ಬುಟ್ಟಾ ರೇಣುಕಾ ಟಿಡಿಪಿಗೆ ಸೇರ್ಪಡೆ

ಭಾನುವಾರ, ಜೂನ್ 16, 2019
29 °C

ಬುಟ್ಟಾ ರೇಣುಕಾ ಟಿಡಿಪಿಗೆ ಸೇರ್ಪಡೆ

Published:
Updated:
ಬುಟ್ಟಾ ರೇಣುಕಾ ಟಿಡಿಪಿಗೆ ಸೇರ್ಪಡೆ

ಅಮರಾವತಿ: ವೈಎಸ್‌ಆರ್‌ ಕಾಂಗ್ರೆಸ್‌ನ ಸಂಸದೆ ಬುಟ್ಟಾ ರೇಣುಕಾ ಅವರು ಮಂಗಳವಾರ ಆಂಧ್ರಪ್ರದೇಶದ ಆಡಳಿತಾರೂಢ ತೆಲುಗುದೇಶಂ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಕರ್ನೂಲ್‌ನ ಸಂಸದೆ ಹಾಗೂ ಅವರು ಬೆಂಬಲಿಗರನ್ನು ಟಿಡಿಪಿ ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಅವರು ತಮ್ಮ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷಕ್ಕೆ ಬರಮಾಡಿಕೊಂಡರು. ವೈಎಸ್‌ಆರ್‌ಸಿಯಿಂದ ಟಿಡಿಪಿಗೆ ಸೇರ್ಪಡೆಯಾಗುತ್ತಿರುವವರಲ್ಲಿ ರೇಣುಕಾ ಎರಡನೇ ಸಂಸದರು. ಈ ಹಿಂದೆ ನಂದ್ಯಾಲ್‌ ಕ್ಷೇತ್ರದ ವೈಎಸ್‌ಆರ್‌ ಪಕ್ಷದ ಸಂಸದ ಎಸ್‌.ಪಿ.ವೈ. ರೆಡ್ಡಿ ಕೂಡ ಟಿಡಿಪಿ ಸೇರಿದ್ದರು.

ಪಕ್ಷದ ಸಂಸದೆಗೆ ಆಡಳಿತ ಪಕ್ಷ ಹಣದ ಆಮಿಷ ಒಡ್ಡಿದೆ ಎಂದು ವೈಎಸ್‌ಆರ್‌ಸಿ ಆರೋಪಿಸಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಆಂಧ್ರಪ್ರದೇಶದಲ್ಲಿ ವೈಎಸ್‌ಆರ್‌ಸಿಯಿಂದ 8 ಸಂಸದರು ಗೆದ್ದಿದ್ದು, ಇಬ್ಬರು ಪಕ್ಷಾಂತರ ಮಾಡಿದ್ದರಿಂದ ಪಕ್ಷದ ಸಂಸದರ ಸಂಖ್ಯೆ ಆರಕ್ಕಿಳಿದಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry