ಶಾಸಕರಿಗೂ ‘ಭಾಗ್ಯ’

ಬುಧವಾರ, ಜೂನ್ 19, 2019
31 °C

ಶಾಸಕರಿಗೂ ‘ಭಾಗ್ಯ’

Published:
Updated:

ಪ್ರೇಕ್ಷಕರ ಬರದಿಂದ ಬಳಲುವ ಸಭೆ, ಸಮಾರಂಭಗಳ ಆಮಂತ್ರಣ ಪತ್ರಿಕೆಗಳಲ್ಲಿ ‘ಸಭೆಯ ನಂತರ ತಿಂಡಿ–ಊಟದ ವ್ಯವಸ್ಥೆ ಇದೆ’ ಎಂಬ ವಾಕ್ಯ ಅಚ್ಚಾಗಿರುವುದನ್ನು ಕಾಣುತ್ತೇವೆ. ಈಗ ಶಾಸಕರನ್ನು ವಿಧಾನಸಭೆಯ ಕಲಾಪದಲ್ಲಿ ಭಾಗವಹಿಸುವಂತೆ ಆಕರ್ಷಿಸಲು ಅವರಿಗಾಗಿ ಉಚಿತ ಊಟದ ವ್ಯವಸ್ಥೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಸ್ಪೀಕರ್‌ ತಿಳಿಸಿದ್ದಾರೆ.

ರಾತ್ರಿ ವೇಳೆ ಊಟಕ್ಕಾಗಿ ಎಲ್ಲೆಂದರಲ್ಲಿ ಅಲೆದಾಡುವ ಶಾಸಕರ ‘ಗೌರವ’ ಕಾಪಾಡಲು ಅವರ ‘ಖಾಸಗಿತನರಕ್ಷಿಸಲು’ 2.20 ಎಕರೆ ಜಾಗದಲ್ಲಿ ಕ್ಲಬ್‌ ನಿರ್ಮಿಸಿ ಅಲ್ಲಿ ಜಿಮ್‌, ಈಜುಕೊಳ, ಬ್ಯಾಡ್ಮಿಂಟನ್‌ ಕೋರ್ಟ್‌ ಮುಂತಾದ ಸೌಲಭ್ಯಗಳನ್ನು ಒದಗಿಸುವ ಹಲವು ಭಾಗ್ಯಗಳ ವಿವರಗಳೂ ಇವೆ. ಭಾಗ್ಯವಂತ ಶಾಸಕರೇ ಧನ್ಯ ಧನ್ಯ!

ಪ್ರೊ. ಆರ್‌.ವಿ. ಹೊರಡಿ, ಧಾರವಾಡ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry