ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತತ ಮಳೆಯಿಂದ ಕಲ್ಲಂಗಡಿ ಬೆಳೆ ನಾಶ

Last Updated 17 ಅಕ್ಟೋಬರ್ 2017, 5:29 IST
ಅಕ್ಷರ ಗಾತ್ರ

ಮೂಡಲಗಿ: ಕಳೆದ ಎರಡು ವಾರಗಳಿಂದ ಮೂಡಲಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಿಟ್ಟುಬಿಡದೆ ಮಳೆ ಸುರಿಯುತ್ತಿದ್ದು, ಸಮೀಪದ ಅರಳಿಮಟ್ಟಿ ಗ್ರಾಮದ ಶಿವಾನಂದ ಮಲ್ಲಪ್ಪ ಬ್ಯಾಳಿ ಅವರು ಬೆಳೆದ ಎರಡು ಎಕರೆ ಕಲ್ಲಂಗಡಿ ಬೆಳೆಯ ಮಳೆಯ ಹೊಡೆತಕ್ಕೆ ನಾಶವಾಗಿ ಕಂಗಾಲಾಗಿದ್ದಾರೆ.

ಸತತ ಮಳೆಯಿಂದ ತೋಟದಲ್ಲಿಯ ಎರಡು ಕೊಳವೆ ಬಾವಿಯಿಂದ ನೀರು ಹೊರಚೆಲ್ಲುತ್ತಿದ್ದು, ಇದರಿಂದ ತೋಟದ ತುಂಬೆಲ್ಲ ನೀರು ನಿಂತು ತೋಟವು ಕರೆಯ ರೀತಿಯಲ್ಲಿ ಕಾಣುವಂತಾಗಿದೆ.

ಅಂದಾಜು ಕಲ್ಲಂಗಡಿ ಬೆಳಿಯಿಂದ ₹6 ಲಕ್ಷ ಹಾನಿಯಾಗಿದ್ದು, ಕಲ್ಲಂಗಡಿ ಬೆಳೆಗಾಗಿ ಬ್ಯಾಂಕಿನಿಂದ ₹1.40 ಲಕ್ಷ ಸಾಲವನ್ನು ಮಾಡಿ, ಕಲ್ಲಂಗಡಿಯನ್ನು ಬೆಳೆಸಿದ್ದರು. ಹೀಗೆ ಮಳೆಗೆ ಕಲ್ಲಂಗಡಿ ಕೊಚ್ಚಿಹೋಗಿದ್ದರಿಂದ ಏನು ಮಾಡಬೇಕು ಎಂದು ರೈತ ಶಿವಾನಂದ ಚಿಂತಾಭ್ರಾಂತನಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT