ಕ್ಯಾನ್ಸರ್‌ ರೋಗಿಗಳ ನೆರವಿಗೆ ‘ಕಲಾ ಆವಿಷ್ಕಾರ’

ಮಂಗಳವಾರ, ಜೂನ್ 18, 2019
23 °C

ಕ್ಯಾನ್ಸರ್‌ ರೋಗಿಗಳ ನೆರವಿಗೆ ‘ಕಲಾ ಆವಿಷ್ಕಾರ’

Published:
Updated:
ಕ್ಯಾನ್ಸರ್‌ ರೋಗಿಗಳ ನೆರವಿಗೆ ‘ಕಲಾ ಆವಿಷ್ಕಾರ’

‘ವೋಗ್‌’ ಫ್ಯಾಷನ್‌ ಟೆಕ್ನಾಲಜಿ ಕಾಲೇಜಿನ ವಿದ್ಯಾರ್ಥಿಗಳು, ಕ್ಯಾನ್ಸರ್‌ ಮಕ್ಕಳ ನೆರವಿಗಾಗಿ ತಾವೇ ತಯಾರಿಸಿದ್ದ ಉಡುಪು, ಟೆರಾಕೋಟಾ ಮತ್ತು ಜರ್ಮನ್‌ ಸಿಲ್ವರ್‌ ಆಭರಣಗಳ ಪ್ರದರ್ಶನ ಮತ್ತು ಮಾರಾಟ ಆಯೋಜಿಸಿದ್ದರು.

ಮಹಾತ್ಮ ಗಾಂಧಿ ರಸ್ತೆಯ ರಂಗೋಲಿ ಮೆಟ್ರೊ ಕಲಾ ಕೇಂದ್ರದಲ್ಲಿ ಈ ಕಾರ್ಯಕ್ರಮ ನಡೆಯಿತು. ‘ಕಲಾ ಆವಿಷ್ಕಾರ’ ಎಂಬ ಹೆಸರಿನ ಈ ಪ್ರದರ್ಶನದಿಂದ ಬಂದ ಲಾಭವನ್ನು ಕ್ಯಾನ್ಸರ್‌ ಮಕ್ಕಳಿಗೆ ನೆರವಾಗುವ ‘ಸಮೀಕ್ಷಾ ಫೌಂಡೇಶನ್‌’ಗೆ  ದೇಣಿಗೆಯಾಗಿ ನೀಡಲಾಯಿತು.

ಬಗೆಬಗೆಯ ಉಡುಪುಗಳು, ಬಣ್ಣ ಬಣ್ಣದ ಕೃತಕ ಆಭರಣಗಳು, ಕರಕುಶಲ ವಸ್ತುಗಳ ಜೊತೆಗೆ ಪೇಪರಿನಿಂದ ತಯಾರಿಸಿದ ಉಡುಪುಗಳು ಇಲ್ಲಿಯ ಆಕರ್ಷಣೆಯಾಗಿತ್ತು. ಈ ಉತ್ಪನ್ನಗಳ ತಯಾರಿಯ ಹಿಂದೆ ಒಟ್ಟು 700 ವಿದ್ಯಾರ್ಥಿಗಳ ಪರಿಶ್ರಮವಿತ್ತು.

‘ವಿದ್ಯಾರ್ಥಿಗಳು ತಯಾರಿಸಿದ್ದ ವಸ್ತುಗಳನ್ನು ಮಾರಾಟ ಮಾಡಿ ಬಂದ ಲಾಭಾಂಶವನ್ನು ಇಂತಹ ಮಕ್ಕಳ ನಿರ್ವಹಣೆ ಮಾಡುವ ಸಂಸ್ಥೆಗೆ ನೀಡುವುದು ಹೆಮ್ಮಯ ವಿಚಾರ. ಪ್ರತಿವರ್ಷ ಈ ರೀತಿಯ ಕಾರ್ಯಕ್ರಮ ಆಯೋಜಿಸುತ್ತಿರುತ್ತೇವೆ' ಎನ್ನುತ್ತಾರೆ ಕಾಲೇಜಿನ ಜಿಗ್ನಾ ಶಾ.v

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry