ಕಿತ್ತುಹೋಗಿರುವ ರಸ್ತೆ, ದುರಸ್ತಿಗೆ ಆಗ್ರಹ

ಮಂಗಳವಾರ, ಜೂನ್ 18, 2019
23 °C

ಕಿತ್ತುಹೋಗಿರುವ ರಸ್ತೆ, ದುರಸ್ತಿಗೆ ಆಗ್ರಹ

Published:
Updated:

ವಿರಾಜಪೇಟೆ: ಪಟ್ಟಣದ ಬದ್ರಿಯಾ ಜಂಕ್ಷನ್‌ನಿಂದ ಮಾಂಸದ ಮಾರುಕಟ್ಟೆಗೆ ಸಾಗುವ ಪ್ರಮುಖ ಕಾಂಕ್ರಿಟ್ ರಸ್ತೆಯಲ್ಲಿ ಅಲ್ಲಲ್ಲಿ ಹೊಂಡಗಳಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ಸಮಸ್ಯೆ ತಂದೊಡ್ಡಿದೆ.

ಮಾಕುಟ್ಟ–ಕೊಣನೂರು ಅಂತರರಾಜ್ಯ ಹೆದ್ದಾರಿಯ ಮೂಲಕ ಆಗಮಿಸುವ ಬಹುತೇಕ ಎಲ್ಲ ವಾಹನಗಳು ಈ ರಸ್ತೆ ಮೂಲಕವೇ ಸಂಚರಿಸಲಿವೆ. ರಸ್ತೆ ಅಲ್ಲಲ್ಲಿ ಕಿತ್ತುಹೋಗಿದೆ.

ಕಾಂಕ್ರಿಟ್ ನಡುವೆ ಹಾಕಿರುವ ಕಬ್ಬಿಗಳ ಸರಳುಗಳು ಕೆಲವೆಡೆ ಹೊರಬಂದಿವೆ. ರಸ್ತೆ ಇಳಿಜಾರಿನಿಂದ ಕೂಡಿದ್ದು, ಹೊಂಡ ಹಾಗೂ ಕಿತ್ತಿರುವ ಕಾಂಕ್ರಿಟ್‌ನಿಂದ ಅಪಾಯ ತಪ್ಪಿದ್ದಲ್ಲ.

ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಕ್ರಮಜರುಗಿಸಲಿ.

ಜೆಫ್ರಿ ಡಿಸಿಲ್ವಾ,

ವಿರಾಜಪೇಟೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry