ಪಾಕ್‌ ನೆಲದಲ್ಲಿ ಟಿ–20 ಪಂದ್ಯ ಆಡಲಿರುವ ಲಂಕಾ

ಮಂಗಳವಾರ, ಜೂನ್ 25, 2019
30 °C

ಪಾಕ್‌ ನೆಲದಲ್ಲಿ ಟಿ–20 ಪಂದ್ಯ ಆಡಲಿರುವ ಲಂಕಾ

Published:
Updated:

ಕೊಲಂಬೊ/ಕರಾಚಿ (ಪಿಟಿಐ): ಶ್ರೀಲಂಕಾ ತಂಡ ಪಾಕಿಸ್ತಾನದ ನೆಲದಲ್ಲಿ ಟಿ–20 ಪಂದ್ಯ ಆಡಲು ಸಮ್ಮತಿಸಿದೆ. ಈ ಹೋರಾಟ ಲಾಹೋರ್‌ನಲ್ಲಿ ಅಕ್ಟೋಬರ್‌ 29 ರಂದು ಜರುಗಲಿದೆ.

2009ರಲ್ಲಿ ಲಂಕಾ ತಂಡ ಪಾಕಿಸ್ತಾನ ಪ್ರವಾಸ ಕೈಗೊಂಡಿತ್ತು. ಆಗ ಆಟಗಾರರಿದ್ದ ಬಸ್‌ ಮೇಲೆ ಭಯೋತ್ಪಾದನಾ ದಾಳಿ ನಡೆದಿತ್ತು. ಆ ಘಟನೆಯ ನಂತರ ಸಿಂಹಳೀಯ ನಾಡಿನ ತಂಡ ಪಾಕಿಸ್ತಾನದಲ್ಲಿ ಯಾವುದೇ ಅಂತರರಾಷ್ಟ್ರೀಯ ಪಂದ್ಯ ಆಡಿರಲಿಲ್ಲ.

ಪ್ರಸ್ತುತ ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡಗಳು ದುಬೈನಲ್ಲಿ ಏಕದಿನ ಸರಣಿ ಆಡುತ್ತಿವೆ. ಇದು ಮುಗಿದ ನಂತರ ಟಿ–20 ಸರಣಿ ಆರಂಭವಾಗಲಿದ್ದು, ಮೊದಲ ಎರಡು ಪಂದ್ಯಗಳು ಅಬುಧಾಬಿಯ ಶೇಖ್‌ ಜಾಯದ್‌ ಕ್ರೀಡಾಂಗಣದಲ್ಲಿ ನಡೆಯಲಿವೆ. ಅಂತಿಮ ಪಂದ್ಯ ಆಡಲು ಉಪುಲ್‌ ತರಂಗ ಬಳಗ ಲಾಹೋರ್‌ಗೆ ತೆರಳಲಿದೆ.

ಪಾಕಿಸ್ತಾನದಲ್ಲಿ ಆಡಲು ಒಪ್ಪಿ ಒಟ್ಟು 40 ಆಟಗಾರರು ಸಹಿ ಮಾಡಿದ್ದು, ಈ ಪತ್ರವನ್ನು ಶ್ರೀಲಂಕಾ ಕ್ರಿಕೆಟ್‌ನ (ಎಸ್‌ಎಲ್‌ಸಿ) ಅಧ್ಯಕ್ಷ ತಿಲಂಗ ಸುಮತಿಪಾಲಾ ಅವರಿಗೆ ರವಾನಿಸಲಾಗಿದೆ.

ಈ ಸಂಬಂಧ ಎಸ್‌ಎಲ್‌ಸಿ, ಕಾರ್ಯಕಾರಿ ಮಂಡಳಿ ಸಭೆ ಕರೆದಿದ್ದು ಸಭೆಯಲ್ಲಿ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಒಕ್ಕೋರಲಿನಿಂದ ಒಪ್ಪಿಗೆ ಸೂಚಿಸುವ ಸಾಧ್ಯತೆ ಇದೆ.

ಸೂಕ್ತ ಭದ್ರತೆ ಒದಗಿಸುವುದಾಗಿ ಐಸಿಸಿ ಮತ್ತು ಪಿಸಿಬಿ ಭರವಸೆ ನೀಡಿದ ನಂತರ ಆಟಗಾರರು ಈ ನಿರ್ಧಾರಕ್ಕೆ ಬಂದಿದ್ದಾರೆ.

ಅಂತಿಮ ಟಿ–20 ‍ಪಂದ್ಯಕ್ಕೆ ಅಕ್ಟೋಬರ್ 20 ರಂದು ಎಸ್‌ಎಲ್‌ಸಿ 15 ಸದಸ್ಯರ ತಂಡವನ್ನು ಪ್ರಕಟಿಸಲಿದೆ.

‘ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸುವ ವಿಚಾರವಾಗಿ ಶ್ರೀಲಂಕಾ ಮತ್ತು ಪಾಕಿಸ್ತಾನದ ಸರ್ಕಾರಗಳ ಜೊತೆ ಚರ್ಚಿಸಿದ್ದೇವೆ. ಆಟಗಾರರಿಗೆ ಸೂಕ್ತ ಭದ್ರತೆ ಒದಗಿಸುವುದಾಗಿ ಪಿಸಿಬಿ ಕೂಡ ಭರವಸೆ ನೀಡಿದೆ. ಹೀಗಾಗಿ ಕಠಿಣ ತೀರ್ಮಾನ ಕೈಗೊಂಡಿದ್ದೇವೆ’ ಎಂದು ಎಸ್‌ಎಲ್‌ಸಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry