ಓಂಪುರಿ ಮತ್ತು ಕುನಾಲ್ ಕಪೂರ್

ಬುಧವಾರ, ಜೂನ್ 26, 2019
26 °C

ಓಂಪುರಿ ಮತ್ತು ಕುನಾಲ್ ಕಪೂರ್

Published:
Updated:
ಓಂಪುರಿ ಮತ್ತು ಕುನಾಲ್ ಕಪೂರ್

ಓಂಪುರಿ

ನಟನೆಯಿಂದಲೇ ಪ್ರೇಕ್ಷಕರ ಹೃದಯ ಗೆದ್ದ ನಟ ಓಂಪುರಿ ಅವರ ಹುಟ್ಟುಹಬ್ಬ ಇಂದು (ಜನನ: ಅಕ್ಟೋಬರ್ 18, 1950, ಮರಣ: ಜನವರಿ 6, 2017). ಬಡತನದ ಕಾರಣಕ್ಕಾಗಿ ಬಾಲ್ಯದಲ್ಲಿ ಟೀ ಮಾರಿ ಕುಟುಂಬಕ್ಕೆ ನೆರವಾಗುತ್ತಿದ್ದ ಓಂಪುರಿ, ಪ್ರಾಥಮಿಕ ಶಾಲೆಯ ಓದು ಮುಗಿದ ಬಳಿಕ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಗೆ ಸೇರಿದರು. ಅಲ್ಲಿ ನಟನಾ ಪಟ್ಟುಗಳನ್ನು ಕಲಿತ ಓಂಪುರಿಗೆ ನಟ ನಾಸಿರುದ್ದೀನ್ ಷಾ ಅವರ ಗೆಳೆತನ ದೊರೆಯಿತು.

‘ಚೋರ್ ಚೋರ್ ಚುಪ್ ಜಾ‘ ಎನ್ನುವ ಮಕ್ಕಳ ಸಿನಿಮಾದ ಮೂಲಕ ಬಾಲಿವುಡ್ ಪ್ರವೇಶಿಸಿದ ಓಂಪುರಿ, ಕಮರ್ಷಿಯಲ್ ಮತ್ತು ಕಲಾತ್ಮಕ ಚಿತ್ರಗಳೆರಡರಲ್ಲೂ ನಟಿಸಿ ಸೈ ಅನಿಸಿಕೊಂಡವರು. ಜನವರಿ 6, 2017ರಂದು ಓಂ‍ಪುರಿ ಹೃದಯಾಘಾತದಿಂದ ನಿಧನ ಹೊಂದಿದರು.

ಕುನಾಲ್ ಕಪೂರ್

ಬಾಲಿವುಡ್ ನಟ ಕುನಾಲ್ ಕಪೂರ್ ಹುಟ್ಟಿದ ದಿನ ಇಂದು (ಅಕ್ಟೋಬರ್ 18, 1978). ‘ಅಕ್ಸ್‌’ ಸಿನಿಮಾದ ಮೂಲಕ ಸಹಾಯಕ ನಿರ್ದೇಶಕನಾಗಿ ಬಾಲಿವುಡ್ ಪ್ರವೇಶಿಸಿದ ಕುನಾಲ್, ನಂತರ ನಟನಾಗಿ ಬಡ್ತಿ ಹೊಂದಿದವರು.

‘ಮೀನಾಕ್ಷಿ: ಎ ಟೇಲ್ ಆಫ್ ತ್ರಿ ಸಿಟೀಸ್’ ಚಿತ್ರದ ಮೂಲಕ ನಟಿ ತಬು ಅವರೊಂದಿಗೆ ನಾಯಕನಾಗಿ ತೆರೆ ಮೇಲೆ ಕಾಣಿಸಿಕೊಂಡ ಕುನಾಲ್, ಬೆರಳೆಣಿಕೆಯಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಹಲವು ಜಾಹೀರಾತುಗಳಲ್ಲೂ ನಟಿಸಿರುವ ಕುನಾಲ್ ಅಮಿತಾಭ್ ಬಚ್ಚನ್ ಅವರ ಸಂಬಂಧಿ ನೈನಾ ಬಚ್ಚನ್ ಅವರನ್ನು ವಿವಾಹವಾಗಿದ್ದಾರೆ.⇒v

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry