ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರದ ಸೀಮೆಯಲ್ಲಿ ಉಕ್ಕಿದ ಕೊಳವೆಬಾವಿ

Last Updated 17 ಅಕ್ಟೋಬರ್ 2017, 6:14 IST
ಅಕ್ಷರ ಗಾತ್ರ

ಗೌರಿಬಿದನೂರು: ಕಳೆದ ಇಪ್ಪತ್ತು ದಿನಗಳಿಂದ ಸುರಿಯುತ್ತಿರುವ ಮಳೆಯ ಪರಿಣಾಮ ಹೊಸೂರು ಗ್ರಾಮ ಪಂಚಾಯಿತಿ ಸದಸ್ಯ, ರೈತ ತಿರುಮಲೇಶ ಅವರ ಕೊಳವೆ ಬಾವಿಯಲ್ಲಿ ಏಕಾಏಕಿ ನೀರು ಉಕ್ಕಲು ಆರಂಭಿಸಿ ಜನರಲ್ಲಿ ವಿಸ್ಮಯ ಮೂಡಿಸಿದೆ.

ತಿರುಮಲೇಶ ಅವರು ಐದು ವರ್ಷಗಳ ಹಿಂದೆ ತಮ್ಮ ಜಮೀನಿನಲ್ಲಿ ಒಂದು ಸಾವಿರ ಅಡಿಯಷ್ಟು ಕೊಳವೆ ಬಾವಿ ಕೊರೆಯಿಸಿದ್ದರು. ಅದರಲ್ಲಿ ಎರಡು ಇಂಚಿನಷ್ಟು ನೀರು ದೊರೆತಿತ್ತು. ಅದರಲ್ಲೇ ಅವರು ಬೇಸಾಯ ಮಾಡಿಕೊಂಡಿದ್ದರು. ಸೋಮವಾರ ಬೆಳಿಗ್ಗೆ ಅವರು ಜಮೀನಿಗೆ ಹೋದ ವೇಳೆ ಮೋಟರ್‌ ಆನ್‌ ಮಾಡದಿದ್ದರೂ ಬೋರವೆಲ್‌ನಲ್ಲಿ ನೀರು ಉಕ್ಕುತ್ತಿರುವುದು ಕಂಡು ಆಶ್ಚರ್ಯಗೊಂಡಿದ್ದಾರೆ.

ಈ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮದ ಜನರು ತಿರುಮಲೇಶ ಅವರ ಜಮೀನಿಗೆ ಬಂದು ಕೊಳವೆ ಬಾವಿಯಲ್ಲಿ ನೀರು ಉಕ್ಕುವುದನ್ನು ಪವಾಡದಂತೆ ಕುತೂಹಲದಿಂದ ವೀಕ್ಷಿಸಿದರು.

‘ಈ ಬಾರಿ ಉತ್ತಮ ಮಳೆಯಾಗಿರುವ ಕಾರಣ ಕೊಳವೆ ಬಾವಿಗಳು ಮರುಪೂರಣಗೊಂಡಿವೆ. ಇನ್ನು ಎರಡು ವರ್ಷಗಳ ಕಾಲ ನಮಗೆ ಬೇಸಾಯಕ್ಕೆ ಮತ್ತು ಕುಡಿಯುವ ನೀರಿಗೆ ಚಿಂತೆ ಇಲ್ಲ’ ಎಂದು ಹೊಸೂರು ನಿವಾಸಿ ಎಚ್.ವಿ.ವೆಂಕಟೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT