ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಾವಳಿಗೆ ಒಪ್ಪೊ ಎಫ್‌3 ರೆಡ್

Last Updated 17 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಸೆಲ್ಫಿಯನ್ನು ವ್ಯಾಮೋಹ, ಹವ್ಯಾಸ, ಗೀಳು, ಹುಚ್ಚು ಹೀಗೆ ಏನೇ ಹೇಳಿ, ಸದ್ಯದ ಮಟ್ಟಿಗಂತೂ ಅದು ಯುವಪೀಳಿಗೆಯ ಪ್ರಮುಖ ಆಕರ್ಷಣೆ. ಕೆಲವೊಮ್ಮೆ ಸಮಯ, ಸಂದರ್ಭವನ್ನೂ ನೋಡದೆ ಸೆಲ್ಫಿ ಕ್ಲಿಕ್ಕಿಸುವವರೂ ಇದ್ದಾರೆ.

ಸೆಲ್ಫಿ ಎಷ್ಟರ ಮಟ್ಟಿಗೆ ಜನಪ್ರಿಯವಾಗಿದೆ ಎಂದರೆ ಸೆಲ್ಫಿ ತೆಗೆಯುವುದು ಹೇಗೆ ಎನ್ನುವ ಬಗ್ಗೆ ಟಿಪ್ಸ್‌ಗಳೂ ಬರಲಾರಂಭಿಸಿವೆ. ಮೊಬೈಲ್ ತಯಾರಿಕಾ ಸಂಸ್ಥೆಗಳು ಸಹ ಇದನ್ನೇ ಮಾರಾಟದ ಅಸ್ತ್ರವಾಗಿಸಿಕೊಂಡಿವೆ.

ಒಪ್ಪೊ ಸಂಸ್ಥೆ, ಸೆಲ್ಫಿ ಸ್ಮಾರ್ಟ್‌ಫೋನ್‌ಗಳಿಗೆ ಹೆಚ್ಚು ಜನಪ್ರಿಯತೆ ಕಾಯ್ದುಕೊಂಡಿದೆ. ತಾನು ಸೆಲ್ಫಿ ತಂತ್ರಜ್ಞಾನಕ್ಕೇ ಹೆಚ್ಚು ಆದ್ಯತೆ ನೀಡುವುದಾಗಿ ತಿಳಿಸಲು ಸೆಲ್ಫಿ ಎಕ್ಸ್‌ಪರ್ಟ್‌ ಎಂಬ ಟ್ಯಾಗ್‌ಲೈನ್‌ ಸಹ ಹೊಂದಿದೆ. ಮಾರುಕಟ್ಟೆಯನ್ನು ವಿಶ್ಲೇಷಣೆ ಮಾಡುವ ಕಂಪೆನಿಗಳು ನೀಡಿರುವ ವರದಿಯ ಆಧಾರದ ಮೇಲೆ ಸೆಲ್ಫಿ ಸ್ಮಾರ್ಟ್‌ಫೋನ್‌ಗಳ ಲೀಡರ್ ಎಂದೂ ಹೇಳಿಕೊಂಡಿದೆ. ಹೀಗಾಗಿ ಸೆಲ್ಫಿ ಎಕ್ಸ್‌ಪರ್ಟ್‌ ಆ್ಯಂಡ್‌ ಲೀಡರ್ ಎಂದು ಟ್ಯಾಗ್‌ಲೈನ್ ಬದಲಿಸಿಕೊಂಡಿದೆ.

ಗ್ರಾಹಕರಿಗೆ ದೀಪಾವಳಿ ಕೊಡುಗೆಯಾಗಿ ಒಪ್ಪೊ ಎಫ್‌3 ಸೀಮಿತ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಇದು ಎಫ್‌3 ಆವೃತ್ತಿಯ ವಿಸ್ತರಣೆಯಾಗಿದ್ದು ಕೆಂಪು ಬಣ್ಣದಲ್ಲಿದೆ. ಬೆಲೆ ₹18,999. ‘ಎಫ್3’ ದೀಪಾವಳಿ ಸೀಮಿತ ಆವೃತ್ತಿಯ ಫೋನ್ ಕೊಳ್ಳುವ ಪ್ರತಿ ಗ್ರಾಹಕರಿಗೂ ಭಾರತೀಯ ಕ್ರಿಕೆಟ್ ತಂಡ ಸಹಿ ಮಾಡಿದ ಕ್ರಿಕೆಟ್ ಬ್ಯಾಟ್ ಪಡೆಯುತ್ತಾರೆ.

‘ದೀಪಾವಳಿಗೆ ಪ್ರೀತಿಪಾತ್ರರನ್ನು ಒಂದೇ ಸೂರಿನಡಿ ತರುವ ಮತ್ತು ಅವರ ಬಾಂಧವ್ಯ ಗಟ್ಟಿಗೊಳಿಸುವ ಅವಕಾಶ ನೀಡುವ ಹಬ್ಬವಾಗಿದೆ. ಕೆಂಪು ಬಣ್ಣದ ಈ ಸ್ಮಾರ್ಟ್‌ಫೋನ್‌ ಹಬ್ಬದ ಪವಿತ್ರತೆಯನ್ನು ಬಿಂಬಿಸುತ್ತಿದ್ದು, ಗ್ರಾಹಕರಿಗೆ ತಮ್ಮ ಕುಟುಂಬಗಳೊಂದಿಗೆ ಪರಿಪೂರ್ಣ ಕ್ಷಣಗಳನ್ನು ಸೆರೆ ಹಿಡಿಯಲು ಮತ್ತು ಪರಿಪೂರ್ಣ ದೀಪಾವಳಿ ಉಡುಗೊರೆ ನೀಡಲು ಅವಕಾಶ ಕಲ್ಪಿಸುತ್ತದೆ’ ಎಂದು ಒಪ್ಪೊ ಇಂಡಿಯಾದ ಬ್ರ್ಯಾಂಡ್ ಡೈರೆಕ್ಟರ್ ವಿಲ್ ಯಾಂಗ್‌ ಹೇಳಿದ್ದಾರೆ.

ಮುಂಬೈನಲ್ಲಿ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿ ಮಾತನಾಡಿದ ಯಾಂಗ್, ‘ಸೆಲ್ಫಿಗೆ ಆದ್ಯತೆ ನೀಡಿದ ಫೋನ್‍ಗಳನ್ನು ನೀಡಿದ ಮೊದಲ ಬ್ರ್ಯಾಂಡ್‌ ಆಗಿದ್ದು, ಅದರಲ್ಲಿ ಶ್ರೇಷ್ಠತೆ ಸಾಧಿಸಿದ್ದೇವೆ. ಭಾರತ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ನಮ್ಮ ಸಾಧನೆ ಹಾಗೂ ಕಾರ್ಯಕ್ಷಮತೆಯಿಂದ ಇಂದು ನಾವು ಈ ಉದ್ಯಮದಲ್ಲಿ ನಾಯಕತ್ವ ಸ್ಥಾನದಲ್ಲಿದ್ದೇವೆಯೆಂದು ಹೇಳಲು ಬಹಳ ಹೆಮ್ಮೆ ಎನಿಸುತ್ತಿದೆ’ ಎಂದಿದ್ದಾರೆ.

ಜುಲೈನಲ್ಲಿ ಪ್ರಕಟಿಸಲಾದ ನೀಲ್ಸನ್ ಕಂಪೆನಿಯ ವರದಿಯ ಪ್ರಕಾರ ಒಪ್ಪೊ, ಭಾರತದಲ್ಲಿ ಮುಂಚೂಣಿಯ ಸೆಲ್ಫಿ ಎಕ್ಸ್‌ಪರ್ಟ್‌ ಅಗಿದೆ. 2017ರ 2ನೇ ತ್ರೈಮಾಸಿಕ ಅವಧಿಯಲ್ಲಿ ಶೇ 39ರಷ್ಟು ಪಾಲು ಹೊಂದಿದೆ. ₹15 ಸಾವಿರದಿಂದ ₹30 ಸಾವಿರ ಬೆಲೆಯ ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ಒಪ್ಪೊ ಎಫ್3 ಶೇ 24.2ರಷ್ಟು ಮಾರುಕಟ್ಟೆ ಪಾಲು ಹೊಂದಿದೆ.

ವೈಶಿಷ್ಟ್ಯ

4ಜಿಬಿ ರ‍್ಯಾಮ್‌, 64 ಜಿಬಿ ರೋಮ್‌

3200ಎಂಎಎಚ್ ಬ್ಯಾಟರಿ ಹೊಂದಿದ್ದು 15 ಗಂಟೆ ಬಳಸಬಹುದು

ಡ್ಯೂಯಲ್ ನ್ಯಾನೋ ಸಿಮ್‌

ಆ್ಯಂಡ್ರಾಯ್ಡ್‌ ಮಾರ್ಷ್‌ಮೆಲ್ಲೊ 6.0ದಿಂದ ಅಭಿವೃದ್ಧಿಪಡಿಸಿದ ಕಲರ್‌ ಒಎಸ್‌ 3.0

5.5 ಇಂಚ್‌ ಫುಲ್ ಎಚ್‌ಡಿ (1080X1920 ಪಿಕ್ಸಲ್‌)ಗೊರಿಲ್ಲಾ ಗ್ಲಾಸ್‌ 5

401 ಪಿಪಿಐ ಪಿಕ್ಸಲ್‌ ಡೆನ್ಸಿಟಿ

1.5 ಜಿಗಾ ಹರ್ಟ್ಸ್‌ ಆಕ್ಟಾ ಕೋರ್‌ ಮೆಡಿಟೆಕ್‌ ಎಂಟಿ6750ಟಿ6 ಎಸ್‌ಒಎಸ್‌

ಡ್ಯುಯೆಲ್‌ ಕ್ಯಾಮೆರಾ 16 ಮತ್ತು 8 ಮೆಗಾಪಿಕ್ಸಲ್‌

1.3 ಇಂಚ್‌ ಸೆನ್ಸರ್‌, 2.0 ಅಪಾರ್ಚರ್‌

ರೇರ್‌ ಕ್ಯಾಮೆರಾ 13 ಮೆಗಾಪಿಕ್ಸಲ್‌, 1.3 ಇಂಚ್‌ ಸೆನ್ಸರ್‌ ಜತೆಗೆ ಪಿಡಿಎಫ್‌ ಮತ್ತು ಎಲ್‌ಇಡಿ ಫ‍್ಲಾಷ್‌

ಬ್ಯೂಟಿ 4.0 ಆ್ಯಪ್‌: ಸೆಲ್ಫಿಯನ್ನು ಇನ್ನಷ್ಟು ಚಂದವಾಗಿಸಲು ಬ್ಯೂಟಿಫೈ 4.0 ಆ್ಯಪ್‌ ನೀಡಲಾಗಿದೆ.

(ಸಂಸ್ಥೆಯ ಆಹ್ವಾನದ ಮೇರೆಗೆ ವರದಿಗಾರ ಮುಂಬೈಗೆ ಭೇಟಿ ನೀಡಿದ್ದರು)

ವಿಶ್ವನಾಥ್.ಎಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT