ಮತ್ತೆ ಐಟಂ ಸಾಂಗ್‌ನಲ್ಲಿ ಅಮೀರ್ ಖಾನ್‌!

ಬುಧವಾರ, ಮೇ 22, 2019
29 °C

ಮತ್ತೆ ಐಟಂ ಸಾಂಗ್‌ನಲ್ಲಿ ಅಮೀರ್ ಖಾನ್‌!

Published:
Updated:
ಮತ್ತೆ ಐಟಂ ಸಾಂಗ್‌ನಲ್ಲಿ ಅಮೀರ್ ಖಾನ್‌!

‘ದಂಗಲ್‌’ನಲ್ಲಿ ತಂದೆ ಮಗಳಾಗಿದ್ದ ನಟ ಅಮೀರ್ ಖಾನ್ ಮತ್ತು ನಟಿ ಝೈರಾ ವಾಸಿಮ್ ಅಭಿನಯದ ‘ಸೀಕ್ರೆಟ್ ಸೂಪರ್ ಸ್ಟಾರ್’ ಈಗ ಬಿಡುಗಡೆಗೆ ಸಿದ್ಧವಾಗಿದೆ. ಶಕ್ತಿಕುಮಾರ್ ಎನ್ನುವ ಪಾಪ್ ಗಾಯಕನ ಪಾತ್ರದಲ್ಲಿ ನಟಿಸಿರುವ ಅಮೀರ್ ಈ ಚಿತ್ರದಲ್ಲಿ ‘ಸೆಕ್ಸಿ ಬಲ್ಲಿಯೇ’ ಎನ್ನುವ ಐಟಂ ಹಾಡಿಗೆ ಹೆಜ್ಜೆ ಹಾಕಿರುವುದು ವಿಶೇಷ.

ಪಂಜಾಬಿ ಶೈಲಿಯಲ್ಲಿರುವ ಈ ಹಾಡನ್ನು ಪಾಪ್ ಗಾಯಕ ಮಿಕಾ ಸಿಂಗ್ ಹಾಡಿದ್ದಾರೆ. ಹಾಡಿನ ಮೇಕಿಂಗ್ ವಿಡಿಯೊ ಯುಟ್ಯೂಬ್‌ನಲ್ಲಿ ಜನಪ್ರಿಯತೆ ಗಳಿಸಿದೆ. ಈ ಹಾಡನ್ನು ಮಿಕಾ ಸಿಂಗ್ ಅವರೇ ಹಾಡಬೇಕೆಂದು ನನ್ನ ಬಯಕೆಯಾಗಿತ್ತು.

ಅದನ್ನು ಮಿಕಾ ತುಂಬಾ ರಸವತ್ತಾಗಿ ಹಾಡಿದ್ದಾರೆ ಎಂದು ಅಮೀರ್ ಖಾನ್ ತಿಳಿಸಿದ್ದರೆ, ಮಿಕಾ ಅವರ ದನಿಯಲ್ಲಿ ಹಾಡು ಮೂಡಿ ಬಂದರೆ ಸೊಗಸಾಗಿರುತ್ತದೆ. ಸಿನಿಮಾದಲ್ಲಿ ಶಕ್ತಿಕುಮಾರ್ ಈ ಹಾಡನ್ನು ಸಿಕ್ರೇಟ್ ಸೂಪರ್ ಸ್ಟಾರ್‌ಗೆ ಯುಟ್ಯೂಬ್‌ ಮೂಲಕ ಅರ್ಪಣೆ ಮಾಡುತ್ತಾನೆ ಎಂದು ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ ಹೇಳಿದ್ದಾರೆ.

ಮೊದಲ ಬಾರಿಗೆ ಅಮೀರ್ ಅವರಿಗಾಗಿ ಐಟಂ ಸಾಂಗ್ ಹಾಡಿರುವುದು ನಿಜಕ್ಕೂ ಖುಷಿ ತಂದಿದೆ. ಮಸ್ತಿ ಅಂದರೆ ಮಿಕಾ ನೆನಪಾಗುತ್ತಾರೆ. ಅಂತೆಯೇ ಸೆಕ್ಸಿ ಬಲ್ಲಿಯೇ ಅನ್ನೋದು ಮಸ್ತಿ ಹಾಡು’ ಎಂದು ಮಿಕಾ ಸಿಂಗ್ ಖುಷಿಯಿಂದ ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ.

ಇನ್ನು ಅಮೀರ್ ಪತ್ನಿ ಕಿರಣ್ ರಾವ್ ಅಂತೂ ಅಮೀರ್ ಅವರನ್ನು ಐಟಂ ಬಾಯ್ ಎಂದು ಕೆಣಕಿದ್ದಾರೆ. ಸೆಕ್ಸಿ ಹಾಡಿಗಾಗಿ ಅಮೀರ್ ಅವರನ್ನು ಕುಣಿಸಿರುವುದು ನನಗೆ ಸಖತ್ ಖುಷಿ ನೀಡಿದೆ ಎಂದು ನೃತ್ಯ ನಿರ್ದೇಶಕಿ ಸಾನಿಯಾ ಮಲ್ಹೋತ್ರ ಹೇಳಿದ್ದಾರೆ. ಹಾಡಿನ ಮೇಕಿಂಗ್ ವಿಡಿಯೊದಲ್ಲಿ ಸಿನಿಮಾ ತಂಡ ಹಾಡಿ ಕುಣಿದು ಕುಪ್ಪಳಿಸಿದೆ.

‘ಸೆಕ್ಸಿ ಬಲ್ಲಿಯೇ’ ಹಾಡಿನಲ್ಲಿ ಅಮೀರ್ ಟೈಟ್ ಟೀಶರ್ಟ್‌, ಟೈಟ್ ಜೀನ್ಸ್ ಹಾಕಿಕೊಂಡು ಬಣ್ಣಬಣ್ಣದ ಬಟ್ಟೆ ತೊಟ್ಟ ಚಿಯರ್ ಗರ್ಲ್ಸ್‌ ಜತೆ ಕುಣಿದಿರುವುದು ಪ್ರೇಕ್ಷಕರಿಗಂತೂ ಸಖತ್ ಖುಷಿ ನೀಡುತ್ತದೆ. ಅಕ್ಟೋಬರ್ 19ರ ದೀಪಾವಳಿಯಂದು ‘ಸೀಕ್ರೆಟ್ ಸೂಪರ್ ಸ್ಟಾರ್’ ಸಿನಿಮಾ ಬಿಡುಗಡೆಯಾಗಲಿದ್ದು, ಚಿತ್ರ ಬಿಡುಗಡೆಗೂ ಮುನ್ನವೇ ಮೇಕಿಂಗ್ ವಿಡಿಯೊಗಳು ಹಿಟ್ ಆಗಿರುವುದು ಪ್ರೇಕ್ಷಕರನ್ನು ಚಿತ್ರ ನೋಡಲು ಕಾತುರರನ್ನಾಗಿಸಿದೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry