ಆರ್‌ಎಸ್‌ಎಸ್‌ ಮುಖಂಡನ ಹತ್ಯೆ

ಭಾನುವಾರ, ಮೇ 26, 2019
32 °C

ಆರ್‌ಎಸ್‌ಎಸ್‌ ಮುಖಂಡನ ಹತ್ಯೆ

Published:
Updated:
ಆರ್‌ಎಸ್‌ಎಸ್‌ ಮುಖಂಡನ ಹತ್ಯೆ

ಲೂಧಿಯಾನಾ ಮೋಟಾರ್‌ ಸೈಕಲ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಕೈಲಾಸನಗರದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಹಿರಿಯ ಮುಖಂಡ ರವೀಂದರ್‌ ಗೊಸೈನ್‌ ಅವರನ್ನು ಗುಂಡಿಕ್ಕಿ ಸಾಯಿಸಿದ್ದಾರೆ.

‘ಬೆಳಿಗ್ಗೆ ಆರ್‌ಎಸ್‌ಎಸ್‌ ಶಾಖೆ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಈ ದಾಳಿ ನಡೆದಿದೆ. ಗೊಸೈನ್‌ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ದಾಳಿಕೋರರು ಪರಾರಿಯಾಗಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಾಳಿಯನ್ನು ಆರ್‌ಎಸ್‌ಎಸ್‌ ನಗರ ಕಾರ್ಯದರ್ಶಿ ಯಶ್‌ಗಿರಿ ಅವರು ಖಂಡಿಸಿದ್ದು, ‘ಕೊಲ್ಲುವ ಉದ್ದೇಶದಿಂದಲೇ ಈ ದಾಳಿ ನಡೆಸಲಾಗಿದೆ’ ಎಂದು ಆರೋಪಿಸಿದ್ದಾರೆ.  ಸಂಘದ ಸಮವಸ್ತ್ರ ಧರಿಸಿಕೊಂಡು ಮನೆ ಒಳಗೆ ಪ್ರವೇಶಿಸುತ್ತಿದ್ದ ವೇಳೆಯೇ ಈ ದಾಳಿ ನಡೆದಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry