ಜಡೆಗೆ ಕತ್ತರಿ: ಕಾಶ್ಮೀರದಲ್ಲಿ ಪ್ರತಿಭಟನೆ

ಬುಧವಾರ, ಜೂನ್ 19, 2019
23 °C
ಪೊಲೀಸರ ಮೇಲೆ ಕಲ್ಲು ತೂರಿ ಆಕ್ರೋಶ

ಜಡೆಗೆ ಕತ್ತರಿ: ಕಾಶ್ಮೀರದಲ್ಲಿ ಪ್ರತಿಭಟನೆ

Published:
Updated:
ಜಡೆಗೆ ಕತ್ತರಿ: ಕಾಶ್ಮೀರದಲ್ಲಿ ಪ್ರತಿಭಟನೆ

ಶ್ರೀನಗರ: ಜಡೆಗೆ ಕತ್ತರಿ ಹಾಕುತ್ತಿರುವ ಪ್ರಕರಣಗಳನ್ನು ಖಂಡಿಸಿ ರಾಜಧಾನಿ ಶ್ರೀನಗರ ಸೇರಿದಂತೆ ಕಾಶ್ಮೀರದ ಹಲವು ಭಾಗಗಳಲ್ಲಿ ಮಂಗಳವಾರ ಪ್ರತಿಭಟನೆಗಳು ನಡೆದವು. 24 ಗಂಟೆಗಳಲ್ಲಿ ಇಂತಹ ಆರು ಘಟನೆಗಳು ನಡೆದಿವೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.

ಬೇಗ್‌ಪೋರದಲ್ಲಿ ಜಡೆಗೆ ಕತ್ತರಿ ಹಾಕಿದ ಘಟನೆಯಿಂದ ರೊಚ್ಚಿಗೆದ್ದ ಸ್ಥಳೀಯರು ರಾಮ್‌ಬಾಗ್–ನಾಟಿಪೋರ ರಸ್ತೆಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ಪಕ್ಕದ ಬರ್‌ಜುಲ್ಲಾ ಪ್ರದೇಶದಲ್ಲೂ ಪ್ರತಿಭಟನೆ ಜೋರಾಗಿತ್ತು. ಬಾಲಕಿಯೊಬ್ಬಳ ಜಡೆ ಕತ್ತರಿಸಿದ ಸಂಬಂಧ ದೂರು ಸ್ವೀಕರಿಸಲು ಪೊಲೀಸರು ನಿರಾಕರಿಸಿದ್ದಕ್ಕೆ ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಧರಣಿ ನಡೆಸಿದರು. ಗುಂಪು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿದರು.

ನಾರ್‌ಪರಿಸ್ತಾನದಲ್ಲಿ ಮಹಿಳೆಯರಿಬ್ಬರ ಜಡೆಗೆ ಅಪರಿಚಿತರು ಕತ್ತರಿ ಹಾಕಿದ್ದಕ್ಕೆ ರೊಚ್ಚಿಗೆದ್ದ ಜನರು ಪ್ರತಿಭಟನೆ ನಡೆಸಿದರು. ದಕ್ಷಿಣ ಕಾಶ್ಮೀರದ ಶೋಪಿಯಾನ್‌ನಲ್ಲೂ ಪ್ರತಿಭಟನೆ ನಡೆಯಿತು. ಪೊಲೀಸ್ ವಾಹನದ ಮೇಲೆ ಕಲ್ಲುತೂರಾಟ ನಡೆಸಲಾಯಿತು.

ಲಾಲ್‌ಚೌಕ್‌ನ ವಾಣಿಜ್ಯ ಕೇಂದ್ರವಾದ ಮೈಸುಮಾದಲ್ಲೂ ಪ್ರತಿಭಟನಾಕಾರರು ಪೊಲೀಸರತ್ತ ಕಲ್ಲು, ಬಾಟಲ್‌ಗಳನ್ನು ಎಸೆದರು. ಹೀಗಾಗಿ ಈ ಪ್ರದೇಶದಲ್ಲಿ ಅಂಗಡಿಗಳನ್ನು ಮುಚ್ಚಲಾಗಿತ್ತು. ವಾಹನಗಳ ಓಡಾಟವನ್ನು ಪೊಲೀಸರು ನಿರ್ಬಂಧಿಸಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry