ಹಾಲಿವುಡ್‌ನಲ್ಲಿ ಬಿಟೌನ್‌ ಸದ್ದು

ಬುಧವಾರ, ಜೂನ್ 19, 2019
23 °C

ಹಾಲಿವುಡ್‌ನಲ್ಲಿ ಬಿಟೌನ್‌ ಸದ್ದು

Published:
Updated:
ಹಾಲಿವುಡ್‌ನಲ್ಲಿ ಬಿಟೌನ್‌ ಸದ್ದು

ಇರ್ಫಾನ್ ಖಾನ್

ವಿನಮ್ರ ಮತ್ತು ಬಹುಮುಖ ಪ್ರತಿಭೆಯ ನಟ ಎಂದೇ ಹೆಸರು ಮಾಡಿರುವ ಇರ್ಫಾನ್‌ ಖಾನ್ ವಿಶ್ವದೆಲ್ಲೆಡೆ ಚಿರಪರಿಚಿತ. ಸಿನಿಮಾದಲ್ಲಿ ಕಾಲೂರುವ ಮೊದಲು ರಂಗಭೂಮಿ ಮತ್ತು ಟೀವಿ ಕಾರ್ಯಕ್ರಮಗಳಲ್ಲಿ ತಮ್ಮ ಪ್ರತಿಭೆಯನ್ನು ಓರೆಗೆ ಹಚ್ಚಿದವರು. ಆದರೆ ಇವರ ನಟನಾ ಬದುಕಿಗೊಂದು ತಿರುವು ಸಿಕ್ಕಿದ್ದು ವಿಶಾಲ್ ಭಾರದ್ವಾಜ್ ಅವರ ‘ಮಕ್ಬೂಲ್‌’ ಮೂಲಕ.

‘ಹಾಸಿಲ್’, ‘ಲೈಫ್ ಇನ್ ಎ ಮೆಟ್ರೊ’ ಅವರ ಸಾಮರ್ಥ್ಯವನ್ನು ಹೊರಗೆಳೆದ ಮತ್ತೆರಡು ಚಿತ್ರಗಳು. ‘ಸ್ಲಂಡಾಗ್ ಮಿಲಿಯನೇರ್’ ನಂತರ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ನಟನಿಗೆ ಹಾಲಿವುಡ್ ಎಂಜಲೀನಾ ಜೋಲಿ ಜೊತೆ ‘ಎ ಮೈಟಿ ಹಾರ್ಟ್‌’ನಲ್ಲಿ (A Mighty Heart) ಅಭಿನಯಿಸುವ ಅವಕಾಶ ಹುಡುಕಿ ಬಂತು. ಎಚ್‌ಬಿಒ ವಾಹಿನಿಯ ಸರಣಿ ‘ಇನ್ ಟ್ರೀಟ್‌ಮೆಂಟ್‌'ನಲ್ಲಿ ಅವರ ಪಾತ್ರ ವಿಮರ್ಶಾತ್ಮಕ ಮೌಲ್ಯವನ್ನು ಪಡೆಯಿತು. ‘ದಿ ಅಮೇಜಿಂಗ್ ಸ್ಪೈಡರ್-ಮ್ಯಾನ್’ನಲ್ಲಿ ಅವರು ಖಳನ ಪಾತ್ರ ವಹಿಸಿದರು. ‘ಲೈಫ್ ಆಫ್ ಪೈ’, ‘ಜುರಾಸಿಕ್ ವರ್ಲ್ಡ್’ ಸರಣಿಯಲ್ಲಿ ತಮ್ಮ ಛಾಪು ಮೂಡಿಸಿದರು.

ಪ್ರಿಯಾಂಕ ಚೋಪ್ರಾ

ಪ್ರಿಯಾಂಕ ಚೋಪ್ರಾ ಮೊದಲ ಬಾರಿಗೆ ‘ಬೇವಾಚ್’ ಚಿತ್ರದ ಮೂಲಕ ಹಾಲಿವುಡ್ ಸ್ಕ್ರೀನ್‌ನಲ್ಲಿ ಕಾಣಿಸಿಕೊಂಡರು. 1990ರ ದಶಕದ ಪ್ರಖ್ಯಾತ ಟಿವಿ ಷೋ ‘ಬೇವಾಚ್’ ಅನ್ನು ಅದೇ ಹೆಸರಲ್ಲಿ ಸಿನಿಮಾ ಮಾಡಲಾಗಿದೆ. ಇದರಲ್ಲಿ ಪ್ರಿಯಾಂಕ ಚೋಪ್ರಾ ವಿಲನ್ ಪಾತ್ರದಲ್ಲಿ ಅಭಿನಯಿಸಿ ಸುದ್ದಿಯಾಗಿದ್ದರು. ಹಾಲಿವುಡ್ ಖ್ಯಾತ ನಟ ಡ್ವೇನ್ ಜಾನ್ಸನ್ ಅವರನ್ನು ಪ್ರಿಯಾಂಕಾ ಹೊಗಳಿದ್ದೂ ಆಯಿತು. ಪ್ರಿಯಾಂಕಾ ಇರುವ ಕಾರಣಕ್ಕೆ ಈ ಚಿತ್ರ ಭಾರತದಲ್ಲಿ ಸುದ್ದಿ ಮಾಡಿತ್ತು.

ದೀಪಿಕಾ ಪಡುಕೋಣೆ

ಕನ್ನಡ ನೆಲದಿಂದ ಬಾಲಿವುಡ್‌ನಲ್ಲಿ ಮಿಂಚಿ ಅಲ್ಲಿಂದ ಹಾಲಿವುಡ್‌ಗೆ ಹಾರಿದ ಎರಡನೇ ನಟಿ ದೀಪಿಕಾ ಪಡುಕೋಣೆ. ವಿನ್ ಡೀಸೆಲ್ ಅವರ ಜೊತೆ ‘XXX’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸರಣಿಯ ಮುಂದಿನ ಚಿತ್ರ ‘XXX4’ ನಲ್ಲಿಯೂ ಅವರೇ ನಟಿಸಲಿದ್ದಾರೆ ಎಂಬ ಸುದ್ದಿಯೂ ಖಚಿತಪಟ್ಟಿದೆ. ದೀಪಿಕಾ ಹಾಲಿವುಡ್‌ ಪಯಣಕ್ಕೆ ಇದು ಹೊಸ ಚಾಲನೆ.

ಮಲ್ಲಿಕಾ ಶೆರಾವತ್

ವಿವಾದಗಳ ಮೂಲಕವೇ ಹೆಚ್ಚು ಪ್ರಚಲಿತವಾದ ಹೆಸರು ಮಲ್ಲಿಕಾ ಶೆರಾವತ್. ಆದರೆ ವಿವಾದಗಳನ್ನು ಹೇಗೆ ನಿರ್ವಹಿಸಬೇಕೆಂಬುದೂ ಅವರಿಗೆ ಗೊತ್ತು. ಟೀವಿ ಜಾಹೀರಾತುಗಳು ಮತ್ತು ಮ್ಯೂಸಿಕ್ ವೀಡಿಯೊಗಳ ಮೂಲಕ ವೃತ್ತಿಜೀವನವನ್ನು ಪ್ರಾರಂಭಿಸಿದ ಈ ನಟಿ, ‘ಖ್ವಾಯಿಶ್’ ಚಿತ್ರದಲ್ಲಿನ ಪಾತ್ರದಿಂದ ಪ್ರತಿಯೊಬ್ಬರ ಗಮನ ಸೆಳೆದಿದ್ದು ಹಳೇ ಮಾತು.

‘ಮರ್ಡರ್’ ಚಿತ್ರದಲ್ಲಿನ ಸೆಕ್ಸಿ ಲುಕ್‌ನಿಂದ ಮತ್ತೊಂದು ಹೆಜ್ಜೆ ಮುಂದೆ ಸಾಗಿದರು. ಅಂತರರಾಷ್ಟ್ರೀಯ ಯೋಜನೆಗಳ ಮೇಲೆ ಕಣ್ಣು ಹಾಕಿದ ಕೆಲವೇ ದಿನಗಳಲ್ಲಿ ಜಾಕಿ ಚಾನ್‌ನೊಂದಿಗೆ ‘ಮಿಥ್’ನಲ್ಲಿ ಕೆಲಸ ಮಾಡಿದರು. ‘ಹಿಸ್ಸ್’ (2010) ಹಾಗೂ ‘ಪೊಲಿಟಿಕ್ಸ್ ಆಫ್ ಲವ್’ (2011) ಅವರ ಹಾಲಿವುಡ್ ಚಿತ್ರಗಳು.

ಅಮಿತಾಭ್ ಬಚ್ಚನ್, ತಬು

2003ರಲ್ಲಿಯೇ ಹಾಲಿವುಡ್‌ ಪ್ರವೇಶಿಸಿದ ಅಮಿತಾಭ್ ಬಚ್ಚನ್‌ ಅವರ ಚೊಚ್ಚಲ ಚಿತ್ರ ‘ದಿ ಗ್ರೇಟ್ ಗ್ಯಾಟ್ಸ್‌ಬೆ’. ನಟಿ ತಬು ಸಹ ಹಾಲಿವುಡ್‌ನಲ್ಲಿ ಹೆಸರು ಮಾಡಿದ್ದಾರೆ.

2007ರಲ್ಲಿ ‘ದಿ ನೇಮ್ ಸೇಕ್’ ಹಾಗೂ 2012ರಲ್ಲಿ ‘ಲೈಫ್ ಆಫ್ ಪೈ’ ಸಿನಿಮಾದಲ್ಲಿ ನಟಿಸುವ ಮೂಲಕ ಹಾಲಿವುಡ್‌ನಲ್ಲಿ ತಬು ತಮ್ಮ ಛಾಪು ಮೂಡಿಸಿದ್ದಾರೆ 

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry