ಮಂಗಳವಾರ, ಸೆಪ್ಟೆಂಬರ್ 17, 2019
21 °C

ಈರುಳ್ಳಿ ಬೆಳೆ ನಾಶ; ಆತಂಕದಲ್ಲಿ ರೈತರು

Published:
Updated:

ಭಾಲ್ಕಿ: ತಾಲ್ಲೂಕಿನ ಜೈನಾಪೂರ ಗ್ರಾಮದಲ್ಲಿ ಕಳೆದ ಎರಡು–ಮೂರು ದಿನಗಳ ಹಿಂದೆ ಸುರಿದ ಮಳೆಗೆ ಅಪಾರ ಬೆಳೆ ಹಾನಿ ಉಂಟಾಗಿದೆ. ಹಿಂಗಾರು ಹಂಗಾಮಿನಲ್ಲಿ ಬಿತ್ತನೆಯಾದ ಕಡಲೆ ಬೀಜ ಮೊಳಕೆಯೊಡೆಯುವ ಮೊದಲೇ ಮಳೆ ನೀರಿಗೆ ಕೊಚ್ಚಿಕೊಂಡು ಹೋಗಿವೆ.

ಉಳಿದಂತೆ ನಾಟಿ ಮಾಡಿದ್ದ ಈರುಳ್ಳಿ ಬೆಳೆ ಮಳೆ ನೀರಿಗೆ ಹರಿದುಕೊಂಡು ಹೋಗಿದೆ. ಜತೆಗೆ ಜಮೀನಿನ ಫಲವತ್ತತಾದ ಮಣ್ಣು ಸಹ ಕೊಚ್ಚಿಕೊಂಡು ಹೋಗಿದ್ದು, ಜಮೀನಿನಲ್ಲಿ ತಗ್ಗು ಬಿದ್ದು, ಕಲ್ಲುಗಳು ತೇಲಿಕೊಂಡಿವೆ.

ಗ್ರಾಮದ ಶಿವರಾಜ ಹಾಲೇಪೂರ್ಗಾ, ಅಕ್ಬರ್ ಎಂಬುವರ ಸುಮಾರು 5 ಎಕರೆ ಜಮೀನಿನಲ್ಲಿ ನಾಟಿ ಮಾಡಿದ್ದ ಈರುಳ್ಳಿ ಬೆಳೆ ಸಂಪೂರ್ಣ ನಾಶವಾಗಿದೆ. ಸುಕೇಶ ರೆಡ್ಡಿ ಎಂಬುವರ 1 ಎಕರೆ ಈರುಳ್ಳಿ ಬೆಳೆ ಹಾಳಾಗಿದ್ದು, ರೈತರು ಆತಂಕಕ್ಕೆ ಸಿಲುಕಿದ್ದಾರೆ. ಅಧಿಕಾರಿಗಳು ಭೇಟಿ ನೀಡಿ ಬೆಳೆ ಹಾನಿ ಪರಿಶೀಲಿಸಿ ಪರಿಹಾರ ನೀಡುವಂತೆ ರೈತರು ಒತ್ತಾಯಿಸಿದ್ದಾರೆ.

Post Comments (+)