ಬುಧವಾರ, ಸೆಪ್ಟೆಂಬರ್ 18, 2019
21 °C

'ಸಂಹಾರ’ ಟ್ರೇಲರ್‌ ಬಿಡುಗಡೆ: ನಟ ಚಿರಂಜೀವಿ ಸರ್ಜಾ ಹುಟ್ಟು ಹಬ್ಬದ ವಿಶೇಷ

Published:
Updated:
'ಸಂಹಾರ’ ಟ್ರೇಲರ್‌ ಬಿಡುಗಡೆ: ನಟ ಚಿರಂಜೀವಿ ಸರ್ಜಾ ಹುಟ್ಟು ಹಬ್ಬದ ವಿಶೇಷ

ಬೆಂಗಳೂರು: ನಟ ಚಿರಂಜೀವಿ ಸರ್ಜಾ ಹುಟ್ಟು ಹಬ್ಬದಂದು ಸಂಹಾರ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಲಾಗಿದೆ. ಕಣ್ಣಿನ ದೃಷ್ಟಿ ಕಳೆದುಕೊಂಡಿರುವ ಪ್ರೇಮಿಯಾಗಿ ಚಿರು ಇಲ್ಲಿ ಕಾಣಿಸಿಕೊಂಡಿದ್ದಾರೆ.

ನಿರ್ಮಾಣವಾಗುತ್ತಿರುವ ಕಟ್ಟಡದಲ್ಲಿ ರೌಡಿಗಳೊಂದಿಗೆ ಹೊಡೆದಾಡುವ ದೃಶ್ಯ ಹೃತಿಕ್‌ ರೋಷನ್‌ ಅಭಿನಯದ ಕಾಬಿಲ್‌ ಚಿತ್ರವನ್ನು ನೆನಪಿಸುವುದಾದರೂ ಮುಂದಿನ ದೃಶ್ಯಗಳು ಬೇರೆಯದೇ ಕಥೆ ಹೇಳುತ್ತವೆ. ಕಣ್ಣು ಕಾಣದಿದ್ದರೂ ಅಡುಗೆ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿರುವ ನಾಯಕ ರೆಸ್ಟೊರೆಂಟ್‌ ನಡೆಸುತ್ತಿದ್ದಾನೆ. ಪ್ರೀತಿಗಾಗಿ ಎಂಥದ್ದೇ ಅಪಾಯವನ್ನೂ ಎದುರಿಸಲು ಸಿದ್ಧನಿರುತ್ತಾನೆ.

ಹರಿಪ್ರಿಯ ಮತ್ತು ಕಾವ್ಯಾ ಶೆಟ್ಟಿ ನಾಯಕಿಯರು. ಇಲ್ಲಿ ನಾಯಕ ಇಬ್ಬರನ್ನೂ ಪ್ರೀತಿಸುತ್ತಾನೆ(?) ಮತ್ತೆ ಕಣ್ಣಿನ ದೃಷ್ಟಿ ಪಡೆದು ಹುಡುಕಾಟ, ಹೋರಾಟದಲ್ಲಿ ನಿರತ.

ಪೊಲೀಸ್‌ ಅಧಿಕಾರಿ ರಾಜಾ ಹುಲಿಯಾಗಿ ಕಾಣಿಸಿಕೊಳ್ಳುವ ಚಿಕ್ಕಣ್ಣ ಪಾತ್ರದ ಬಗೆಗೂ ಕುತೂಹಲ ಮೂಡುತ್ತದೆ. ರಾಜಾಹುಲಿ, ರುದ್ರತಾಂಡವ ಚಿತ್ರಗಳನ್ನು ನಿರ್ದೇಶಿಸಿದ್ದ ಗುರು ದೇಶಪಾಂಡೆ ಸಂಹಾರದ ಜವಾಬ್ದಾರಿ ಹೊತ್ತಿದ್ದಾರೆ. ರವಿ ಬಸ್ರೂರು ಸಂಗೀತ ಹಾಗೂ ಜಗದೀಶ್‌ ವಾಲಿ ಛಾಯಾಗ್ರಹಣ ಮಾಡಿದ್ದಾರೆ.

Post Comments (+)