟಿ ಹೂಡಿಕೆ ಗುರಿ ನಿಗದಿಪಡಿಸಲಾಗಿತ್ತು. ಈಗಾಗಲೇ ಈ ಗುರಿ ತಲುಪಲಾಗಿದೆ.

‘ನವೆಂಬರ್‌ 3ರಿಂದ ನಡೆಯಲಿರುವ ಮೂರು ದಿನಗಳ ಸಮಾವೇಶದ ಕೊನೆಯಲ್ಲಿ ಈ ಹೂಡಿಕೆ ಮೊತ್ತ ಇನ್ನೂ ಹೆಚ್ಚಾಗಬಹುದು’ ಎಂದು ಹೇಳಿದ್ದಾರೆ. ಹೂಡಿಕೆಯ ಬದ್ಧತೆ ಪ್ರದರ್ಶಿಸಿದ ಸಂಸ್ಥೆಗಳ ಹೆಸರು ಬಹಿರಂಗಪಡಿಸಲು ಅವರು ನಿರಾಕರಿಸಿದರು.

‘ಭಾರತವು ಸದ್ಯಕ್ಕೆ ₹ 39 ಲಕ್ಷ ಕೋಟಿಗಳ ರಿಟೇಲ್‌ ವಹಿವಾಟು ಹೊಂದಿದ್ದು, ಅದರಲ್ಲಿ ಆಹಾರ ಚಿಲ್ಲರೆ ವಹಿವಾಟಿನ ಪ್ರಮಾಣ ಶೇ 70ರಷ್ಟಿದೆ. ಆಹಾರಕ್ಕೆ ಮಾಡುವ ವೆಚ್ಚವು ಮುಂದಿನ ವರ್ಷ ದುಪ್ಪಟ್ಟಾಗಲಿದೆ. ದೇಶಿ ಆಹಾರ ಮಾರುಕಟ್ಟೆ ತುಂಬ ವಿಶಾಲವಾಗಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry