‘ಸಮೃದ್ಧಿ’ಗೆ ರಜತ ಸಂಭ್ರಮ

ಬುಧವಾರ, ಜೂನ್ 26, 2019
22 °C

‘ಸಮೃದ್ಧಿ’ಗೆ ರಜತ ಸಂಭ್ರಮ

Published:
Updated:

ಪುತ್ತೂರು: ಇಲ್ಲಿನ ಗಿಡಗೆಳೆತನ ಸಂಘ ‘ಸಮೃದ್ಧಿ’ಗೆ ಈಗ ರಜತದ ಸಂಭ್ರಮ. ಬೀಜ, ಗಿಡಗಳ ವಿನಿಮಯ, ಹೊಸ ಹಣ್ಣುಗಳ ಹುಡುಕಾಟ, ಅಲಂಕಾರಿಕ ಹೂವಿನ ಸಸ್ಯಗಳು, ತರಕಾರಿ, ಕೃಷಿ ಕ್ಷೇತ್ರಗಳ ಭೇಟಿ.. ಮೊದಲಾದ ಕಾರ್ಯಗಳ ಮೂಲಕ ಕಳೆದ 25 ವರುಷಗಳಿಂದ ಸಮೃದ್ಧಿಯು ಕೃಷಿ ಮತ್ತು ಕೃಷಿಕರ ಮನದ ಮಾತಿಗೆ ಕನ್ನಡಿಯಂತೆ ಕೆಲಸ ಮಾಡಿದೆ. ಇದೀಗ ರಜತ ಸಂಭ್ರಮದಲ್ಲಿದೆ.

ಸುಳ್ಯ ತಾಲ್ಲೂಕಿನ ಕೋಟೆಮುಂಡುಗಾರಿನ ಕಳಂಜ-ಬಾಳಿಲ ಪಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ಇದೇ 29ರಂದು ಬೆಳಿಗ್ಗೆ ಗಂಟೆ 9ರಿಂದ ಸಂಜೆ 4ರ ತನಕ ಸಮೃದ್ಧಿಯ 25 ನೇ ವರುಷದ ಸಂಭ್ರಮವನ್ನು ಆಚರಿಸಲಾಗುವುದು ಎಂದು ಸಂಘದ ಅಧ್ಯಕ್ಷ ಭಾಸ್ಕರ ಆರ್.ಕೆ., ಕಾರ್ಯದರ್ಶಿ ರಾಮ್‌ಪ್ರತೀಕ್ ಕರಿಯಾಲ ಮತ್ತು ಕೋಶಾಧಿಕಾರಿ ಎ.ಪಿ. ಸದಾಶಿವ ತಿಳಿಸಿದರು.

1990 ಆರಂಭದಲ್ಲಿ ಅಡಿಕೆ ಬೆಲೆಯು ಜಿಗಿದಿತ್ತು. ಅಡಿಕೆ ತೋಟಗಳು ವಿಸ್ತಾರವಾದುವು. ಹಣ್ಣು, ಗಿಡಗಳ ಬಗೆಗಿನ ಅಸಕ್ತಿಗಳಿಗೆ ಸ್ವಲ್ಪ ಮಬ್ಬು ಕವಿಯಿತು. ಇದರ ನಡುವೆಯೂ ತರಕಾರಿ, ಹಣ್ಣು, ಹೂವಿನ ಗಿಡಗಳ ಬಗ್ಗೆ ಗುಂಗು ಹತ್ತಿಸಿಕೊಂಡ ಸಾಕಷ್ಟು ಕೃಷಿಕರಿದ್ದರು. ಇವರೆಲ್ಲರನ್ನೂ ‘ಸಮೃದ್ಧಿ’ ಹೆಸರಿನ ಕೂಟದ ಸೂರಿನಡಿ ತರುವ ಕೆಲಸವನ್ನು ಅಡಿಕೆ ಪತ್ರಿಕೆಯು ಮಾಡಿತ್ತು ಎಂದು ತಿಳಿಸಿದರು.

ಪ್ರತಿ ತಿಂಗಳು ಸಭೆ, ನಿಯಮಿತ ಕ್ಷೇತ್ರ ಭೇಟಿ ಮಾಡಲಾಗುತ್ತಿದೆ. ಸಿಹಿ ಹುಣಸೆ, ರುದ್ರಾಕ್ಷಿ, ಚಳ್ಳೇಹಣ್ಣು, ಕನಕಚಂಪಕ, ಅಗರ್, ಕರ್ಪೂರ ಗಿಡ, ಜಂಬುನೇರಳೆ, ಆಫ್ರಿಕನ್ ಚಿಕ್ಕು, ಎಗ್‌ಫ್ರುಟ್, ರೆಕ್ಕೆಬದನೆ, ಕಾಂಚಿಕೇಳ ಬಾಳೆ, ನೀರು ಹಲಸು, ಏಲಕ್ಕಿ ತುಳಸಿ. ಹೀಗೆ ಅಸಂಖ್ಯ ತಳಿಗಳು ಸಮೃದ್ಧಿಯ ಮೂಲಕ ಬಂದಿವೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಈ ರೀತಿ ವಿನಿಮಯದಿಂದ ವಿಶೇಷ ಜಾತಿಯ ಅಸಂಖ್ಯ ಗಿಡಗಳು ಹರಡಿ ಹೋಗಿವೆ ಎಂದು ಹೇಳಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry