ಸಕುರ ಚೆಲುವು ಹಿಡಿದಿಟ್ಟ ಗಂಜಂ

ಗುರುವಾರ , ಜೂನ್ 20, 2019
27 °C

ಸಕುರ ಚೆಲುವು ಹಿಡಿದಿಟ್ಟ ಗಂಜಂ

Published:
Updated:
ಸಕುರ ಚೆಲುವು ಹಿಡಿದಿಟ್ಟ ಗಂಜಂ

*ಏನಿದು ಸಕುರ?

ಸಕುರ ಎನ್ನುವುದು ಜಪಾನಿ ಹೂ. ಚೆರ್ರಿ ಬ್ಲಾಸಮ್‌ ಎನ್ನುವ ಹೆಸರೂ ಇದಕ್ಕಿದೆ. ಜಪಾನಿ ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿರುವ ಈ ಹೂವು, ಅವರ ವಸ್ತ್ರವಿನ್ಯಾಸ, ಚಿತ್ರಕಲೆ, ಭಿತ್ತಿಚಿತ್ರಗಳು, ಆಭರಣಗಳಲ್ಲಿಯೂ ಕಾಣಸಿಗುತ್ತದೆ. ಜಪಾನಿನಲ್ಲಿ ಸಕುರ ಉತ್ಸವ ಕೂಡ ನಡೆಯುತ್ತದೆ.

* ಸಕುರ ಸಂಗ್ರಹದ ವೈಶಿಷ್ಟ್ಯವೇನು?

ಜಪಾನ್‌ ಹಾಗೂ ಜಪಾನಿ ವಿನ್ಯಾಸಕರೊಂದಿಗೆ ಕೆಲಸ ಮಾಡಿದ್ದರಿಂದ ಸಕುರದ ಚೆಲುವು ಆಕರ್ಷಿಸಿತ್ತು. ಎರಡು ವರ್ಷಗಳಿಂದ ಈ ಸಂಗ್ರಹಕ್ಕಾಗಿ ಕೆಲಸ ಮಾಡಿದ್ದೇವೆ. ಆ ಹೂವೇ ಆಕರ್ಷಕ. ಗೊಂಚಲು ಗೊಂಚಲಾಗಿರುವ ಅವು ಉದುರುತ್ತಿರುವಂತೆ ಭಾಸವಾಗುತ್ತದೆ. ನಮ್ಮ ವಿನ್ಯಾಸಕರು ಸಕುರದ ಚೆಲುವನ್ನು ಸಮರ್ಥವಾಗಿ ಆಭರಣಗಳಲ್ಲಿ ಹಿಡಿದಿಟ್ಟಿದ್ದಾರೆ. ಗುಲಾಬಿ ಹಾಗೂ ಹಳದಿ ಛಾಯೆಯ ಬಂಗಾರದ ಬಣ್ಣವನ್ನು ಹೆಚ್ಚು ಬಳಸಿದ್ದೇವೆ. ಅತ್ಯುತ್ತಮ ಗುಣಮಟ್ಟದ ವಜ್ರಗಳನ್ನು ಬಳಸಲಾಗಿದ್ದು ನಿಜವಾದ ಹೂವಿನಷ್ಟೇ ಅಂದವಾಗಿ ಕಾಣುತ್ತದೆ. ನಮ್ಮ ಹಿರಿಯ ವಿನ್ಯಾಸಕಿ ಪ್ರಿಯಾ ರಾಥೆ ಈ ಸರಣಿಯ ವಿನ್ಯಾಸಕಿ.

* ಬದಲಾಗುವ ಫ್ಯಾಷನ್‌ ಟ್ರೆಂಡ್‌ ಅನ್ನು ಹೇಗೆ ಗುರುತಿಸುತ್ತೀರಿ?

ಅನೇಕ ವರ್ಷಗಳಿಂದ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಡಿಸೈನ್‌ ಜೊತೆ ಹಾಗೂ ಫ್ರಾನ್ಸ್‌ನ ಕಂಪೆನಿಯೊಂದಿಗೆ ಕೆಲಸ ಮಾಡುತ್ತಿದ್ದೇವೆ. ಅಲ್ಲಿ ಫ್ಯಾಷನ್‌ ಕ್ಷೇತ್ರದಲ್ಲಿ ಇಂಥ ಋತುಮಾನಕ್ಕೆ ಇಂಥ ಬಣ್ಣ ಎಂದು ನಿರ್ಧರಿಸಲಾಗುತ್ತದೆ. ಹೆಚ್ಚಿನ ವಿನ್ಯಾಸಗಳು ಅವುಗಳ ಆಧಾರದ ಮೇಲೆ ಸೃಷ್ಟಿಯಾಗುತ್ತಾ ಹೋಗುತ್ತವೆ. ಆದರೆ ಕಾಕತಾಳೀಯ ಎನ್ನುವಂತೆ ಈ ಋತುಮಾನದ ಬಣ್ಣ ನಮ್ಮ ಆಭರಣದಲ್ಲಿಯೂ ಇದೆ. ವಸ್ತ್ರೋದ್ಯಮದಲ್ಲಿ ಬಣ್ಣದ ಪರಿಕಲ್ಪನೆ ತುಂಬಾ ಇದೆ. ಆದರೆ ಆಭರಣದಲ್ಲಿ ಯಾವ ಬಣ್ಣ ಯಾರನ್ನು ಸೆಳೆಯುತ್ತದೆ ಎಂದು ನಿರ್ಧರಿಸುವುದು ಕಷ್ಟ.

* ನಿಮ್ಮಲ್ಲಿ ಆಭರಣ ತಯಾರಾಗುವ ಪ್ರಕ್ರಿಯೆ ಬಗ್ಗೆ ಹೇಳಿ?

ನಮ್ಮಲ್ಲಿ 22 ವಿನ್ಯಾಸಕಾರರಿದ್ದಾರೆ. ಅವರು ಅವರ ಕಲ್ಪನೆಯ ವಿನ್ಯಾಸವನ್ನು ಬರೆದು ಕೊಡುತ್ತಾರೆ. ನಂತರ ಗಂಜಂನ ಆಯ್ಕೆ ತಂಡ ಯಾವ ವಿನ್ಯಾಸ ಮಾರುಕಟ್ಟೆಗೆ ಬರಬೇಕು ಎಂದು ನಿರ್ಧರಿಸುತ್ತದೆ. ನಗರದ ಅರಮನೆ ರಸ್ತೆಯಲ್ಲಿ ನಮ್ಮದೇ ಆದ ಆಭರಣ ತಯಾರಿಕಾ ವರ್ಕ್‌ಶಾಪ್‌ ಇದೆ. ಅಲ್ಲಿಯೇ ಅವುಗಳು ರೂಪು ತಳೆಯುತ್ತವೆ.

* ಗಂಜಂ ವೈಶಿಷ್ಟ್ಯವೇನು?

ಗುಣಮಟ್ಟದಿಂದಾಗಿ ನಾವು ಪ್ರಾಮುಖ್ಯತೆ ಉಳಿಸಿಕೊಂಡಿದ್ದೇವೆ. ಇಲ್ಲಿಯ ಆಭರಣಗಳ ವಿನ್ಯಾಸ ವೈಖರಿ ಬೇರೆಲ್ಲೂ ಸಿಗಲು ಸಾಧ್ಯವೇ ಇಲ್ಲ. ಬಳಸುವ ವಜ್ರ, ಬಣ್ಣಗಳ ಸಂಯೋಜನೆಯೇ ಗಂಜಂ ವಿಶೇಷ ಸ್ಥಾನ ಪಡೆದುಕೊಳ್ಳಲು ಕಾರಣ. ಆಭರಣ ವಿನ್ಯಾಸಕ್ಕೆ ವಿಶೇಷ ಕಟ್‌ಗಳನ್ನು ನಾವೇ ರೂಪಿಸಿಕೊಂಡಿದ್ದೇವೆ. ಇಲ್ಲಿ ರೂಪುಗೊಂಡ ಆಭರಣ ಪ್ರಪಂಚದ ಯಾವುದೇ ಮೂಲೆಗೂ ತೆಗೆದುಕೊಂಡು ಹೋದರೂ ಇಲ್ಲಿಯಷ್ಟೇ ಪ್ರಾಮುಖ್ಯತೆ ಸಿಗುತ್ತದೆ. 125 ವರ್ಷಗಳ ನಮ್ಮ ಕಂಪೆನಿ ಪಾರಂಪರಿಕ ಆಭರಣಗಳಿಗಾಗಿಯೂ ಬಹುದೊಡ್ಡ ಹೆಸರು ಗಳಿಸಿದೆ. ಅಂದಹಾಗೆ ನಮ್ಮ ಇಷ್ಟು ವರ್ಷದ ಇತಿಹಾಸದಲ್ಲಿ ರಿಯಾಯಿತಿ ಎನ್ನುವ ಪರಿಕಲ್ಪನೆಯನ್ನೇ ಇಟ್ಟುಕೊಂಡಿಲ್ಲ. ಗುಣಮಟ್ಟಕ್ಕೆ ತಕ್ಕ ಬೆಲೆಯಲ್ಲಿಯೇ ಆಭರಣಗಳನ್ನು ಮಾರಾಟ ಮಾಡುತ್ತೇವೆ.

* ಹಳೆಯ ಆಭರಣ ವಿನ್ಯಾಸ ಮತ್ತೆ ಬರುತ್ತಿದೆಯಲ್ಲ?

ಹೌದು, ಹಳೆಯ ವಿನ್ಯಾಸದ ಶಕ್ತಿ ಹಾಗಿದೆ. ಟೆಂಪಲ್‌ ಜ್ಯುವೆಲರಿ ಅಥವಾ ಹಳೆಕಾಲದ ಆಭರಣ ವಿನ್ಯಾಸ ಒಂದು ರೀತಿಯಲ್ಲಿ ಶಾಸ್ತ್ರೀಯ ವಾಸ್ತುಶಿಲ್ಪ ಇದ್ದಂತೆ. ಹೀಗಾಗಿ ಅದು ಫ್ಯಾಷನ್‌ ಟ್ರೆಂಡ್‌ನಿಂದ ಹೊರಗೆ ಹೋಗುವುದೇ ಇಲ್ಲ. ಶಾಸ್ತ್ರೀಯತೆಯನ್ನು ಉಳಿಸಿಕೊಂಡು ವಿಧವಿಧ ವಿನ್ಯಾಸದಲ್ಲಿ ಆಭರಣಗಳು ದೊರಕುತ್ತಿರುವುದರಿಂದ ಎಲ್ಲ ವಯೋಮಾನದವರಿಗೂ ಅದು ಇಷ್ಟವಾಗುತ್ತಿದೆ. ಮೈಸೂರು ಮಹಾರಾಜರ ಕಾಲದಲ್ಲಿ ಆಭರಣಗಳನ್ನು ವಿನ್ಯಾಸ ಮಾಡಲು ನಮಗೇ ನೀಡುತ್ತಿದ್ದರು. ಅದನ್ನು ಶಾಸ್ತ್ರೋಕ್ತವಾಗಿಯೇ ಮಾಡಬೇಕು. ಅಂದರಷ್ಟೇ ಅದಕ್ಕೆ ನಿಜವಾದ ಚೆಲುವು ಸಿಗುತ್ತದೆ.

* ಯುವಮನಸ್ಸು ಹೆಚ್ಚು ಇಷ್ಟ ಪಡುವ ವಿನ್ಯಾಸ ಯಾವುದು?

ಹಗುರವಾದ ಆಭರಣಗಳಿಗೆ ಎಲ್ಲರೂ ಆದ್ಯತೆ ನೀಡುತ್ತಾರೆ. ಟು ಇನ್‌ ಒನ್‌ ಪರಿಕಲ್ಪನೆ ಆಭರಣ ಲೋಕದಲ್ಲಿ ಕ್ಲಿಕ್‌ ಆಗಿದೆ. ರಿಂಗ್ಸ್‌, ಬಳೆ, ಪೆಂಡೆಂಟ್‌ ಎಲ್ಲವೂ ಇದೇ ರೀತಿಯಲ್ಲಿ ಸಿಗುತ್ತವೆ. ತೀರಾ ಅದ್ದೂರಿ ಎನಿಸದ ಇವುಗಳನ್ನು ಆಫೀಸ್‌ವೇರ್‌ ಆಗಿಯೂ ಬಳಸುತ್ತಾರೆ.

* ಸಕುರ ವಿನ್ಯಾಸದಲ್ಲಿ ಯಾವೆಲ್ಲಾ ಆಭರಣಗಳಿವೆ. ಬೆಲೆ ಎಷ್ಟು?

ಉಂಗುರ, ಕಿವಿಯೋಲೆ, ಬಳೆ, ನೆಕ್ಲೆಸ್‌, ಪೆಂಡೆಂಟ್‌ ಹೀಗೆ ಹಲವು ಬಗೆಯ ಆಭರಣಗಳು ಲಭ್ಯ. ಬೆಲೆ ಒಂದು ಲಕ್ಷ ರೂಪಾಯಿಯಿಂದ ಆರಂಭ.

(ಗಂಜಂ ಮುಖ್ಯಸ್ಥ ಉಮೇಶ್‌)

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry