ಐಫೋನ್‌ ಮುಖ ಗುರುತು ತಂತ್ರಜ್ಞಾನ ಸುರಕ್ಷಿತ, ನಿಖರ: ಆಪಲ್‌

ಸೋಮವಾರ, ಜೂನ್ 24, 2019
30 °C
ಅಮೆರಿಕ ಸಂಸದರ ಕಳವಳಕ್ಕೆ ಸ್ಪಂದನೆ

ಐಫೋನ್‌ ಮುಖ ಗುರುತು ತಂತ್ರಜ್ಞಾನ ಸುರಕ್ಷಿತ, ನಿಖರ: ಆಪಲ್‌

Published:
Updated:
ಐಫೋನ್‌ ಮುಖ ಗುರುತು ತಂತ್ರಜ್ಞಾನ ಸುರಕ್ಷಿತ, ನಿಖರ: ಆಪಲ್‌

ಸ್ಯಾನ್‌ ಫ್ರಾನ್ಸಿಸ್ಕೊ: ಇತ್ತೀಚೆಗೆ ಆಪಲ್‌ ಬಿಡುಗಡೆ ಮಾಡಿದ ಐಫೋನ್‌ ಎಕ್ಸ್‌ನ ಮುಖ ಗುರುತು ಸುರಕ್ಷತಾ ವ್ಯವಸ್ಥೆ ಕುರಿತು ಅಮೆರಿಕ ಸಂಸದರೊಬ್ಬರು ವ್ಯಕ್ತಪಡಿಸಿದ್ದ ಕಳವಳಕ್ಕೆ ಸಂಸ್ಥೆಯ ಸಿಇಒ ಟಿಮ್‌ ಕುಕ್‌ ಸ್ಪಂದಿಸಿದ್ದಾರೆ.

ಸಾಮಾನ್ಯವಾಗಿ ಮೊಬೈಲ್‌ ಸುರಕ್ಷತೆಗಾಗಿ ಬೆರಳು ಸ್ಕ್ಯಾನ್‌, ಸಂಖ್ಯೆ ಬಳಸಿ ಪಿನ್‌ ಅಥವಾ ಚುಕ್ಕಿಗಳನ್ನು ಕೂಡಿಸುವ ಚಿತ್ರ ಪಾಸ್‌ವರ್ಡ್‌ಗಳನ್ನು ಅಳವಡಿಸಿಕೊಳ್ಳಲಾಗಿದೆ. ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿರುವ ಐಫೋನ್‌ ಎಕ್ಸ್‌ ಮುಖವನ್ನೇ ಸುರಕ್ಷತೆಯ ಕೇಂದ್ರವಾಗಿ ಬಳಸಿದೆ.

ಮುಖದ ರಚನೆಯನ್ನು ಸ್ಪಷ್ಟವಾಗಿ ಗುರುತಿಸುವ ಹಾಗೂ ಸಮಗ್ರತೆಯನ್ನು ಅಳೆಯಲು ಇನ್ಫ್ರಾರೆಡ್‌ ಕ್ಯಾಮೆರಾ ಬಳಸಲಾಗಿದೆ ಹಾಗೂ ಎ11 ಬಯೋನಿಕ್‌ ಚಿಪ್‌ ಅಳವಡಿಕೆಯಿಂದಾಗಿ ನಿಖರವಾಗಿ ಮುಖ ಗುರುತಿಸುವುದು ಸಾಧ್ಯವಾಗಿದೆ.

ಈ ತಂತ್ರಜ್ಞಾನದ ಅಳವಡಿಕೆ ಕುರಿತು ಸಂಸತ್‌ ಸದಸ್ಯ ಫ್ರಾಂಕೆನ್‌ ಸೆಪ್ಟೆಂಬರ್‌ನಲ್ಲಿ ಹಲವು ಪ್ರಶ್ನೆಗಳನ್ನು ಒಳಗೊಂಡ ಪತ್ರವನ್ನು ಆಪಲ್‌ ಸಂಸ್ಥೆಗೆ ರವಾನಿಸಿ ಅ.13ರೊಳಗೆ ಉತ್ತರಿಸುವಂತೆ ಕೇಳಿದ್ದರು. ಆಪಲ್‌ನ ಉಪಾಧ್ಯಕ್ಷ ಸಿಂಥಿಯಾ ಹೋಗನ್‌ ಇದಕ್ಕೆ ಪ್ರತಿಕ್ರಿಯಿಸಿರುವುದಾಗಿ ಆಪಲ್‌ ಇನ್‌ಸೈಡರ್‌ ವರದಿ ಮಾಡಿದೆ.

ದಿಟ್ಟಿಸಿ ನೋಡುವ ಮುಖದ ಗುರುತಿನ ಮಾಹಿತಿಯನ್ನು ಮೊಬೈಲ್‌ ಸಂಗ್ರಹಿಸಿಕೊಂಡಿರುತ್ತದೆ. ಕ್ಯಾಮೆರಾದಿಂದ ಬಳಕೆದಾರರ ಮುಖ ರಚನೆ ಲಕ್ಷಣಗಳ ಮಾಹಿತಿಯನ್ನು ಸುರಕ್ಷತಾ ವಲಯಕ್ಕೆ ರವಾನಿಸುತ್ತದೆ. ಈಗಾಗಲೇ ಗೂಢಲಿಪಿಗೊಂಡಿರುವ ಮಾಹಿತಿಯೊಂದಿಗೆ ಹೋಲಿಸಿ ಫೋನ್‌ ತೆರೆದುಕೊಳ್ಳುತ್ತದೆ.

ಸುರಕ್ಷತಾ ವಲಯಕ್ಕೆ ಕಳುಹಿಸಲಾಗುವ ಮಾಹಿತಿ ಆಪಲ್‌ ಸಂಸ್ಥೆಗೆ ಅಥವಾ ಮೊಬೈಲ್‌ನಲ್ಲೇ ಸಂಗ್ರಹಗೊಳ್ಳುವುದಿಲ್ಲ. ಈಗಾಗಲೇ ಗುರುತು ಆಗಿರುವ ಬಳಕೆದಾರರ ಮಾಹಿತಿಯೊಂದಿಗೆ ಹೋಲಿಸಿ ಮಾಹಿತಿಯನ್ನು ಅಳಿಸಿಹಾಕಲಾಗುತ್ತದೆ ಎಂದು ಉತ್ತರಿಸಿದ್ದಾರೆ.

ಕ್ಯಾಮೆರಾದಿಂದ ಇನ್ಫ್ರಾರೆಡ್‌ನ ಗೋಚರಿಸದ 30 ಸಾವಿರ ಚುಕ್ಕಿ(ಡಾಟ್‌)ಗಳಿಂದ ಮುಖವನ್ನು ನಿಖರವಾಗಿ ಗುರುತಿಸಲು ಸಾಧ್ಯವಾಗಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry