ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

20ರಿಂದ ಶ್ರೀರಾಮ ಪಟ್ಟಾಭಿಷೇಕ ಮಹೋತ್ಸವ

Last Updated 17 ಅಕ್ಟೋಬರ್ 2017, 8:45 IST
ಅಕ್ಷರ ಗಾತ್ರ

ಬದಿಯಡ್ಕ: ಪೆರ್ಲ ಸಮೀಪದ ಬಜಕೂಡ್ಲು ಅಮೃತಧಾರಾ ಗೋಶಾ ಲೆಯ ಧರ್ಮಮಂದಿರದಲ್ಲಿ ಇದೇ 20ರಿಂದ 29ರವರಗೆ ಶ್ರೀಮದ್ವಾಲ್ಮೀಕಿ ರಾಮಾಯಣ ಪಾರಾಯಣ ನವಾಹ ಹಾಗೂ ಗೋಮಾತಾ ಸಪರ್ಯಾ–ಗೋಪಾಷ್ಟಮೀ ಮಹೋತ್ಸವ ನಡೆಯಲಿದೆ.

ಶ್ರೀರಾಮಚಂದ್ರನ ಪಾವನ ಚರಿ ತ್ರೆಯ ಶ್ರವಣ, ಶ್ರೀರಾಮ ನಾಮಸ್ಮರಣೆ, ಭಗವನ್ನಾಮ ಸಂಕೀರ್ತನೆ, ಗೋಮಾ ತೆಗೆ ದಿವ್ಯ ನೀರಾಜನ, ಗೋಪಾಲಕೃಷ್ಣನ ಅರ್ಚನೆ, ದೇಶೀ ಹಸುವಿನ ಗೋಮ ಯನಿರ್ಮಿತ ಗೋವರ್ಧನ ಪೂಜೆ ಮೊದಲಾದ ವೈಶಿಷ್ಟ್ಯಗಳಿಂದ ಕೂಡಿದ ಮಂಗಲ ಮಹೋತ್ಸವ ನಡೆಯಲಿದೆ.

ಕಾರ್ಯಕ್ರಮದ ಅಂಗವಾಗಿ 20 ರಂದು ಬೆಳಗ್ಗೆ 7ರಿಂದ ಗುರುವಂದನೆ, ಸಾಮೂಹಿಕ ಪ್ರಾರ್ಥನೆ, ಕಲಶ ಪ್ರತಿಷ್ಠೆ, ಶ್ರೀರಾಮಕಲ್ಪೋಕ್ತ ಪೂಜೆ, ವಾಲ್ಮೀಕಿ ರಾಮಾಯಣ ಪಾರಾಯಣ ಪ್ರಾರಂಭ, ಶ್ರೀ ಮಹಾಗಣಪತಿ ಹವನ, ಮಧ್ಯಾಹ್ನ ಪ್ರಸಾದ ಭೋಜನ, 2.30ರಿಂದ ಶ್ರೀಮ ದ್ವಾಲ್ಮೀಕೀ ರಾಮಾಯಣ ಪಾರಾಯಣ, ಸಂಜೆ 5ರಿಂದ ಶ್ರೀರಾಮದೇವರಿಗೆ ಪ್ರದೋಷಪೂಜೆ, ಗೋಪಾಲಕೃಷ್ಣ ಪೂಜೆ, ವಿಷ್ಣು ಸಹಸ್ರನಾಮ ಪಾರಾ ಯಣ, ಗೋಪೂಜೆ, ತುಲಸೀಪೂಜೆ, ದೀಪೋತ್ಸವ ಹಾಗೂ ಮಂಗಳಾರತಿ ನಡೆಯಲಿದೆ.

ಇದೇ 21ರಿಂದ 27ರ ತನಕ ಪ್ರತೀದಿನ ಬೆಳಗ್ಗೆ ಕಲಶಪೂಜೆ, ಶ್ರೀರಾಮ ಕಲ್ಪೋಕ್ತ ಪೂಜೆ, ಶ್ರೀಮದ್ವಾಲ್ಮೀಕೀ ರಾಮಾಯಣ ಪಾರಾಯಣ, ಮಧ್ಯಾಹ್ನ ಪ್ರಸಾದ ಭೋಜನ, ಮಧ್ಯಾಹ್ನ ರಾಮಾಯಣ ಪಾರಾಯಣ, ಸಾಯಂ 5ರಿಂದ ಶ್ರೀರಾಮ ದೇವರಿಗೆ ಪ್ರದೋ ಷಪೂಜೆ, ಗೋಪಾಲಕೃಷ್ಣ ಪೂಜೆ, ವಿಷ್ಣುಸಹಸ್ರನಾಮ ಪಾರಾ ಯಣ, ಗೋ ಪೂಜೆ, ತುಲಸೀಪೂಜೆ ನಡೆಯಲಿವೆ.

28ರಂದು ಗೋಪಾಷ್ಟಮೀ ಮಹೋತ್ಸವ. ಕಲಶಪೂಜೆ, ಶ್ರೀರಾಮಕ ಲ್ಪೋಕ್ತ ಪೂಜೆ, ಶ್ರೀಮದ್ವಾಲ್ಮೀಕೀ ಪಾರಾಯಣ ಪಾರಾಯಣ ಮಂಗಲ, ಗೋವರ್ಧನ ಯಜ್ಞ ಪೂರ್ಣಾಹುತಿ. ಅಪರಾಹ್ನ ಕುಂಕುಮಾರ್ಚನೆ, ಭಜನೆ, ಸಂಜೆ 4ಕ್ಕೆ ಗೋಮಯ ಗೋವರ್ಧನ ಪರ್ವತದಲ್ಲಿ ಗೋವರ್ಧನ ಗೋಪಾ ಲಕೃಷ್ಣ ಪೂಜೆ, 5ಕ್ಕೆ ಶ್ರೀರಾಮದೇವರಿಗೆ ಪ್ರದೋಷ ಪೂಜೆ, ವಿಷ್ಣುಸಹಸ್ರನಾಮ ಪಾರಾಯಣ, ಭಜನೆ, ಗೋಪೂಜೆ, ತುಲಸೀಪೂಜೆ, ದೀಪೋತ್ಸವ, ಮಹಾ ಮಂಗಳಾರತಿ. ಭೋಜನ ನಡೆಯಲಿದೆ.

29ರಂದು ಬೆಳಿಗ್ಗೆ ಕಲಶ ಪೂಜೆ, ಶ್ರೀರಾಮ ಕಲ್ಪೋಕ್ತ ಪೂಜೆ, ಶ್ರೀರಾಮಪಟ್ಟಾಭಿಷೇಕ ಮಹೋತ್ಸವ, ರುದ್ರಪಾರಾಯಣ, ಕುಂಕುಮಾರ್ಚನೆ, 9.20ಕ್ಕೆ ಪಟ್ಟಾಭಿಷೇಕ ಯಜ್ಞ ಪೂರ್ಣಾ ಹುತಿ ನಡೆಯಲಿವೆ. ಧರ್ಮಸಭೆಯಲ್ಲಿ ಶ್ರೀಮದ್ವಾಲ್ಮೀಕಿ ರಾಮಾಯಣ ಉಪನ್ಯಾಸ, ಮುಳ್ಳೇರಿಯ ಹವ್ಯಕ ಮಂಡಲದ ರಾಮಾಯಣ ಪಾರಾಯಣ ಕರ್ತರಿಗೆ ಮಂಡಲದಿಂದ ಶ್ರೀರಾಮಾನುಗ್ರಹ ಪ್ರಧಾನ. 11ರಿಂದ ಶ್ರೀರಾಮಚಂದ್ರ ದೇವರ ಪಟ್ಟಾಭಿಷೇಕ ಮಹೋತ್ಸವ, ಶ್ರೀದೇವರಿಗೆ ಭಕ್ತ ಜನರಿಂದ ಕಪ್ಪಕಾಣಿಕೆ ಸಮರ್ಪಣೆ, ಮಹಾಮಂಗಳಾರತಿ, ರಾಜೋಪಚಾರ (ಅಷ್ಟಾವಧಾನ) ಸೇವೆ, ವೈದಿಕ ಮಂತ್ರಾಕ್ಷತೆ, ಅನ್ನ ಸಂತರ್ಪಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT