ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಿಎಸ್‌ಟಿ: ತಾತ್ಕಾಲಿಕ ಅಡಚಣೆ ದೂರ’

Last Updated 17 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿ ನಿಟ್ಟಿನಲ್ಲಿನ ತಾತ್ಪೂರ್ತಿಕ ಅಡಚಣೆಗಳು ಸದ್ಯಕ್ಕೆ ದೂರವಾಗಿವೆ’ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಎಸ್‌. ಸಿ. ಗರ್ಗ್‌ ಅಭಿಪ್ರಾಯಪಟ್ಟಿದ್ದಾರೆ.

‘ಆಗಸ್ಟ್‌ ತಿಂಗಳಲ್ಲಿ ತಯಾರಿಕಾ ವಲಯವು ಶೇ 3.1ರಷ್ಟು ಬೆಳವಣಿಗೆ ದಾಖಲಿಸಿರುವುದೇ ಇದಕ್ಕೆ ಉತ್ತಮ ನಿದರ್ಶನವಾಗಿದೆ. ಅದಕ್ಕೂ ಹಿಂದಿನ ಎರಡು ತಿಂಗಳ ಅವಧಿಯಲ್ಲಿ ಈ ವಲಯವು ಕ್ರಮವಾಗಿ ಶೇ –0.5 ಮತ್ತು ಶೇ 0.3 ರಷ್ಟು ಋಣಾತ್ಮಕ ಬೆಳವಣಿಗೆ ದಾಖಲಿಸಿತ್ತು.

ಕೈಗಾರಿಕಾ ಉತ್ಪಾದನೆಯ ಪ್ರಗತಿ ಕೂಡ ಆಗಸ್ಟ್‌ನಲ್ಲಿ 9 ತಿಂಗಳ ಗರಿಷ್ಠ ಮಟ್ಟಕ್ಕೆ (ಶೇ 4.3) ತಲುಪಿದೆ. ಗಣಿಗಾರಿಕೆ ಮತ್ತು ವಿದ್ಯುತ್‌ ಉತ್ಪಾದನಾ ರಂಗದಲ್ಲಿನ ಉತ್ತಮ ಸಾಧನೆಯಿಂದ ಈ ಏರಿಕೆ ಸಾಧ್ಯವಾಗಿದೆ.

ಸದ್ಯಕ್ಕೆ ಹಣದುಬ್ಬರವೂ ಸಾಧಾರಣ ಮಟ್ಟದಲ್ಲಿ ಇದೆ. ಗ್ರಾಹಕ ಬೆಲೆ ಸೂಚ್ಯಂಕ ಆಧರಿಸಿದ ಹಣದುಬ್ಬರ ಶೇ 3.3 ಮತ್ತು ಆಹಾರ ಹಣದುಬ್ಬರ ಶೇ 1.8ರಷ್ಟು ಇದೆ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT